Advertisement
ಅವರು ಇಂದು ಭಾರತ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮತ್ತು ಗಣಿಗಾರಿಕೆ ವಲಯದಲ್ಲಿನ ಅವಕಾಶಗಳ ಕುರಿತ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
Related Articles
Advertisement
ಗಣಿಗಳ ರಚನೆಯೇ ನಮಗೆ ಅವುಗಳ ಅನ್ವೇಷಣೆಯ ವಿಧಾನದ ಬಗ್ಗೆ ಹಾಗೂ ಶೋಷಣೆ ಮಾಡಬಾರದು ಎಂಬ ಪಾಠ ಕಲಿಸುತ್ತವೆ. ಅನ್ವೇಷಣೆ ಮತ್ತು ಶೋಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಇದನ್ನು ಸಾಧಿಸಿದಾಗ ಸುಸ್ಥಿರತೆ ಸಾಧಿಸಬಹುದು. ಸುಸ್ಥಿರತೆ ಪ್ರಮುಖ ವಿಷಯವಾಗಿದ್ದು, ಈ ವಲಯದಲ್ಲಿ ಸುಸ್ಥಿರತೆಯನ್ನು ತರಬೇಕಿದೆ. ಅತ್ಯುತ್ತಮ ಗಣಿ ಸಂಸ್ಕೃತಿಯನ್ನು ಜಾರಿಗೆ ತರಬೇಕಿದೆ. 5 ಸಾವಿರಕ್ಕೂ ಹೆಚ್ವು ಜನರಿಗೆ ಉದ್ಯೋಗ ಕಲ್ಪಿಸುವ ಗಣಿಗಾರಿಕೆ ವಲಯ, ಸರ್ಕಾರಕ್ಕೂ ಆದಾಯ ತರಲಿದೆ. ಗಣಿಗಾರಿಕೆ ಸಂಸ್ಕೃತಿ. ಹೆಚ್ವಿನ ಚಿನ್ನ, ಗಣಿ ಹಾಗೂ ಪರಿಸರ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುತ್ತದೆ ಹಾಗೂ ಸುಸ್ಥಿರತೆಯನ್ನೂ ತರಲಿದೆ. ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡದಿದ್ದರೆ, ಉತ್ಪಾದನೆಯನ್ನು ಹೆಚ್ಚುಗೊಳಿಸಲಾಗುವುದಿಲ್ಲ ಹಾಗೂ ಭವಿಷ್ಯಕ್ಕೆ ಉಳಿಯುವುದೂ ಇಲ್ಲ. ಅನ್ವೇಷಣೆ ಮಾಡಿದರೆ ದೇಶ ಹಾಗೂ ದೇಶದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಶೋಷಣೆ ಮಾಡಿದರೆ ಭವಿಷ್ಯದಿಂದ ಕಳುವು ಮಾಡಿದಂತಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ದಾರ್ಶನಿಕ. ಅವರ ಗುರಿಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಅವರು ಹಿಂದಿನ ಆಳ್ವಿಕೆಗಳ ತಪ್ಪುಗಳ ಬಗ್ಗೆ ಮಾಹಿತಿ ಇದೆ. ಆದ್ದರಿಂದ ನೂತನ ಗಣಿ ನೀತಿಯನ್ನು ಜಾರಿಗೆ ತಂದು ಗರಿಷ್ಠ ಉತ್ಪಾದನೆ ಹಾಗೂ ಸುಸ್ಥಿರತೆಯನ್ನು ತಂದಿದ್ದಾರೆ. ಪಾರದರ್ಶಕ, ವೈಜ್ಞಾನಿಕ ರೀತಿಯಲ್ಲಿ ಗಣಿಕಾರಿಕೆ ಕೈಗೊಳ್ಳಲು ನೂತನ ವಿಧಾನ, ಯಂತ್ರಗಳು ಬಂದಿವೆ. ಗಣಿಕಾರಿಕೆಯನ್ನು ವೃತ್ತಿಯಾಗಿ ಕೈಗೆತ್ತಿಕೊಳ್ಳಲು ಇದು ಸಕಾಲ. ಈ ರೀತಿಯ ವಾತಾವರಣ 7-8 ವರ್ಷಗಳ ಹಿಂದೆ ಇರಲಿಲ್ಲ ಎಂದರು.
