Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿ: 2021ನೇಸಾಲಿನ ಗೌರವ ಪ್ರಶಸ್ತಿ,ಸಾಹಿತ್ಯ ಶ್ರೀ ಪ್ರಶಸ್ತಿ ಪ್ರಕಟ

08:50 PM Mar 31, 2022 | Team Udayavani |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಹಾಗೂ 2020ನೇ ಸಾಲಿನ ಪುಸ್ತಕ ಬಹುಮಾನ ಮತ್ತು ವಿವಿಧ ದತ್ತಿ ಬಹುಮಾನ ಪ್ರಶಸ್ತಿಗಳ ಪುರಸ್ಕೃತರ ಹೆಸರನ್ನು ಗುರುವಾರ ಪ್ರಕಟಿಸಿದೆ.

Advertisement

ವರ್ಷದ ಗೌರವ ಪ್ರಶಸ್ತಿಗೆ ಧಾರಾವಾಡದ ಹಿರಿಯ ಸಾಹಿತಿ ಜಿನದತ್ತ ದೇಸಾಯಿ, ಕಾಸರಗೋಡಿನ ಡಾ| ನಾ.ಮೊಗಸಾಲೆ, ವಿಜಯಪುರದ ಡಾ| ಸರಸ್ವತಿ ಚಿಮ್ಮಲಗಿ, ಬೆಳಗಾವಿಯ ಪ್ರೊ| ಬಸವರಾಜ ಕಲ್ಗುಡಿ, ಚಿತ್ರದುರ್ಗದ ಯಲ್ಲಪ್ಪ ಕೆ.ಕೆ.ಪುರ ಆಯ್ಕೆ ಆಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿ 50 ಸಾವಿರ ರೂ. ಮತ್ತು ಪುರಸ್ಕಾರ ಒಳಗೊಂಡಿದೆ ಎಂದು ಹೇಳಿದರು.

ಸಾಹಿತ್ಯಶ್ರೀ ಪ್ರಶಸ್ತಿಗೆ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 25 ಸಾವಿರ ರೂ. ಮತ್ತು ಪುರಸ್ಕಾರ ಒಳಗೊಂಡಿದೆ. ಪುಸ್ತಕ ಬಹುಮಾನ ತಲಾ 25 ಸಾವಿರ ರೂ. ಮತ್ತು ಸ್ಮರಣಿಕೆ ಹೊಂದಿದೆ ಎಂದು ತಿಳಿಸಿದರು.

ರಾಯಚೂರಿನ ಕೃಷಿ ಕಾಲೇಜಿನಲ್ಲಿ ಎಪ್ರಿಲ್‌ ಕೊನೆಯ ವಾರ ಅಥವಾ ಮೇ ಮೊದಲ ವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

2021ನೇ ಸಾಲಿನ ಸಾಹಿತ್ಯ ಶ್ರೀ ಪುರಸ್ಕೃತರು:

Advertisement

ಡಾ| ಚಂದ್ರಕಲಾ ಬಿದರಿ, ಪ್ರೊ| ಎಂ.ಎನ್‌.ವೆಂಕಟೇಶ್‌, ಡಾ| ಚನ್ನಬಸವಯ್ಯ ಹಿರೇಮಠ, ಡಾ| ಮ.ರಾಮಕೃಷ್ಣ, ಅಬ್ದುಲ್‌ ರಶೀದ್‌, ಡಾ| ವೈ.ಎಂ.ಭಜಂತ್ರಿ, ಜೋಗಿ, ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ, ಆಲೂರು ದೊಡ್ಡನಿಂಗಪ್ಪ.

