Advertisement

2 ತಿಂಗಳು ಬರಬೇಡಿ: ಕೇರಳದ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ನಿರ್ಬಂಧ

11:58 PM Sep 07, 2021 | Team Udayavani |

ಬೆಂಗಳೂರು: ಮುಂದಿನ ತಿಂಗಳ ಅಂತ್ಯದ ವರೆಗೆ ಕೇರಳದಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬರುವಂತಿಲ್ಲ. ಅಲ್ಲಿ ಕೊರೊನಾ, ನಿಫಾ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಜಾರಿ ಮಾಡಿದೆ.

Advertisement

ಕೇರಳದಿಂದ ಆಗಮಿಸುವ ಮತ್ತು ಅಲ್ಲಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಈ ನಿಯಮ ಅನ್ವಯಿ ಸಲಿದೆ. ಇದರ ಜತೆಗೆ ಇತರರು ತುರ್ತು ಅಥವಾ ಅಗತ್ಯ ಇಲ್ಲದೆ ಕೇರಳದಿಂದ ರಾಜ್ಯಕ್ಕೆ ಆಗಮಿಸಬಾರದು ಮತ್ತು ಇಲ್ಲಿಂದ ಅಲ್ಲಿಗೆ ತೆರಳಬಾರದು ಎಂದು ರಾಜ್ಯ ಆರೋಗ್ಯ ಸಚಿವಾಲಯದ ಹೆಚ್ಚು ವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆ, ನರ್ಸಿಂಗ್‌ ಹೋಂ, ಕಾಲೇಜು, ಕಚೇರಿ, ಹೊಟೇಲ್‌, ಕಾರ್ಖಾನೆ, ಉದ್ಯಮಗಳ ಮಾಲಕರು ಮತ್ತು ನಿರ್ವಾಹಕರು ಕೇರಳದಲ್ಲಿರುವ ತಮ್ಮ ವಿದ್ಯಾರ್ಥಿಗಳು, ಉದ್ಯೋಗಿಗಳನ್ನು ಅಕ್ಟೋಬರ್‌ ಅಂತ್ಯದವರೆಗೆ ಬಾರದಂತೆ ತಡೆಯಬೇಕು. ಈಗಾಗಲೇ ಬಂದಿ ರುವವರು ಅಕ್ಟೋಬರ್‌ ಅಂತ್ಯದವರೆಗೆ ಕೇರಳಕ್ಕೆ ಪ್ರಯಾಣಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.

ನಕಲಿ ಆರ್‌ಟಿ-ಪಿಸಿಆರ್‌ ವರದಿ ತಂದಿರುವ ಪ್ರಕರಣ, ನೆಗೆಟಿವ್‌ ವರದಿ ಇದ್ದರೂ ಕರ್ನಾಟಕದಲ್ಲಿ ಪರೀಕ್ಷೆ ನಡೆಸಿ ದಾಗ ಸೋಂಕು ದೃಢಪಟ್ಟದ್ದು ಇದೆ. ಇದರಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಂಕು ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿಫಾ ಕಟ್ಟೆಚ್ಚರ :

Advertisement

ನಿಫಾ ಸೋಂಕಿನ ಹಿನ್ನೆಲೆಯಲ್ಲಿ ಕೇರಳದ ಗಡಿಯ ದಕ್ಷಿಣಕನ್ನಡ, ಉಡುಪಿ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ನಿಗಾ ವಹಿಸಲು ಸರಕಾರ ಆದೇಶಿಸಿದೆ. ಕೇರಳದಿಂದ ಆಗಮಿ ಸುವವರ ಮೇಲೆ ನಿಗಾ ಇರಿಸುವುದು, ಜನಜಾಗೃತಿ, ನಿಫಾ ಲಕ್ಷಣ ಹೊಂದಿರು ವವರನ್ನು ಗುರುತಿಸಿ ಪರೀಕ್ಷೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next