Advertisement

2022-23ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

07:33 PM Aug 25, 2022 | Team Udayavani |

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2022-23ನೇ ಸಾಲಿನ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ.

Advertisement

ಅಕಾಡೆಮಿ ಅಧ್ಯಕ್ಷ ಅನೂರು ಅನಂತಕೃಷ್ಣ ಶರ್ಮ ಅವರು ಕನ್ನಡ ಭವನದಲ್ಲಿ  ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದ್ದು,  ಸೆಪ್ಟಂಬರ್‌ ಕೊನೆಯ ವಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಹಾಡುಗಾರಿಕೆ(ಕರ್ನಾಟಕ ಸಂಗೀತ)ಯಲ್ಲಿ  ಚನ್ನರಾಯಪಟ್ಟಣದ ಸಿ.ಆರ್‌. ರಾಮಚಂದ್ರ ಹಾಗೂ ನೃತ್ಯ ಕ್ಷೇತ್ರದಲ್ಲಿ ಮಂಗಳೂರಿನ ನೃತ್ಯಗುರು ಗೀತಾ ಸರಳಾಯ ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ರೂ. ಹಾಗೂ ಫ‌ಲಕವನ್ನು ಒಳಗೊಂಡಿದೆ.

ಅಕಾಡೆಮಿ ನೀಡುವ ವಿಶೇಷ ಪ್ರಶಸ್ತಿಗೆ ವಾದ್ಯ ಸಂಯೋಜಕ ಪ್ರವೀಣ್‌ ಡಿ. ರಾವ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ಈ  ಪ್ರಶಸ್ತಿಯು 25 ಸಾ.ರೂ. ಹಾಗೂ ಸ್ಮರಣಿಕೆ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಯೂ ತಲಾ 25 ಸಾ. ರೂ.  ಒಳಗೊಂಡಿದೆ.

ವಾರ್ಷಿಕ ಪ್ರಶಸ್ತಿ: (ಕರ್ನಾಟಕ ಸಂಗೀತ)

Advertisement

ಸಿ.ಎ. ನಾಗರಾಜ, ಮೈಸೂರು – ಹಾಡುಗಾರಿಕೆ

ಎಂ. ನಾರಾಯಣ, ಸುರತ್ಕಲ್‌, ಮಂಗಳೂರು – ಹಾಡುಗಾರಿಕೆ

ಪಿ.ಕೆ.ದಾಮೋದರಂ, ಪುತ್ತೂರು – ಸ್ಯಾಕ್ಸೋಫೋನ್‌

(ಹಿಂದೂಸ್ತಾನಿ ಸಂಗೀತ) :

ಎಂ.ಪಿ.ಹೆಗಡೆ ಪಡಿಗೇರಿ, ಶಿರಸಿ – ಗಾಯನ

ಮಹಾದೇವಪ್ಪ ನಿಂಗಪ್ಪ ಹಳ್ಳಿ, ಗದಗ – ಗಾಯನ

ಹನುಮಂತಪ್ಪ  ತಿಮ್ಮಾಪೂರ, ಶಿಗ್ಗಾಂವ್‌, ಹಾವೇರಿ – ವಯಲಿನ್‌ (ಅಂಧರು)

ಫಯಾಜ್‌ ಖಾನ್‌, ಬೆಂಗಳೂರು – ಸಾರಂಗಿ/ಗಾಯನ

(ನೃತ್ಯ)

ರೋಹಿಣಿ ಇಮಾರತಿ, ಧಾರವಾಡ

ಪುಷ್ಪಾ ಕೃಷ್ಣಮೂರ್ತಿ, ಶಿವಮೊಗ್ಗ

ಪುರುಷೋತ್ತಮ, ಬೆಂಗಳೂರು – ನೃತ್ಯ- ಮೃದಂಗ

(ಸುಗಮ ಸಂಗೀತ) :

ಸಿದ್ರಾಮಪ್ಪ ಪೊಲೀಸ್‌ ಪಾಟೀಲ್‌, ಕಲಬುರಗಿ (ಅಂಧರು)

ಮಧುರಾ ರವಿಕುಮಾರ್‌, ಬೆಂಗಳೂರು

(ಕಥಾಕೀರ್ತನ):

ಶೀಲಾ ನಾಯ್ಡು, ಬೆಂಗಳೂರು

 (ಗಮಕ) :

ಅನಂತ ನಾರಾಯಣ, ಹೊಸಹಳ್ಳಿ

ಚಂದ್ರಶೇಖರ ಕೆದಿಲಾಯ, ಉಡುಪಿ

(ವಿಶೇಷ ಪ್ರಶಸ್ತಿ) :

ಪ್ರವೀಣ್‌ ಡಿ. ರಾವ್‌, ಬೆಂಗಳೂರು – ವಾದಕರು, ಸಂಯೋಜಕರು

Advertisement

Udayavani is now on Telegram. Click here to join our channel and stay updated with the latest news.

Next