Advertisement
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ಯ ಅಂಗವಾಗಿ ಆಯೋಜಿಸಿದ್ದ ನೊಂದಾಯಿತ ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಪ್ರವಾಸೋದ್ಯಮ ನೀತಿ 2020-26ರ (ಪರಿಷ್ಕತ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ”ರಾಜ್ಯಕ್ಕೆ ಆಗಮಿಸುತ್ತಿರುವ 30 ಲಕ್ಷ ಪ್ರವಾಸಿಗರನ್ನು ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಗೆ ಮುಟ್ಟಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು. ರಾಜ್ಯದಲ್ಲಿ ಪ್ರವಾಸಿಗರ ಹೆಜ್ಜೆಗಳನ್ನು ಹೆಚ್ಚಿಸಬೇಕು. ವಿದೇಶಿಯರನ್ನು ಆಕರ್ಷಿಸಿ, ಸ್ಥಳೀಯರಿಗೆ ಕೆಲಸ ಕೊಡಬೇಕು”ಎಂದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಕನಕದಾಸರು ಹುಟ್ಟಿದ್ದು, ಶಿಶುನಾಳ ಶರೀಫರ ಕರ್ಮಭೂಮಿಯಾಗಿದ್ದರೂ ಅಲ್ಲಿ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ಅಲ್ಲಿನ ಪುರಾತತ್ವ ಇಲಾಖೆ ವತಿಯಿಂದ ಉತ್ಖನನ ಮಾಡಿಸಿದ ನಂತರ ಅದು ಒಂದು ಸಣ್ಣ ಅರಮನೆ ಎಂದು ತಿಳಿಸಿದರು. ಅಲ್ಲಿ ಕನಕದಾಸರ ಕೋಟೆ ಮತ್ತು ಅರಮನೆ ಎರಡನ್ನೂ ಕಟ್ಟಲಾಗಿದೆ. 4 ಡಿ ಸ್ಟುಡೀಯೋ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡು ಕನಕದಾಸರನ್ನು ಅಲ್ಲಿ ಜೀವಂತವಾಗಿರಿಸಲಾಗಿದೆ. ಈಗ ಸಾವಿರಾರು ಜನ, ವಿಶೇಷವಾಗಿ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಬರುತ್ತಾರೆ. ಮಹಾರಾಷ್ಟ್ರ, ಆಂಧ್ರ ಎಲ್ಲೆಡೆಗಳಿಂದ ಅಲ್ಲಿಗೆ ಪ್ರವಾಸಿಗರು ಬರುತ್ತಾರೆ” ಎಂದರು. ಸಚಿವ ಆನಂದ್ ಸಿಂಗ್ ಅವರು ಬಂದ ನಂತರ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಯಾಣ, ಚಿಕ್ಕಮಗಳೂರಗಳಲ್ಲಿ ರೋಪ್ ವೇ, ಹೋಟೇಲುಗಳನ್ನು ಪುನಶ್ಚೇತನ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ, ಎರಡು ಸರ್ಕಿಟ್ ಗಳನ್ನು ರೂಪಿಸಲಾಗಿದೆ. ಸಿ.ಆರ್ ಝೆಡ್ ಸಾಧನೆ ಅದ್ಭುತವಾಗಿದೆ. ಅದರಲ್ಲಿ ಆನಂದ್ ಸಿಂಗ್ ಅವರ ಪಾತ್ರ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಇದರ ಉಪಯೋಗ ಪಡೆಯೋಣ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವನ್ನು ಕೈಗೊಳ್ಳುವ ಕೆಲಸಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುವುದು ಎಂದರು.
Related Articles
ಪ್ರವಾಸಿ ಮಾರ್ಗದರ್ಶಿಗಳು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸುಳ್ಳು ಹೇಳುವುದು, ಬಂದವರಿಗೆ ದಾರಿ ತಪ್ಪಿಸುವುದು ಮಾಡಬಾರದು. ಕರ್ನಟಕದ ಪ್ರವಾಸಿ ಮಾರ್ಗದರ್ಶಿಗಳೆಂದರೆ ನಂಬರ್ ಒನ್ ಆಗಬೇಕು. ವಿಶ್ವಾಸಪೂರ್ವಕವಾಗಿರಬೇಕು. ಅವರು ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ನಿಮ್ಮ ನಡೆ ನುಡಿ ಇರಬೇಕು ಎಂದು ಕಿವಿಮಾತು ಹೇಳಿದರು.
