Advertisement

ದ್ವಿತೀಯ PUC ಫಲಿತಾಂಶ ಪ್ರಕಟ; ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್!

09:53 AM Apr 17, 2019 | Nagendra Trasi |

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರು ಪ್ರಕಟಿಸಿದ್ದು, ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.

Advertisement

ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿ ಚಿಕ್ಕೋಡಿ ಕೊನೆಯ ಸ್ಥಾನ ಪಡೆದಿತ್ತು. ಮಧ್ಯಾಹ್ನ 12ಗಂಟೆಗೆ ಪಿಯು ಮಂಡಳಿ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ನಾಳೆ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಈ ವರ್ಷವೂ ನಗರದ ಹುಡುಗರಿಗಿಂತ ಹಳ್ಳಿಯ ಹುಡುಗರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ.61.73ರಷ್ಟು ಫಲಿತಾಂಶ ಬಂದಿದೆ. ಶೇ.68.24ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಏರಿಕೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ ಪಿಯು ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 6,71,653. ತೇರ್ಗಡೆಯಾದವರ ಸಂಖ್ಯೆ 4,14,587. ಇದರಲ್ಲಿ ಉತ್ತೀರ್ಣರಾದ ಬಾಲಕರ ಸಂಖ್ಯೆ 1,86,690, ಬಾಲಕಿಯರ ಸಂಖ್ಯೆ 2,27,897. ದ್ವಿತೀಯ ಪಿಯುಸಿಯಲ್ಲಿ 94 ಖಾಸಗಿ ಕಾಲೇಜು ಶೂನ್ಯ ಫಲಿತಾಂಶ.

ಜಿಲ್ಲಾವಾರು ಶೇ. ಫಲಿತಾಂಶ:

ಉಡುಪಿ ಶೇ. 92.20

ದಕ್ಷಿಣ ಕನ್ನಡ ಶೇ.90.91

ಕೊಡಗು ಶೇ.83.31

ಉತ್ತರ ಕನ್ನಡ ಶೇ.79.59

ಚಿಕ್ಕಮಗಳೂರು ಶೇ.76.42

ಹಾಸನ ಶೇ.75.19

ಬಾಗಲಕೋಟೆ ಶೇ. 74.26

ಬೆಂಗಳೂರು ದಕ್ಷಿಣ 74.25

ಶಿವಮೊಗ್ಗ ಶೇ.73.54

ಬೆಂಗಳೂರು ಗ್ರಾಮಾಂತರ ಶೇ.72.68

ಚಾಮರಾಜನಗರ ಶೇ.72.67

ಚಿಕ್ಕಬಳ್ಳಾಪುರ ಶೇ.70.11

ವಿಜಯಪುರ ಶೇ.68.55

ಮೈಸೂರು ಶೇ.68.55

ಹಾವೇರಿ ಶೇ.68.40

ತುಮಕೂರು ಶೇ. 65.81

ಕೋಲಾರ ಶೇ.65.19

ಬಳ್ಳಾರಿ ಶೇ.64.87

ಕೊಪ್ಪಳ ಶೇ.63.15

ಮಂಡ್ಯ ಶೇ.63.08

ದಾವಣಗೆರೆ ಶೇ.62.53

ಧಾರವಾಡ ಶೇ.62.49

ರಾಮನಗರ ಶೇ.62.08

ಚಿಕ್ಕೋಡಿ ಶೇ.60.86

ಗದಗ ಶೇ.57.76

ರಾಯಚೂರು ಶೇ.56.73

ಬೆಳಗಾವಿ ಶೇ.56.18

ಬೀದರ್ ಶೇ.55.78

ಯಾದಗಿರಿ ಶೇ.53.02

ಚಿತ್ರದುರ್ಗ ಶೇ.51.42

Advertisement

Udayavani is now on Telegram. Click here to join our channel and stay updated with the latest news.

Next