Advertisement

ಕರ್ನಾಟಕ ಸಂಘ ಡೊಂಬಿವಲಿ ಲಲಿತ ಕಲಾ ವಿಭಾಗದಿಂದ ಭಜನ ಸ್ಪರ್ಧೆ

01:30 PM Mar 08, 2019 | |

ಮುಂಬಯಿ: ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತ ಕಲಾ ವಿಭಾಗದ ವತಿಯಿಂದ ಪುರಂದರ ದಾಸರ ಆರಾಧನಾ ಮಹೋತ್ಸವವು ಮಾ. 3ರಂದು ಅಪರಾಹ್ನ 2ರಿಂದ ಡೊಂಬಿವಲಿ ಪೂರ್ವದ ಗೋಪಾಲ್‌ ನಗರದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಜರಗಿತು.

Advertisement

ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಆರಾಧನಾ ಮಹೋತ್ಸವವನ್ನು ಸಂಘದ ಕಾರ್ಯಾಧ್ಯಕ್ಷ ಸುಕುಮಾನ್‌ ಎನ್‌. ಶೆಟ್ಟಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಡೆದ ಭಜನ ಸ್ಪರ್ಧೆಯಲ್ಲಿ ಶ್ರೀ ಅಯ್ಯಪ್ಪ ಭಜನ ಮಂಡಳಿ ಆಜೆªಪಾಡಾ ಡೊಂಬಿವಲಿ ಪ್ರಥಮ 15 ಸಾವಿರ ರೂ. ಹಾಗೂ ಫಲಕವನ್ನು ತನ್ನದಾಗಿಸಿಕೊಂಡಿತು. 

ಶ್ರೀ ವಿಠಲ ಭಜನಾ ಮಂಡಳಿ ಮೀರಾರೋಡ್‌ ದ್ವಿತೀಯ 12,500 ರೂ. ನಗದು ಮತ್ತು ಫಲಕ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ತೃತೀಯ 10 ಸಾವಿರ ರೂ. ನಗದು ಮತ್ತು ಫಲಕ ಹಾಗೂ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಭಜನಾ ಮಂಡಳಿ ಮೀರಾರೋಡ್‌ ಸಮಾಧಾನಕರ 5 ಸಾವಿರ ರೂ.ಗಳನ್ನು ಪಡೆಯಿತು.

ಭಜನಾ ಸ್ಪರ್ಧೆಯಲ್ಲಿ ವರದ ಸಿದ್ಧಿ ವಿನಾಯಕ ಮಂಡಳಿ ಡೊಂಬಿವಲಿ, ರಾಜಾಪುರ ಸಾರಸ್ವತ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಆಜೆªಪಾಡಾ, ಸ್ವಾವಲಂಬನ ಕೇಂದ್ರ ಡೊಂಬಿವಲಿ, ಸಪ್ತಸ್ವರ ಭಜನಾ ಮಂಡಳಿ ಡೊಂಬಿವಲಿ, ಪೂರ್ಣಪ್ರಜ್ಞಾ ಭಜನಾ ಮಂಡಳಿ ಡೊಂಬಿವಲಿ, ಶ್ರೀ ವಿಟuಲ ಭಜನಾ ಮಂಡಳಿ ಮೀರಾರೋಡ್‌, ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ, ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಮದ್ವೇಷ ಭಜನಾ ಮಂಡಳಿ ಪೇಜಾವರ ಮಠ ಸಾಂತಾಕ್ರೂಜ್‌, ಯಕ್ಷಕಲಾ ಸಂಸ್ಥೆಯ ಡೊಂಬಿವಲಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಭಜನಾ ಮಂಡಳಿ ಐರೋಲಿ, ಶಿವಪ್ರಿಯಾ ಭಜನಾ ಮಂಡಳಿ ಮೀರಾರೋಡ್‌ ತಂಡಗಳು ಭಾಗವಹಿಸಿದ್ದವು.

ಹತ್ತು ತಂಡಗಳಿಗೆ ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್‌. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ತಲಾ ಒಂದೊಂದು ಸಾವಿರ ರೂ. ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ತೀರ್ಪುಗಾರರಾಗಿ ಪದ್ಮನಾಭ ಭಟ್‌ ಕಾರ್ಕಳ, ನಿತ್ಯಪ್ರಕಾಶ್‌ ಶೆಟ್ಟಿ, ವಸಂತಿ ಕುಲಕರ್ಣಿ ಸಹಕರಿಸಿದರು. ಅತಿಥಿಯಾಗಿ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ ಕಲ್ಲಡ್ಕ ಅವರು ಉಪಸ್ಥಿತರಿದ್ದು ವಿಜೇತ ತಂಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.

Advertisement

ತೀರ್ಪುಗಾರರಾದ ಅನಂತ ಪದ್ಮನಾಭ ಭಟ್‌ ಮಾತನಾಡಿ, ಪುರಂದರ ದಾಸರ ಪ್ರಶಸ್ತಿಯನ್ನು ತಿರುಪತಿಯಲ್ಲಿ ಪಡೆದು ಕರ್ನಾಟಕ ಸಂಘ ಡೊಂಬಿವಲಿಯ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವ ಭಾಗ್ಯ ಲಭಿಸಿದ್ದು ನನ್ನ ಪುಣ್ಯ. ಪುಟಾಣಿ ಮಕ್ಕಳ ಬಾಯಿಯಿಂದ ದಾಸರ ಪದಗಳನ್ನು ಕೇಳಿ ಅತೀವ ಸಂತೋಷವಾಗಿದೆ. ಈ ಅವಕಾಶವನ್ನು ನೀಡಿ ಡೊಂಬಿವಲಿ ಕರ್ನಾಟಕ ಸಂಘಕ್ಕೆ ಕೃತಜ್ಞತೆಗಳು ಎಂದರು.

ಪುರಂದರ ದಾಸರ ಜೀವನದ ಬಗ್ಗೆ  ಸಂಸ್ಕೃತ ಉಪನ್ಯಾಸಕ ಹಾಗೂ ಶ್ರೀ ಸತ್ಯಧ್ಯಾನ ವಿದ್ಯಾಪೀಠ ಮುಲುಂಡ್‌ ಇದರ ಸಂಶೋಧಕ ಪಂಡಿತ್‌ ಋಷಿಕೇಶ್‌ ಆಚಾರ್ಯ ಕದರಿ ಇವರು ಉಪನ್ಯಾಸ ನೀಡಿದರು. ಸಂಘದ ಉಪಾಧ್ಯಕ್ಷ ಡಾ| ದಿಲೀಪ್‌ ಕೆ. ಕೋಪರ್ಡೆ, ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಡಾ| ವಿ. ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಎಲ್‌. ಕುಲಾಲ್‌, ಜತೆ ಕಾರ್ಯದರ್ಶಿ ರಮೇಶ್‌ ವಿ. ಕಾಖಂಡಕಿ, ಕೋಶಾಧಿಕಾರಿ ಲೋಕನಾಥ್‌ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಚಿತ್ತರಂಜನ್‌ ಎಂ. ಆಳ್ವ, ಲಲಿತ ಕಲಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಆರ್‌. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next