ಬೆಂಗಳೂರು: ಎಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಪಶು ವೈದ್ಯ ಮತ್ತು ಫಾರ್ಮಾ ಸೈನ್ಸ್ ಕೋರ್ಸ್‌ಗಳಿಗೆ ಅಣಕು ಸೀಟುಗಳ ಹಂಚಿಕೆ ವಿಧಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸಿಇಟಿ-2019ರ ಅಭ್ಯರ್ಥಿಗಳು ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ಅಣಕು ಸೀಟು ಹಂಚಿಕೆ ಮಾಡಿ ಫಲಿತಾಂಶವನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಿದ ನಂತರ ತಮ್ಮ ಇಚ್ಛೆ/ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಾಯಿಸಬಹುದು. ಸೇರ್ಪಡೆ ಕೂಡ ಮಾಡಬಹುದು ಇಲ್ಲವೇ ತೆಗೆದು ಹಾಕಲು ಅವಕಾಶ ಕಲ್ಪಿಸಿದೆ. ನಿಗದಿತ ಸಮಯದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್ //keakar.nic.in ಗೆ ಭೇಟಿ ನೀಡಬಹುದು.
Advertisement