Advertisement
ಒಟ್ಟಾರೆ ಪ್ರವಾಸೋದ್ಯಮ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ನಮ್ಮ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಬಳಸುವಂತಾಗಬೇಕು. ಸರ್ಕಾರ ನಿಮ್ಮ ಜೊತೆಗಿದೆ. ಹೋಟೇಲು ಉದ್ಯಮಕ್ಕೆ ಬಹಳ ಅವಕಾಶಗಳಿವೆ. ಆನಂದ್ ಸಿಂಗ್ ಅವರು ಹಂಪಿ, ಬಾದಾಮಿ, ಬೇಲೂರಿನಲ್ಲಿ ತ್ರಿ ಸ್ಟಾರ್ ಹೋಟೇಲುಗಳನ್ನು ಪ್ರಾರಂಭಿಸಿದ್ದಾರೆ. ಬಹಳಷ್ಟು ಅಭಿವೃದ್ಧಿಯಾಗುತ್ತಿದ್ದು, ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು. ನಮ್ಮ ಕನ್ನಡದ ಹುಡುಗರಿಗೆ ಕೆಲಸ ಸಿಗಬೇಕು. ಪ್ರವಾಸೋದ್ಯಮದಲ್ಲಿ ಕರ್ನಾಟಕ ಜಗತ್ಪ್ರಸಿದ್ಧವಾಗಬೇಕು ಎನ್ನುವುದೇ ನನ್ನ ಅಭಿಲಾಷೆ. ಈ ಬಗ್ಗೆ ಸಂಕಲ್ಪವನ್ನು ಮಾಡಿ ನಾವು ಮುಂದುವರೆಯೋಣ ಎಂದರು.
ಪ್ರವಾಸೋದ್ಯಮದಿಂದ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿ”ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆಯನ್ನು ತಂದಿದೆ. ವಿಶ್ವದ ಹತ್ತು ಹಲವು ದೇಶಗಳಲ್ಲಿ ಪ್ರವಾಸೋದ್ಯಮವೇ ಪ್ರಮುಖ ಉದ್ಯಮವಾಗಿ ಹೊರಹೊಮ್ಮಿದೆ. ಭಾರತ ದೇಶದಲ್ಲಿಯೂ ಪ್ರವಾಸೋದ್ಯಮ ಉದ್ದಿಮೆಯಾಗಿ ಬೆಳೆಯುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಮೂಲಭೂತಸೌಕರ್ಯಗಳ ಅಭಿವೃದ್ಧಿಗೊಳಿಸುವುದು ಸರ್ಕಾರ ಹಾಗೂ ಖಾಸಗಿ ವಲಯದ ಕರ್ತವ್ಯವಾಗುತ್ತದೆ. ಪ್ರವಾಸಿಗರು ಉತ್ತಮ ವಸತಿ, ಸಾರಿಗೆ, ಆಹಾರ ಸೇರಿದಂತೆ ಉತ್ತಮ ಸೇವೆಗಳನ್ನು ಬಯಸುತ್ತಾರೆ. ಪ್ರವಾಸೋದ್ಯಮದಿಂದ ಅತಿ ಹೆಚ್ಚಿನ ಉದ್ಯೋಗಸೃಷ್ಟಿಯೂ ಸಾಧ್ಯವಾಗುತ್ತಿದೆ. ಕರ್ನಾಟಕದ ಪ್ರವಾಸೋದ್ಯಮ ರಾಜಮಹಾರಾಜರು ಸೃಷ್ಟಿ ಮಾಡಿರುವ ಕಲಾ ಜಗತ್ತು. ಹಂಪಿ, ಬೇಲೂರು, ಹಳೇಬಿಡು, ಗೋಲಗುಂಬಜ್, ಜೈನ ಬಸದಿಗಳು ಇವುಗಳಿಗೆ ಕೆಲವು ಉದಾಹರಣೆಗಳು. ಈ ಐತಿಹಾಸಿಕ ಹಾಗೂ ಪಾರಂಪರಿಕ ಆಸ್ತಿಯನ್ನು ಸಂರಕ್ಷಿಸುವ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸಬಹುದು. ರಾಜ್ಯದಲ್ಲಿ ಅದ್ಭುತವಾದ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವದ ಶಿಲ್ಪಗಳು, ಶಾಸನಗಳು, ಕಟ್ಟಡಗಳನ್ನು ಜನರಿಗೆ ಪರಿಚಯಿಸಬೇಕು. ಯೂನೆಸ್ಕೋ ಸಂಸ್ಥೆ ಹಂಪಿಯನ್ನು ಈಗಾಗಲೇ ಪಾರಂಪರಿಕ ಕಟ್ಟಡ ಎಂದು ಗುರುತಿಸಿದೆ. ಬೇಲೂರು , ಹಳೇಬೀಡು ಕೂಡ ಈ ಪಟ್ಟಿಯಲ್ಲಿ ಸೇರಲಿದೆ. ಬಾದಾಮಿ ಗುಹೆಗಳು ಅಜಂತಾ ಗುಹೆಗಳಿಗಿಂತ ಪುರಾತನ ಹಾಗೂ ಮಹತ್ವದ್ದಾಗಿದೆ. ಆದರೆ ಪ್ರವಾಸಿಗರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇವುಗಳನ್ನು ಎಲ್ಲ ವ್ಯವಸ್ಥೆಗಳೊಂದಿಗೆ ಸೃಜನಾತ್ಮಕವಾಗಿ ಪ್ರಸಿದ್ಧಿಗೊಳಿಸಬೇಕು” ಎಂದರು. ಪ್ರವಾಸೋದ್ಯಮ ಸರ್ಕೀಟ್
”ರಾಜ್ಯದಲ್ಲಿ 2 ಪ್ರವಾಸೋದ್ಯಮ ಸರ್ಕೀಟ್ ಗಳನ್ನು ಅಂದರೆ ಬೇಲೂರು ಹಳೆಬೀಡು, ಸೋಮನಾಥಪುರ ಸುತ್ತಮುತ್ತಲ ಪ್ರವಾಸಿತಾಣಗಳನ್ನೊಳಗೊಂಡ ಮೈಸೂರು ಸರ್ಕೀಟ್ , ಬಿಜಾಪುರ ದಿಂದ ಬಾದಾಮಿ ಪಟ್ಟಡಕಲ್ಲು ಹಂಪಿ ಇತ್ಯಾದಿಗಳನ್ನು ಒಳಗೊಂಡ ಹಂಪಿ ಸರ್ಕೀಟ್‍ಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಸರ್ಕೀಟ್‍ಗಳಿಗೆ ಪ್ರವಾಸಿಗರು ವೆಬ್‍ಸೈಟ್ ಮೂಲಕ ತಮ್ಮ ಪ್ರವಾಸದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಮುಂದಿನ 2 ತಿಂಗಳ ಒಳಗಾಗಿ ಎರಡು ಸರ್ಕಿಟ್‍ಗಳನ್ನು ಕಾರ್ಯಾರಂಭ ಮಾಡಲಾಗುವುದು. ಟೆಂಪಲ್ ಟೂರಿಸಂ, ನೈಸರ್ಗಿಕ ಟೂರಿಸಂಗಳಿಗೆ ಪ್ರಾಶಸ್ತ್ಯ ನೀಡಲಾಗುವುದು. ಜೋಗ ಜಲಪಾತ ಪ್ರವಾಸಿ ತಾಣ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲಿರಿಸಲಾಗಿದ್ದು, 600 ಕೊಠಡಿಗಳ ಪ್ರವಾಸಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಸಿಆರ್‍ಝೆಡ್ ಆದೇಶ ಕೇಂದ್ರ ಸರ್ಕಾರ ವಿನಾಯ್ತಿ ನೀಡಿದ್ದು, ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದ ಸಹಾಯವಾಗಲಿದೆ. ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕರಾವಳಿ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುತ್ತಿದೆ” ಎಂದರು.