Advertisement
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಗುಂಪುಗಾರಿಕೆ ರಾಜಕಾರಣ ನಿಲ್ಲಬೇಕಿದ್ದು, ನಮ್ಮ ಗುಂಪುಗಾರಿಕೆಯಿಂದಲೇ ನಾವು ಚುನಾವಣೆ ಸೋತಿದ್ದು. ಹೀಗಾಗಿ ಡೈರಿ ಬರೆದು ಟಾರ್ಗೆಟ್ ಮಾಡವರನ್ನು ಸಂಘಟನೆ ಯಿಂದ ದೂರವಿಡಿ, ಆಗ ರಾಜ್ಯದಲ್ಲಿ ಪಕ್ಷ ಉದ್ದಾರ ಆಗುತ್ತದೆ. ಈ ಬಗ್ಗೆ ನಾನು ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದೇನೆ ಎಂದರು. ಮೊದಲು ಅಸಮಾಧಾನ ಇರುವರನ್ನು ಮನವೊಲಿಸಿ, ಸೋಮಣ್ಣ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ಭೇಟಿ ಮಾಡಿದ ಬಳಿಕ ಮಠ-ಮಂದಿರಕ್ಕೆ ಹೋಗಿ ಎಂದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸದಾನಂದಗೌಡ, ”ನನ್ನ ರಾಜಕೀಯ ಜೀವನದಲ್ಲಿ ಇತಂಹ ಸರಕಾರ ನೋಡಿಲ್ಲ. ನಾನು ಎಲ್ಲಾ ರೀತಿಯ ಅಧಿಕಾರಿ ಅನುಭವಿಸಿದ್ದೇನ, ಆದರೆ ಈ ರೀತಿಯ ಸರಕಾರ ನೋಡಿಲ್ಲ. ಇದು ಕರ್ನಾಟಕದ ಜನರ ಪಾಪಕ್ಕೆ ಬಂದ ಸರಕಾರವಾಗಿದ್ದು, ಯಾವುದೇ ಕೆಲಸಗಳು ಆಗುತ್ತಿಲ್ಲ” ಎಂದು ಟೀಕಿಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಸಿಬಿಐ ತನಿಖೆ ಹಿಂಪಡೆದ ನಿರ್ಧಾರದ ಬಗ್ಗೆ ಮಾತನಾಡಿ, ”ನಾನೂ ಕಾನೂನು ಮಂತ್ರಿಯಾಗಿದ್ದವನು, ಈ ರೀತಿಯ ಕೆಲಸ ಸರಕಾರ ಮಾಡಬಾರದು. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ತೃಪ್ತಿ ಇಲ್ಲ” ಎಂದರು.