ಇದನ್ನೂ ಓದಿ:ಶಾರಿಕ್ ಸಹಚರರ ಮಾಹಿತಿ ಸಂಗ್ರಹಕ್ಕಾಗಿ ಶಿವಮೊಗ್ಗಕ್ಕೆ ಎನ್ಐಎ ತಂಡ ಭೇಟಿ
ಇಂಧನ ದೇಶದ ಅಭಿವೃದ್ದಿಗೆ ಪೂರಕವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿರುವ ಇತಿಮಿತಿಗಳನ್ನು ಮೀರಿ ಕ್ಷೇತ್ರ ಬೆಳೆಯುತ್ತಿದೆ. ಕರ್ನಾಟಕ 2.5 ಕೋಟಿ ರೂ ಮುಂದಿನ 3 ವರ್ಷದಲ್ಲಿ ನವೀಕರಣ ಇಂಧನದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಕರ್ನಾಟಕ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ರಾಜ್ಯವಾಗಿದೆ. ಹೈಡ್ರೋಜನ್ ಇಂಧನ ಹಾಗೂ ಕಡಲಿನಿಂದ ಅಮೋನಿಯಾ ಉತ್ಪಾದನೆಗೆ 2 ಲಕ್ಷಕ್ಕಿಂತಲೂ ಹೆಚ್ವಿನ ಹೂಡಿಕೆ ಆಗುತ್ತಿದೆ. ಸಮೃದ್ಧ ಗಣಿಮೂಲಗಳನ್ನು ಹೊಂದಿರುವ ರಾಜ್ಯ ನಮ್ಮದು. ಚಿನ್ನ, ಬ್ರೋಮೈಡ್, ನಿಕಲ್ ಮುಂತಾದ ಖನಿಜಗಳನ್ನು ಹೊಂದಿದೆ. ನಾವು ಉತ್ತಮ ಗಣಿ ನೀತಿ ಹೊಂದಿದ್ದೇವೆ. ಸರ್ಕಾರ ಹೂಡಿಕೆದಾರರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಭರವಸೆ ನೀಡಿದರು.
ಕಲ್ಲಿದ್ದಲು ಹಾಗು ಕಬ್ಬಿಣ ಮತ್ತು ಉಕ್ಕು ಅತ್ಯಂತ ಮಹತ್ವದ ಗಣಿ ಉದ್ಯಮಗಳಾಗಿವೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ದೇಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ಕೇಂದ್ರ ಗಣಿ ಸಚಿವ ಪ್ರಹ್ಲಾದಜೋಶಿ ಅವರ ನೇತೃತ್ವದಲ್ಲಿ ನಾಲ್ಕೈದು ವರ್ಷಗಳಲ್ಲಿ ಕಲ್ಲಿದ್ದಿಲಿನ ಉತ್ಪಾದನೆ ಹೆಚ್ಚಾಗಿದೆ ಎಂದರು. 500 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆಯನ್ನು ಮುಂದಿನ 3- 4 ವರ್ಷಗಳಲ್ಲಿ ಮಾಡಲಿದ್ದು, ಉತ್ಪಾದನೆ ಶೀಘ್ರವೇ ಪ್ರಾರಂಭವಾಗಲಿದೆ. ಕಲ್ಲಿದ್ದಲು ಗಣಿಗಾರಿಕೆಯ ಇತಿಹಾಸದಲ್ಲಿಯೇ ಇದು ಅತ್ಯಂತ ಹೆಚ್ಚಿನ ಉತ್ಪಾದನೆಯಾಗಲಿದೆ. ಇದಕ್ಕಾಗಿ ಅವರನ್ನು ಅಭಿನಂದಿಸಿದರು.
ಗಣಿಗಾರಿಕೆಯಲ್ಲಿ ಗರಿಷ್ಠ ಉತ್ಪಾದನೆ: ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಇದು ನಮಗೆ ಸಹಾಯಕವಾಗಲಿದೆ. ಭಾರತವನ್ನು ಆರ್ಥಿಕತೆಯ ಶಕ್ತಿ ಕೇಂದ್ರವಾಗಿಸಲು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಗರಿಷ್ಠ ಉತ್ಪಾದನೆಯನ್ನು ನಿಗದಿತ ಸಮಯದಲ್ಲಿ ಮಾಡಬೇಕಿದೆ. ಕಬ್ಬಿಣ ಮತ್ತು ಉಕ್ಕಿನ ಗಣಿಗಾರಿಕೆ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು, ಅದರಂತೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಹರಾಜು ಪ್ರಕ್ರಿಯೆಯನ್ನು ದಕ್ಷ ಹಾಗೂ ಪಾರದರ್ಶಕವಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಹರಾಜು ಪ್ರಕ್ರಿಯೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳುವ ಭರವಸೆ ಇದೆ. 16 ಬ್ಲಾಕ್ ಗಳ ಹರಾಜು ಪ್ರಕ್ರಿಯೆ ತಕ್ಷಣದಲ್ಲಿ ಆಗಲಿದ್ದು ಇನ್ನೂ 25 ಬ್ಲಾಕ್ ಗಳ ಹರಾಜು ಶೀಘ್ರವೇ ಆಗಲಿದೆ ಎಂದರು.