ಗುವಾಹಟಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಇಂದು ನಡೆದ ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ 33 ರನ್ ಅಂತರದ ಗೆಲುವು ಸಾಧಿಸಿದೆ.
ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ನಾಯಕ ಮನೀಷ್ ಪಾಂಡೆ 51 ರನ್ ಮಾಡಿದರೆ, ಮಯಾಂಕ್ ಅಗರ್ವಾಲ್ 28, ಅನಿರುದ್ಧ ಜೋಶಿ 23 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಸರ್ವೀಸಸ್ ಸತತ ವಿಕೆಟ್ ಕಳೆದುಕೊಂಡಿತು. ಸರ್ವೀಸಸ್ ಪರ ನಾಯಕ ಗಹ್ಲೌತ್ ರಾಹುಲ್ ಸಿಂಗ್ 34 ರನ್ ಗಳಿಸಿದರೆ, ಅಮಿತ್ ಪಚ್ಚರ 23 ರನ್ ಗಳಿಸಿದರು. 20 ಓವರ್ ಗಳಲ್ಲಿ ಸರ್ವೀಸಸ್ ಎಂಟು ವಿಕೆಟ್ ಕಳೆದುಕೊಂಡು 109 ರನ್ ಮಾತ್ರ ಗಳಿಸಿತು.
ಇದನ್ನೂ ಓದಿ:ಬಿಗ್ ಬಾಸ್ ಮತ್ತು ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ನ ಬ್ಯಾಕ್‌ಲೆಸ್ ಉಡುಪು..!
ಕರ್ನಾಟಕ ಪರ ವಿಜಯ್ ಕುಮಾರ್ ವೈಶಾಖ್ ಮೂರು ವಿಕೆಟ್, ದರ್ಶನ್ ಎರಡು ವಿಕೆಟ್ ಕಿತ್ತರೆ, ಸುಚಿತ್ ಮತ್ತು ಗೌತಮ್ ತಲಾ ಒಂದು ವಿಕೆಟ್ ಕಿತ್ತರು. ಆಡಿದ ಮೂರು ಪಂದ್ಯವನ್ನೂ ಗೆದ್ದಿರುವ ಕರ್ನಾಟಕ 12 ಅಂಕಗಳೊಂದಿಗೆ ಎಲೈಟ್ ಗ್ರೂಪ್ ಬಿಯಲ್ಲಿ ಮೊದಲ ಸ್ಥಾನದಲ್ಲಿದೆ.