Advertisement
ಪರೀಕ್ಷೆ ಬರೆದಿದ್ದ 8,38,088 ವಿದ್ಯಾರ್ಥಿ ಗಳಲ್ಲಿ 6,02,802 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಶೇ. 4.06ರಷ್ಟು ಹೆಚ್ಚಳವಾಗಿದೆ. ಶೈಕ್ಷಣಿಕ ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ, ಉತ್ತರ ಕನ್ನಡ, ಚಿಕ್ಕೋಡಿ ಹಾಗೂ ದಕ್ಷಿಣ ಕನ್ನಡ ಕ್ರಮವಾಗಿ ಮೊದಲ 4 ಸ್ಥಾನ ಪಡೆದಿವೆ. ಬೀದರ್ ಹಾಗೂ ಯಾದಗಿರಿ ಕೊನೆಯ ಎರಡು ಸ್ಥಾನಕ್ಕೆ ಇಳಿದಿವೆ.
Related Articles
– ಎಂ.ಎಸ್.ಯಶಸ್
Advertisement
ಶಾಲೆಯ ಪಾಠದ ಜತೆಗೆ ಟ್ಯೂಷನ್‌ಗೆ ಹೋಗುತ್ತಿದ್ದೆ. 625ಕ್ಕೆ 625 ಅಂಕ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಐಐಟಿಯಲ್ಲಿ ಅಧ್ಯಯನ ನಡೆಸಬೇಕೆಂಬ ಬಯಕೆ ಇದೆ.– ಸುದರ್ಶನ್ ಪೂರಕ ಪರೀಕ್ಷೆ :
ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ.19ರ ತನಕ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಹಾಗೆಯೇ ಅಂಕಗಳ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಮೇ 8ರಿಂದಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೂರಕ ಪರೀಕ್ಷೆ ವೇಳಾಪಟ್ಟಿ:
ಜೂ.21ಕ್ಕೆ ಗಣಿತ
ಜೂ.22ಕ್ಕೆ ಪ್ರಥಮ ಭಾಷೆ(ಕನ್ನಡ, ತೆಲಗು, ಹಿಂದಿ ಇತ್ಯಾದಿ)
ಜೂ.25ಕ್ಕೆ ವಿಜ್ಞಾನ
ಜೂ.26ಕ್ಕೆ ದ್ವಿತೀಯ ಭಾಷೆ(ಇಂಗ್ಲಿಷ್, ಕನ್ನಡ)
ಜೂ.27ಕ್ಕೆ ಸಮಾಜ ವಿಜ್ಞಾನ
ಜೂ.28ಕ್ಕೆ ತೃತೀಯ ಭಾಷೆ(ಹಿಂದಿ, ಕನ್ನಡ, ತಮಿಳು, ಇಂಗ್ಲಿಷ್ ಇತ್ಯಾದಿ) ಪರೀಕ್ಷಾ ಮಂಡಳಿಯಿಂದ ತೆಗೆದುಕೊಂಡ ಹಲವು ಕ್ರಮಗಳಿಂದಾಗಿ ಫಲಿತಾಂಶದಲ್ಲಿ ಏರಿಕೆಯಾಗಿದೆ. ಆನ್‌ಲೈನ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದ್ದೇವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಇರುತ್ತದೆ. ಹೀಗಾಗಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ.
– ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ರೆಗ್ಯೂಲರ್ ವಿದ್ಯಾರ್ಥಿಗಳ ಫಲಿತಾಂಶ
ಶಾಲೆ ಶಾಲೆಗಳ ಸಂಖ್ಯೆ ಹಾಜರಾದವರು ತೇರ್ಗಡೆ ಫಲಿತಾಂಶ
ಸರ್ಕಾರಿ 5,191 2,85,594 2,14,545 75.12
ಅನುದಾನಿತ 3,269 2,08,227 1,58,819 76.27
ಅ.ರಹಿತ 5,927 2,50,640 2,08,154 83.05
ಒಟ್ಟು 14,387 7,44,461 5,81,518 78.11 ಲಿಂಗವಾರು ಫಲಿತಾಂಶ
ವಿಭಾಗ ಹಾಜರಾತಿ ಉತ್ತೀರ್ಣ ಫಲಿತಾಂಶ
ಬಾಲಕರು 4,45,402 2,96,475 66.56
ಬಾಲಕಿಯರು 3,92,686 3,06,327 78.01 ನಗರ ಮತ್ತು ಗ್ರಾಮಾಂತರ ಫಲಿತಾಂಶ
ಪ್ರದೇಶ ಹಾಜರಾತಿ ತೇರ್ಗಡೆ ಫಲಿತಾಂಶ
ನಗರ 3,76,191 2,60,998 69.38
ಗ್ರಾಮಾಂತರ 4,61,897 3,41,804 74.00 ಮಾಧ್ಯಮವಾರು ಸಾಧನೆ
ಮಾಧ್ಯಮ ಹಾಜರಾತಿ ಉತ್ತೀರ್ಣ ಫಲಿತಾಂಶ
ಕನ್ನಡ 5,10,949 3,43,999 67.33
ಇಂಗ್ಲಿಷ್ 2,88,202 2,34,099 81.23
ಉರ್ದು 25,465 14,589 57.29
ಮರಾಠಿ 12,773 9,689 75.86
ತೆಲುಗು 343 224 65.31
ತಮಿಳು 171 85 49.71
ಹಿಂದಿ 185 117 63.24 10 ವರ್ಷಗಳ ಶೇಕಡಾವಾರು ಫಲಿತಾಂಶ:
ವರ್ಷ ಶೇ.ಫಲಿತಾಂಶ
2009 70.22
2010 66.81
2011 73.90
2012 76.13
2013 77.47
2014 81.20
2015 81.82
2016 75.11
2017 67.87
2018 71.93 ಶೇ.100 ಮತ್ತು ಶೂನ್ಯ ಫಲಿತಾಂಶದ ಶಾಲೆಗಳು
ಶಾಲೆ ಶೇ.100 ಶೂನ್ಯ
ಸರ್ಕಾರಿ 102 6
ಅನುದಾನಿತ 414 2
ಅ.ರಹಿತ 826 35
ಒಟ್ಟು 1,342 43 ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಅಂಕ ವಿದ್ಯಾರ್ಥಿಗಳ ಸಂಖ್ಯೆ
625 2
624 8
623 12
622 22
621 35
620 39 ಜಿಲ್ಲಾವಾರು ಫಲಿತಾಂಶ ಮತ್ತು ಸ್ಥಾನ
ಸ್ಥಾನ ಜಿಲ್ಲೆ
1 ಉಡುಪಿ
2 ಉತ್ತರ ಕನ್ನಡ
3 ಚಿಕ್ಕೋಡಿ
4 ಮಂಗಳೂರು
5 ಮಧುಗಿರಿ
6 ಬೆಳಗಾವಿ
7 ಹಾಸನ
8 ಕೋಲಾರ
9 ವಿಜಯಪುರ
10 ತುಮಕೂರು
11 ಮೈಸೂರು
12 ಬಳ್ಳಾರಿ
13 ಧಾರವಾಡ
14 ಬೆಂ.ಗ್ರಾಮಾಂತರ
15 ದಾವಣಗೆರೆ
16 ಚಿತ್ರದುರ್ಗ
17 ರಾಮನಗರ
18 ಕೊಡಗು
19 ಕೊಪ್ಪಳ
20 ಶಿವಮೊಗ್ಗ
21 ಶಿರಸಿ
22 ಬೆಂಗಳೂರು ಉತ್ತರ
23 ಹಾವೇರಿ
24 ಚಾಮರಾಜನಗರ
25 ಬಾಗಲಕೋಟೆ
26 ಚಿಕ್ಕಮಗಳೂರು
27 ಬೆಂಗಳೂರು ದಕ್ಷಿಣ
28 ಮಂಡ್ಯ
29 ರಾಯಚೂರು
30 ಕಲಬುರಗಿ
31 ಚಿಕ್ಕಬಳ್ಳಾಪುರ
32 ಗದಗ
33 ಬೀದರ್
34 ಯಾದಗಿರಿ