Advertisement

ಕರ್ನಾಟಕ ಸಂಘ ಮುಂಬಯಿ ಕಲಾಭಾರತಿಗೆ “ಮ್ಯೂಜಿಕ್‌ ಫೋರಂ’ಪ್ರಶಸ್ತಿ

04:36 PM Feb 01, 2017 | |

ಮುಂಬಯಿ: ಮುಂಬಯಿ ಮತ್ತು ಉಪನಗರಗಳ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸಂಸ್ಥೆಗಳ ಒಕ್ಕೂಟದ ಪ್ರಾತಿನಿಧಿಕ ಕೇಂದ್ರ ಸಂಸ್ಥೆ ಮ್ಯೂಜಿಕ್‌ ಫೋರಂನಿಂದ ಪ್ರತಿ ವರ್ಷ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ನಿರಂತರಸೇವೆಗೈಯುತ್ತಿರುವ ಹಿರಿಯ ಕಲಾವಿದರಿಗೆ ಮತ್ತು ಸಂಸ್ಥೆಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

Advertisement

ಜ. 21ರಂದು ನಾರಿಮನ್‌ ಪಾಯಿಂಟ್‌ನಲ್ಲಿರುವ ಎನ್‌ಸಿಪಿಎ ಇದರ ಎಕ್ಸ್‌ ಪೆರಿಮೆಂಟಲ್‌ ಥಿಯೇಟರ್‌ನಲ್ಲಿ ಐಎಂಎಸ್‌ಐಟಿಸಿ – ಎಸ್‌ಆರ್‌ಎ ಕೇಂದ್ರೀಯ ಸಂಗೀತ – ನಾಟಕ ಅಕಾಡಮಿ ಮತ್ತು ಎನ್‌ಸಿಪಿಎ ಇದರ ಸಹ ಪ್ರಾಯೋಜಕತ್ವದಲ್ಲಿ ಆಯೋಜಿ ಸಲ್ಪಟ್ಟ 3 ದಿನಗಳ ಸಂಗೀತೋಪಕರಣಗಳು “ಅಂದು ಮತ್ತು ಇಂದು  ಶಾಸ್ತ್ರೀಯ ಸಂಗೀತ ಹಿಂದೆ ಮತ್ತು ಮುಂದೆ’ ಎಂಬ ಶೀರ್ಷಿಕೆಗಳ ಚರ್ಚಾ ಸತ್ರಗಳ ಕಾರ್ಯಕ್ರಮದಲ್ಲಿ 2016ನೇ ಸಾಲಿನ  ಮ್ಯೂಜಿಕ್‌ ಫೋರಂನ ಸಂಗೀತ ಸಂಸ್ಥೆಗಳ ಸಾಧನಾ  ಪ್ರಶಸ್ತಿಯನ್ನು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿಯ   ಕಲಾವೇದಿಕೆಯಾದ ಕಲಾಭಾರತಿಗೆ ಪ್ರದಾನಿಸಲಾಯಿತು.

ಈ ಪ್ರಶಸ್ತಿಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೇಂದ್ರೀಯ ಸಂಗೀತ – ನಾಟಕ ಅಕಾಡಮಿಯ ಕಾರ್ಯಾಧ್ಯಕ್ಷ ಶೇಖರ್‌ ಸೇನ್‌ ಮತ್ತು ಚರ್ಚಾ ಸತ್ರಗಳ ದಿಕ್ಸೂಚಿ ಉಪನ್ಯಾಸಕ ಹಾಗೂ ಚೆನ್ನೈ ಮ್ಯೂಜಿಕ್‌ ಅಕಾಡೆಮಿಯ ಕಾರ್ಯದರ್ಶಿ ಡಾ| ಪಪ್ಪು ವೇಣುಗೋಪಾಲರಾವ್‌ ಅÊರಿಂದ ಕರ್ನಾಟಕ ಸಂಘದ ಪರವಾಗಿ ಕಲಾಭಾರತಿಯ ಸಂಚಾಲಕ ಡಾ| ಸುಧೀಂದ್ರ ಭವಾನಿ ಅವರು ಸ್ವೀಕರಿಸಿದರು. ಪ್ರಸಿದ್ಧ ಕಲಾವಿದರಾದ ಪಂಡಿತ್‌ ಅರವಿಂದ ಪಾರೀಖ್‌,  ಡಾ| ಅಶ್ವಿ‌ನ್‌ ಭಿಡೆ ದೇಶಪಾಂಡೆ, ಪಂಡಿತ್‌  ಪ್ರಭಾಕರ್‌ ಕಾರೇಕರ್‌, ಪಂಡಿತ್‌ ವಿದ್ಯಾಧರ್‌ ವ್ಯಾಸ್‌, ಮ್ಯೂಜಿಕ್‌ ಫೋರಂನ ಕಾರ್ಯಾಧ್ಯಕ್ಷ ಗಣೇಶ್‌ ಕುಮಾರ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next