2020ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು:

ಆರನಕಟ್ಟೆ ರಂಗನಾಥ ( ಕಾವ್ಯ -ಕಾರುಣ್ಯದ ಮೋಹಕ ನವಿಲುಗಳೆ ), ಮಂಜುಳಾ ಹಿರೇಮಠ (ಸಂಕಲ-ಗಾಯಗೊಂಡವರಿಗೆ ), ಎಚ್‌.ಟಿ.ಪೊತೆ ( ಕಾದಂಬರಿ-ಬಯಲೆಂಬೊ ಬಯಲು ), ಎಸ್‌. ಸುರೇಂದ್ರನಾಥ್‌ (ಸಣ್ಣಕತೆ: ಬಂಡಲ್‌ ಕತೆಗಳು), ಮಂಗಳ ಟಿ.ಎಸ್‌. (ನಾಟಕ  -ಆರೋಹಿ ), ಎನ್‌. ರಾಮನಾಥ್‌ (ಲಲಿತ ಪ್ರಬಂಧ-ನಿದ್ರಾಂಗನೆಯ ಸೆಳವಿನಲ್ಲಿ ), ಭಾರತಿ ಬಿ.ವಿ ( ಪ್ರವಾಸ ಸಾಹಿತ್ಯ -ನಕ್ಷತ್ರಗಳ ಸುಟ್ಟ ನಾಡಿನಲ್ಲಿ ), ಕೃಷ್ಣ ಕೊಲ್ಲಾರ ಕುಲಕರ್ಣಿ (  ಜೀವನಚರಿತ್ರೆ/ ಆತ್ಮಕಥೆ  - “ಗ್ರಾಮ ಸ್ವರಾಜ್ಯ’ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ). ಬಸವರಾಜ ಸಬರದ (ಸಾಹಿತ್ಯ ವಿಮರ್ಶೆ – ಹೈದರಾಬಾದ್‌ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ). ಕೆ.ರವೀಂದ್ರನಾಥ ( ಗ್ರಂಥ ಸಂಪಾದನೆ -ಲಿಂಗಣ್ಣ ಕವಿಯ ವರರಮ್ಯ ರತ್ನಾಕರ), ವೈ.ಜಿ. ಭಗವತಿ (ಮಕ್ಕಳ ಸಾಹಿತ್ಯ-ಮತ್ತೆ ಹೊಸ ಗೆಳೆಯರು), ಎಸ್‌.ಪಿ. ಯೋಗಣ್ಣ  ( ವಿಜ್ಞಾನ ಸಾಹಿತ್ಯ- ಆಧ್ಯಾತ್ಮಿಕ ಆರೋಗ್ಯ ದರ್ಷನ ), ಎಂ.ಎಂ.ಗುಪ್ತ (ಮಾನವಿಕ – ಗಾಂಧೀಯ ಅರ್ಥಶಾಸ್ತ್ರ ), ಪಿ. ತಿಪ್ಪೇಸ್ವಾಮಿ ಚಳ್ಳಕೆರೆ (ಸಂಶೋಧನೆ- ಮ್ಯಾಸಬೇಡರ ಮೌಖೀಕ ಕಥನಗಳು), ಕೇಶವ ಮಳಗಿ (ಅನುವಾದ-ಹೂವಿನ ಸುಗಂಧ ), ಸುಧಾಕರರನ್‌ ರಾಮಂತಳಿ (ಅನುವಾದ-ಶಿವಂಡೆ ಕಡುಂತುಡಿ ), ಸುಧಾಕರನ್‌ ರಾಮಂತಳಿ (ಅನುವಾದ-ಕನ್ನಡದಿಂದ ಭಾರತೀಯ ಭಾಷೆಗೆ ), ನರಹಳ್ಳಿ ಬಾಲಸುಬ್ರಹ್ಮಣ್ಯ ( ವೈಚಾರಿಕ ಬರಹ-ಪದ ಸೋಪಾನ), ಸಿದ್ಧಗಂಗಯ್ಯ ಹೊಲತಾಳು (ಸಂಕೀರ್ಣ ಸುವರ್ಣಮುಖಿ), ಎಸ್‌.ಬಿ. ಬಸೆಟ್ಟಿ  (ಲೇಖಕರ ಮೊದಲ ಸ್ವತಂತ್ರಕೃತಿ- ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ ).

ಪುರುಷೋತ್ತಮ ಬಿಳಿಮಲೆ  (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) ಸಹಿತ  ಹಲವರಿಗೆ 2020ನೇ ಸಾಲಿನ ವಿವಿಧ ದತ್ತಿ ಬಹುಮಾನ ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next