Advertisement

Karnataka: “ಹಲ್ಮಿಡಿ’ ಶಾಸನದ ಕಲ್ಲಿನ ಪ್ರತಿಕೃತಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆ

12:17 AM Oct 30, 2024 | Team Udayavani |

ಮಂಗಳೂರು: ಕನ್ನಡದ ಮೊಟ್ಟ ಮೊದಲ ಶಿಲಾ ಶಾಸನವೆಂಬ ಹೆಗ್ಗಳಿಕೆಯ “ಹಲ್ಮಿಡಿ ಶಾಸನ’ದ ಮಹತ್ವವನ್ನು ರಾಜ್ಯಾದ್ಯಂತ ಪ್ರಚುರಪಡಿಸುವ ಆಶಯದಿಂದ ಎಲ್ಲ ಜಿಲ್ಲೆಗಳಲ್ಲಿಯೂ ಹಲ್ಮಿಡಿ ಶಾಸನದ ಕಲ್ಲಿನ ಪ್ರತಿಕೃತಿ ಸ್ಥಾಪನೆಗೆ ಸರಕಾರ ಮುಂದಾಗಿದೆ.

Advertisement

“ಕರ್ನಾಟಕ ಸಂಭ್ರಮ-50’ರ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸುವ ಮೂಲಕ ಈ ಸವಿನೆನಪನ್ನು ಶಾಶ್ವತವಾಗಿಡುವುದು ಯೋಜನೆಯ ಉದ್ದೇಶ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಹಲ್ಮಿಡಿ ಶಾಸನದ ಕಲ್ಲಿನ ಪ್ರತಿಕೃತಿ ರಚಿಸಲಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಡಳಿತದ ವತಿಯಿಂದ ಶಿಲಾಶಾಸನವನ್ನು ಪ್ರತಿಷ್ಠಾಪನೆ ಮಾಡಿ ನ. 1 ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನಾವರಣ ಮಾಡಲು ಉದ್ದೇಶಿಸಲಾಗಿದೆ.

ಎಚ್‌ಡಿ ಕೋಟೆ ಕಲ್ಲು
ಎಚ್‌ಡಿ ಕೋಟೆಯಿಂದ ತರಿಸಿದ ಕಲ್ಲಿನಿಂದ ಹಲ್ಮಿಡಿ ಶಿಲಾಶಾಸನವನ್ನು ಚಿಕ್ಕಮಗಳೂರಿನಲ್ಲಿ ಸಿದ್ದಪಡಿಸಲಾಗಿದೆ. ಹೀಗೆ ಸಿದ್ದವಾದ ಶಿಲಾ ಶಾಸನದ ಪ್ರತಿಕೃತಿಯನ್ನು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಪ್ರತಿಷ್ಠಾಪನೆ ನಡೆಸುವ ಸ್ಥಳಗಳಲ್ಲಿ ಕಲ್ಲಿನ ಪ್ರತಿಕೃತಿ ತಂದು ನಿಲ್ಲಿಸಲಾಗಿದೆ.

ಪ್ರತಿಷ್ಠಾಪನೆ ನಡೆಸುವ ಕೆಳಭಾಗದಲ್ಲಿ ಕಾಂಕ್ರಿಟ್‌ ಫೌಂಡೇಶನ್‌, ಮಧ್ಯೆ ಗ್ರಾನೈಟ್‌ ಶಿಲೆ ಬಳಸಲಾಗಿದೆ. ಮಧ್ಯೆ ಹಲಿ¾ಡಿ ಶಾಸನದ ಶಿಲೆ ಕೂರಿಸಲು ರಂಧ್ರ ಮಾಡಲಾಗಿದ್ದು ಅದರಲ್ಲಿ ಇದನ್ನು ಇರಿಸಲಾಗಿದೆ. ಮಂಗಳೂರು ಪುರಭವನ ಮುಂಭಾಗದ ರಾಜಾಜಿ ಪಾರ್ಕ್‌ನಲ್ಲಿ ಹಾಗೂ ಉಡುಪಿಯ ಭುಜಂಗ ಪಾರ್ಕ್‌ನಲ್ಲಿ ಈ ಶಿಲಾಶಾಸನ ಪ್ರತಿಷ್ಠಾಪನೆ ನಡೆಯಲಿದೆ.

Advertisement

ಕನ್ನಡದ ಮೊದಲ
ಶಿಲಾ ಶಾಸನ
ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ 1936ರಲ್ಲಿ ಪತ್ತೆಯಾದ ಶಾಸನವನ್ನು ಕನ್ನಡ ಲಿಪಿಯಲ್ಲಿ ಲಭ್ಯವಾದ ಮೊಟ್ಟ ಮೊದಲ ಶಾಸನವೆಂದು ಪರಿಗಣಿಸಲಾಗಿದೆ. 16 ಸಾಲುಗಳ ಬರಹ ಇದರಲ್ಲಿತ್ತು. ಇದು ಕ್ರಿ.ಶಕ 450ರ ಸುಮಾರಿನದ್ದು ಎಂದು ಅಂದಾಜಿಸಲಾಗಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ-ಅವಲೋಕನಗಳು ನಡೆದಿದೆ. ಹೀಗಾಗಿ ಈ ಶಿಲಾ ಶಾಸನದ ಮಹತ್ವವನ್ನು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಕೃತಿ ಸ್ವರೂಪದಲ್ಲಿ ಇರಿಸಲು ಸರಕಾರ ಉದ್ದೇಶಿಸಿದೆ.

ಹಲ್ಮಿಡಿ ಶಾಸನದ ಪ್ರತಿಕೃತಿ
-ಎತ್ತರ: ನಾಲ್ಕೂವರೆ ಅಡಿ
-ಅಗಲ: 2 ಅಡಿ
-ದಪ್ಪ: 6 ಇಂಚು
-ತೂಕ: 450 ರಿಂದ 500 ಕಿಲೋ

31 ಜಿಲ್ಲೆಗಳಿಗೂ ರವಾನೆ
ಚಿಕ್ಕಮಗಳೂರಿನಲ್ಲಿ ಒಂದು ಶಿಬಿರ ಮಾಡಿಸಿ 15 ಜನ ಆರ್ಟಿಸ್ಟ್‌, 15 ಸಹಾಯಕ ಶಿಲ್ಪಿಗಳು ಸೇರಿ ಹಲ್ಮಿಡಿ ಶಾಸನದ ಪ್ರತಿಕೃತಿ ಮಾಡಲಾಗಿದೆ. 31 ಜಿಲ್ಲೆಗಳಿಗೂ ಇದನ್ನು ತಲುಪಿಸಲಾಗಿದೆ. ನ.1ರಂದು ಪ್ರತಿಷ್ಠಾಪನೆ ಆಗಲಿದೆ.
ಚಂದ್ರಶೇಖರ್‌,
-ರಿಜಿಸ್ಟ್ರಾರ್‌, ಕರ್ನಾಟಕ ಶಿಲ್ಪಕಲಾ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next