ಮುಂಬಯಿ: ಸಂಗೀತ ಸರಸಿ ಗ್ರಂಥವು ಶ್ರೀ ಬುರ್ಡೆಯವರ ಸಂಗೀತ ವಿಷಯಕ ಜ್ಞಾನ ಭಂಡಾರವನ್ನು ರಸಿಕರ ಮುಂದೆ ಅಚ್ಚರಿ ಪಡುವಂತೆ ತೆರೆದಿಟ್ಟಿದೆ. ಇಂತಹ ಒಂದು ಒಳ್ಳೆಯ ಸಂಶೋಧನಾತ್ಮಕ ಸಂದರ್ಭ ಗ್ರಂಥವನ್ನು ಸಂಪಾದಿಸಿ ಸಂಗೀತ ಕಲಾರಸಿಕರಿಗೆ ನೀಡಿರುವ ಅವರ ಸಹೋದರಿ ದ್ವಯರು ಅಭಿನಂದನಾರ್ಹರು ಎಂದು ಖ್ಯಾತ ವಿಜ್ಞಾನಿ, ಕನ್ನಡದ ಹಿರಿಯ ಸಾಹಿತಿ ಡಾ| ವ್ಯಾಸರಾವ್ ನಿಂಜೂರ್ ಅವರು ನುಡಿದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆ ಕಲಾಭಾರತಿಯಲ್ಲಿ ಬುರ್ಡೆ ಪರಿವಾರದವರ ಪ್ರಾಯೋಜಕತ್ವದಲ್ಲಿ ಮೇ 1ರಂದು ಬೆಳಗ್ಗೆ 10ರಿಂದ ಸಂಘದ ಸಮರಸ ಭವನದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಸಂಗೀತ ಕ್ಷೇತ್ರದ ಹೆಸರಾಂತ ವಿಮರ್ಶಕರಾದ ದಿ| ಪ್ರಕಾಶ್ ಬುರ್ಡೆಯವರ ಬದುಕು ಬರಹಗಳನ್ನು ಪ್ರತಿಬಿಂಬಿಸುವ ಉದ್ಗಂಥ ಸಂಗೀತ ಸರಸಿಯ ಲೋಕಾರ್ಪಣೆ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇದೊಂದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಪ್ರಕಾಶ್ ಬುರ್ಡೆ ಕರ್ನಾಟಕ ಸಂಘದಲ್ಲಿದ್ದು ಕೊಂಡು ಸಂಗೀತ, ಸಾಹಿತ್ಯ ಆರಾಧನೆಯಲ್ಲಿ ತೊಡಗಿದ್ದರು. ಅವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ನುಡಿದು ಆಯೋಜಕರನ್ನು ಶ್ಲಾಘಿಸಿದರು.
ಸಂಗೀತ ಸರಸಿಯನ್ನು ಬುರ್ಡೆ ಅವರ ಸಹೋದರಿಯರಾದ ಡಾ| ಜೋತ್ಸಾ$° ಕಾಮತ್ ಮತ್ತು ಡಾ| ಸುಷ್ಮಾ ಆರೂರ್ ಅವರು ಸಂಪಾದಿಸಿ ಪ್ರಗತಿ ಗ್ರಾಫಿಕ್ಸ್, ಬೆಂಗಳೂರು ಮೂಲಕ ಪ್ರಕಟಿಸಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಉತ್ತರಾರ್ಧದಲ್ಲಿ ಬೆಂಗಳೂರಿನ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ, ಪದ್ಮಭೂಷಣ ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯೆ ಪೂರ್ಣಿಮಾ ಕುಲಕರ್ಣಿಯವರು ಸುಶ್ರಾವ್ಯವಾಗಿ ಸಾಲಗವರಾಳಿ, ಮಧ್ಯಮಾವತಿ ಮತ್ತು ಹೇಮಾವತಿ ರಾಗಲಹರಿಯನ್ನು ಪ್ರಸ್ತುತಪಡಿಸಿ ಕೊನೆಗೆ ಚಕೊರಂಗೆ ಚಂದ್ರಮನ ಬೆಳಕಿನ ಚಿಂತೆ ಎಂಬ ವಚನವನ್ನು ಭೈರವಿ ರಾಗದಲ್ಲಿ ಹಾಡಿ ರಸಿಕರ ಮನ ತಣಿಸಿದರು. ಅವರಿಗೆ ಪಕ್ಕವಾದ್ಯ ತಬಲಾದಲ್ಲಿ ಪಂಡಿತ್ ಓಂಕಾರ್ ಗುಲ್ವಾಡಿ, ಸಂವಾದಿನಿಯಲ್ಲಿ ಪಂಡಿತ್ ಸುಧೀರ್ ನಾಯಕ್ ಅವರು ಅತ್ಯಂತ ಸಮರ್ಥವಾಗಿ ಸಾಥ್ ನೀಡಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮನೋಹರ ಕೋರಿ, ಗೌರವ ಕಾರ್ಯದರ್ಶಿ ಡಾ| ಭರತಕುಮಾರ್ ಪೊಲಿಪು, ಡಾ| ಸುಷ್ಮಾ ಆರೂರ್, ಶುಭಾಂಗ ಬುರ್ಡೆ ಉಪಸ್ಥಿತರಿದ್ದರು. ಮನೋಹರ ಕೋರಿ ದಂಪತಿ ಕುಲಕರ್ಣಿಯವರಿಗೆ ಪುಸ್ತಕ $ಗೌರವವನ್ನು ನೀಡಿದರು. ಡಾ| ಸುಷ್ಮಾ ಅವರು ಸಂಗೀತ ಸರಸಿಯ ಬಗ್ಗೆ ವಿಶ್ಲೇಸಿದರು. ಕಲಾಭಾರತಿಯ ಸಂಚಾಲಕರಾದ ಡಾ| ಸುಧೀಂದ್ರ ಭವಾನಿ ಅವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶುಭಾಂಗ ಬುರ್ಡೆ ವಂದಿಸಿದರು.