Advertisement
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಸಾಧನೆ, ಕೋರ್ಸ್‍ಗಳು, ಪ್ರವೇಶದ ಅವಕಾಶಗಳ ಕುರಿತು ವಿವರಿಸಿದ ಅವರು, ರಾಜ್ಯದಲ್ಲಿ ದೂರ ಶಿಕ್ಷಣ ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯ ನಮ್ಮದು ಮಾತ್ರ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ನೀಡುವ ಶೈಕ್ಷಣಿಕ ಕ್ರಮಗಳ ಪದವಿಗೆ ದೂರ ಶಿಕ್ಷಣದ ಮೂಲಕ ಪಡೆಯುವ ನಮ್ಮ ಪದಿವಿಗಳೂ ಸಮಾನವಾಗಿವೆ ಎಂದರು.
Related Articles
Advertisement
ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ಹಾಗೂ ಆನ್‍ಲೈನ್ ಮೂಲಕವೇ ವಿಶ್ವವಿದ್ಯಾಲಯದ ಎಲ್ಲ ಶುಲ್ಕಗಳನ್ನು ಭರಿಸಬೇಕಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಜನವರಿ ಹಾಗೂ ಜುಲೈ ಹೀಗೆ ವಾರ್ಷಿಕ ಎರಡು ಬಾರಿ ಪ್ರವೇಶ ಕಲ್ಪಿಸಲಾಗುತ್ತದೆ. 2023-34ನೇ ಸಾಲಿನ ಮೊಲದ ಹಂತದ ಜನವರಿ ಆವೃತ್ತಿಯ ಪ್ರವೇಶಕ್ಕೆ ಮಾರ್ಚ್ 31 ಕೊನೆ ದಿನ. ವಿವಿಧ ವಿಷಯಗಳ ಸಂಯೋಜನೆ ಹೊಂದಿರುವ ಪದವಿಗಳ ಸ್ನಾತಕ-ಸ್ನಾತಕೋತ್ತರ, ಸಂಶೋಧನಾ ಪಿಎಚ್‍ಡಿ ಮಾತ್ರವಲ್ಲದೇ ವಿವಿಧ ವಿಷಯಗಳ ಸರ್ಟಿಫಿಕೇಟ್ ಕೋರ್ಸ್‍ಗಳನ್ನೂ ನೀಡಲಾಗುತ್ತದೆ ಎಂದರು.
ನಮ್ಮ ವಿಶ್ವವಿದ್ಯಾಲಯದಿಂದಲೇ ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಚಿವೆ ಉಮಾಶ್ರೀ, ಸಿ.ಟಿ.ರವಿ ಅವರಂಥ ನಾಯಕರೂ ಸ್ನಾತಕೋತ್ತರ, ಸಂಶೋಧನಾ ಮಹಾಪ್ರಬಂಧ ಮಂಡಿಸುವ ಮೂಲಕ ಪಿಎಚ್‍ಡಿ ಪದವಿಗಳನ್ನೂ ಪಡೆದಿದ್ದಾರೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಹಲವರು ಕೇಂದ್ರ-ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿ, ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಇಲ್ಲದ ಕೋಸ್‍ಗಳಲ್ಲೂ ಅಧ್ಯಯನ ಮಾಡಲು ಪ್ರತಿಷ್ಠಿತಿ ಇತರೆ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲೂ ಯೋಜಿಸಿದ್ದೇವೆ. ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಭಾಗವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಡಿಜಿಟಲ್ ಮೌಲ್ಯಮಾಪನದ ಮೂಲಕ ಗುಣಮಟ್ಟದ ಮೌಲ್ಯಮಾಪನ, ಶೀಘ್ರ ಫಲಿತಾಂಶ ಪ್ರಕಟಣೆಗೆ ಅನುಕೂಲ ಕಲ್ಪಿಸಲಾಗಿದೆ. ಪ್ರಸಾರಾಂಗ, ರೇಡಿಯೋ ಸೌಲಭ್ಯವೂ ಇದೆ ಎಂದು ವಿವರಿಸಿದರು.
ವಿಜಯಪುರ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಡಿ.ಎಸ್.ಮೈತ್ರಿ, ಧಾರವಾಡ ಪ್ರಾದೇಶಿಕ ಕೇಂದ್ರದ ನಿರ್ದೇಶಕ ರಾಘವೇಂದ್ರ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.