Advertisement

ಲಾಕ್ ಡೌನ್ ಆತಂಕ : ರಾಜ್ಯದಲ್ಲಿ ಇಂದು 1,187 ಕೋವಿಡ್ ಪ್ರಕರಣಗಳು, 6 ಸಾವು

07:18 PM Jan 02, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸತತ ಎರಡನೇ ದಿನವೂ 1,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಆರು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

Advertisement

ಆರೋಗ್ಯ ಇಲಾಖೆ ತನ್ನ ಬುಲೆಟಿನ್‌ನಲ್ಲಿ 1,187 ಕೋವಿಡ್ ಪ್ರಕರಣಗಳು ಮತ್ತು ಆರು ಸಾವು ಸಂಭವಿಸಿರುವ ಬಗ್ಗೆ ತಿಳಿಸಿದೆ. ಇಂದು 275 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ, ಒಟ್ಟು ಚೇತರಿಕೆಯ ಸಂಖ್ಯೆಯನ್ನು 29,60,890 ಕ್ಕೆ ಏರಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 10,292 ಆಗಿದೆ.

ಪ್ರಕರಣಗಳ ಹೆಚ್ಚಳವು ಬೆಂಗಳೂರು ನಗರದದಲ್ಲಿ ದಾಖಲಾಗಿದ್ದು,ಇಂದು 923 ಸೋಂಕುಗಳು ಮತ್ತು ಮೂರು ಸಾವು ಸಂಭವಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಕಟ್ಟೆಚ್ಚರ: ಜನ ಸಹಕಾರ ಕೊಟ್ಟರೆ ಲಾಕ್‌ಡೌನ್ ಇಲ್ಲ; ಸಿಎಂ

ದಕ್ಷಿಣ ಕನ್ನಡದಲ್ಲಿ 63, ಉಡುಪಿಯಲ್ಲಿ 54, ಮೈಸೂರಿನಲ್ಲಿ 20, ಬೆಳಗಾವಿ, ತುಮಕೂರು ಮತ್ತು ಕೊಡಗಿನಲ್ಲಿ ತಲಾ 12 ಮತ್ತು ಮಂಡ್ಯದಲ್ಲಿ 10 ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ.

Advertisement

ಬೆಂಗಳೂರಿನ ಜೊತೆಗೆ ತುಮಕೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ.

ದಿನದ ರಾಜ್ಯದ ಸಕಾರಾತ್ಮಕತೆಯ ಪ್ರಮಾಣವು 1.08 ಶೇಕಡಾ ಮತ್ತು ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 0.5 ರಷ್ಟಿದೆ.

ಭಾನುವಾರ 91,003 ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 1,08,911 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೆ ಪರೀಕ್ಷಿಸಿದ ಮಾದರಿಗಳ ಸಂಚಿತ ಸಂಖ್ಯೆಯನ್ನು 5.66 ಕೋಟಿಯಾಗಿದೆ.

ಇಂದು 19,729 ಲಸಿಕೆಗಳನ್ನು ನೀಡಲಾಗಿದ್ದು, ಇದುವರೆಗೆ ಒಟ್ಟು ಲಸಿಕೆಗಳ ಸಂಖ್ಯೆಯನ್ನು 8.64 ಕೋಟಿಗೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next