ಗೋಣಿಕೊಪ್ಪಲು: ಕರ್ನಾ ಟಕ ರೀಜನ್ ಐಸಿಎಸ್‌ಇ ಸ್ಕೂಲ್ ರೈಫಲ್ ಶೂಟಿಂಗ್ ಸ್ಪರ್ಧೆ ಎರಡು ದಿನಗಳ ಕಾಲ ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್)ಯಲ್ಲಿ ನಡೆಯಿತು. ಕೊಡಗು ಸೇರಿದಂತೆ ಮೈಸೂರು, ಬೆಂಗಳೂರು, ಹಾಸನ, ಮಂಡ್ಯ ಜಿಲ್ಲೆಯ 14 ಶಾಲೆಗಳ 70 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
8ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಓಪನ್ ಸೈಟ್, ಪೀಪ್ ಸೈಟ್,ಪಿಸ್ತೂಲ್ ಸೈಟ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಪ್ರತಿ ಸ್ಪರ್ಧಿಗಳು 90 ನಿಮಿಷದಲ್ಲಿ 60 ಶೂಟ್‌ಗಳನ್ನು ಪ್ರಯೋಗಿಸಲು ಅವಕಾ ಶವಿತ್ತು. ಇದರಲ್ಲಿ ವಿಜೇತರಾದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಕಾಪ್ಸ್ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯನ್ನು ಕೂರ್ಗ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್ ಉದ್ಘಾಟಿಸಿದರು.
ಶಿಕ್ಷಕ ಗಣೇಶ್, ಬೆಂಗಳೂರಿನ ದೀರೇಂದ್ರ ಸಿಂಗ್, ಮುಂಬೈನ ಪ್ರತೀಕ್ ದೇಶಮುಖ್ ಸ್ಪರ್ಧೆ ನಡೆಸಿಕೊಟ್ಟರು. ಎದುರಿಗಿರಿಸಿದ್ದ ಪಾಯಿಂಟ್ ವೃತ್ತದತ್ತ ಸ್ಪರ್ಧಿಗಳು ಏಕಾಗ್ರತೆಯಿಂದ ಗುರಿಯಿಟ್ಟು ಗುಂಡು ಹಾರಿಸುತ್ತಿದ್ದುದು ಕಂಡು ಬಂದಿತು.
ಕಾಪ್ಸ್ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಿತು. ಹೊರಗೆ ಮಳೆ ಜಿನುಗುತ್ತಿದ್ದರೆ ಒಳಗೆ ಬಂದೂಕಿನ ಶಬ್ದ ರಣಗುಡುತ್ತಿತ್ತು.