Advertisement

ಗೋವಾದಿಂದ ಕರ್ನಾಟಕ ಪ್ರವೇಶ: ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ತೀವ್ರ

04:12 PM Dec 01, 2021 | Team Udayavani |

ಪಣಜಿ: ಕರೋನಾ ರೂಪಾಂತರಿ ವೇರಿಯಂಟ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗೋವಾದಿಂದ ಕರ್ನಾಟಕ ಪ್ರವೇಶಿಸುವವರಿಗೆ ಮಾಜಾಳಿ ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು ಕೋವಿಡ್ ಡಬಲ್ ಡೋಸ್ ಪಡೆದವರಿಗೆ ಅಥವಾ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ.

Advertisement

ಕರ್ನಾಟಕದಿಂದ ಗೋವಾಕ್ಕೆ ಪ್ರತಿದಿನ ಪ್ರವಾಸಿಗರು ಮಾತ್ರವಲ್ಲದೆಯೇ ವಿವಿಧ ಉದ್ಯೋಗದಲ್ಲಿರುವವರು ಓಡಾಟ ನಡೆಸುತ್ತಾರೆ. ಗೋವಾದ ಹಲವು ಇಂಡಸ್ಟ್ರಿಗಳಿಗೆ ಕರ್ನಾಟಕದಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬಂದು ಹೋಗುತ್ತಾರೆ. ಆದರೆ ಮತ್ತೆ ಇದೀಗ ಕರೋನಾ ರೂಪಾಂತರಿಯ ಭೀತಿಯಿಂದಾಗಿ ಈ ಕಾರ್ಮಿಕರಲ್ಲಿ ಆತಂಕ ಹೆಚ್ಚುವಂತಾಗಿದೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರವಾಸಿಗರಿಗೆ ಕರ್ನಾಟಕ ಸರ್ಕಾರವು ತಪಾಸಣೆ ತೀವ್ರಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.