Advertisement
ಇಂಡೋ ಇಂಟರ್‌ನ್ಯಾಷನಲ್ ಕಬಡ್ಡಿ ಲೀಗ್ (ಐಐಪಿಕೆಎಲ್) ನಂತಹ ದೊಡ್ಡ ಬಂಡಾಯ ಕೂಟ ಹುಟ್ಟು ಹಾಕಿ, ಪ್ರೊ ಕಬಡ್ಡಿಗೆ ಸೆಡ್ಡು ಹೊಡೆದಿದ್ದ ಪ್ರಸಾದ್ ಬಾಬು ಭಾರತದ ಕಬಡ್ಡಿಯಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸಿದ್ದರು. ಇದೀಗ ರಾಜ್ಯ ಕಬಡ್ಡಿ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.
Related Articles
Advertisement
ಉದ್ಯೋಗಕ್ಕೆ ಮೊದಲ ಆದ್ಯತೆ: “ಕಬಡ್ಡಿ ಆಟಗಾರರಲ್ಲಿ ಹೆಚ್ಚಿನವರಿಗೆ ಉದ್ಯೋಗವಿಲ್ಲ, ಬಡತನದ ಹಿನ್ನೆಲೆಯಿಂದ ಬಂದ ಆಟಗಾರರನ್ನು ತೀರ ನಿರ್ಲಕ್ಷ್ಯವಾಗಿ ಕಾಣಲಾಗುತ್ತಿದೆ. ಮೊದ ಲಿಗೆ ಎಲ್ಲ ರೀತಿಯ ತಾರತಮ್ಯಗಳು ದೂರ ವಾಗಬೇಕು, ಕಬಡ್ಡಿ ಬೆಳೆಯಬೇಕು, ಆಟಗಾರರ ನೇಮಕಾತಿ ವಿಷಯದಲ್ಲಿ ಪಾರದರ್ಶ ಕತೆ ಅತ್ಯಗತ್ಯ, ಹಣ ಕೊಟ್ಟವರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗುವ ಪರಂಪರೆ ದೂರವಾಗಬೇಕು’
ಪ್ರೊ ಕಬಡ್ಡಿ ವಿರೋಧಿಯಲ್ಲಪ್ರೊ ಕಬಡ್ಡಿ ವಿರೋಧಿ ನಾನಲ್ಲ ಎಂದು ಪ್ರಸಾದ್ ಬಾಬು ಸ್ಪಷ್ಟಪಡಿಸಿದ್ದಾರೆ. “ಪ್ರೊ ಕಬಡ್ಡಿಯಿಂದ ಹಲವಾರು ಆಟಗಾರರಿಗೆ ಒಳ್ಳೆಯ ಅವಕಾಶ, ಭವಿಷ್ಯ ಸಿಕ್ಕಿದೆ. ಇದರಿಂದ ದೇಶದ, ರಾಜ್ಯದ ಕಬಡ್ಡಿ ಪಟುಗಳಿಗೆ ಒಳ್ಳೆಯದೇ ಆಗಿದೆ ಎಂದ ಮೇಲೆ ಅದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಇಂತಹ ಇನ್ನಷ್ಟು ಲೀಗ್‌ಗಳನ್ನು ಆರಂಭಿಸಲು ಪ್ರೋತ್ಸಾಹಿಸುವ ಅಗತ್ಯವಿದೆ. ಇದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ’ ಎಂದು ತಿಳಿಸಿದರು. ಹಿಂದೆ ಪ್ರಸಾದ್ ಬಾಬು ಪ್ರೊ ಕಬಡ್ಡಿಗೆ ಪರ್ಯಾಯವಾಗಿ ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಲೀಗ್ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಯಾರಿವರು?: ಪೂರ್ಣ ಹೆಸರು ಪ್ರಸಾದ್ ಬಾಬು, ಕಬಡ್ಡಿ ಕ್ಷೇತ್ರದಲ್ಲಿ ಕಬಡ್ಡಿ ಬಾಬು ಎಂದೇ ಜನಪ್ರಿಯ. 1976ರಲ್ಲಿ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 1979ರಲ್ಲಿ ದಕ್ಷಿಣ ವಲಯ ಕೂಟದಲ್ಲಿ ಭಾಗವಹಿಸಿದ್ದರು, ಮೊದಲ ಬಾರಿಗೆ ನಾಯಕರಾಗಿ ಈ ಕೂಟದಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದರು. 1980ರಲ್ಲಿ ಬಿಇಎಲ್ ತಂಡಕ್ಕೆ ಆಯ್ಕೆಯಾದರು. ಜಪಾನ್‌ನಲ್ಲಿ ಏಷ್ಯನ್ ಕೂಟ ಸೇರಿದಂತೆ ಹಲವಾರು ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ತಂಡವನ್ನು ಮೂರು ಸಲ ನಾಯಕರಾಗಿ ಮುನ್ನಡೆಸಿರುವ ಹೆಗ್ಗಳಿಕೆ ಹೊಂದಿದ್ದಾರೆ.