Advertisement

Karnataka; ಶೀಘ್ರವೇ 10 ಸಾವಿರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

08:21 PM Mar 08, 2024 | Team Udayavani |

ಕಲಬುರಗಿ: ರಾಜ್ಯದಲ್ಲಿ ಶಿಕ್ಷಕರು ಮತ್ತು ಮಕ್ಕಳ ಅನುಪಾತ ಸರಿದೂಗಿಸುವ ಸುಪ್ರೀಂಕೋರ್ಟ್‌ ಆದೇಶದಂತೆ ಶೀಘ್ರವೇ ಹತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 76 ಸಾವಿರ ಶಾಲೆಗಳಿವೆ. ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಂದ ಮೂರು ಸಾವಿರ ಶಿಕ್ಷಕರು ವರ್ಗವಾಗಿ ಹೋದರು. ಇದರಿಂದಾಗಿ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆಯಾಗಿದೆ ಎಂದ ಅವರು, ಈಗಾಗಲೇ 14 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಪೈಕಿ 12 ಸಾವಿರ ಶಿಕ್ಷಕರು ನೇಮಕವಾಗಿ ಪಾಠ ಮಾಡುತ್ತಿದ್ದಾರೆ. ಕೆಲವರಿಗೆ ತಾಂತ್ರಿಕ ತೊಂದರೆ ಎದುರಾಗಿದೆ ಎಂದರು.

“ಅಕ್ಷರ ಮಿತ್ರ’ ಯೋಜನೆಯಡಿ 18 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 14 ಸಾವಿರ ಶಿಕ್ಷಕರಲ್ಲಿ ಕಲ್ಯಾಣ ಕರ್ನಾಟಕಕ್ಕೆ 3900 ಶಿಕ್ಷಕರು ಬಂದಿದ್ದಾರೆ. ಅವರಿಂದ ಉತ್ತಮ ಬೋಧನೆ ನೀರಿಕ್ಷೆ ಮಾಡಲಾಗುತ್ತಿದೆ ಎಂದರು.

ಕನ್ನಡ ಶಾಲೆಗಳನ್ನು ಜೀವಂತವಾಗಿಟ್ಟುಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರತಿ ವರ್ಷ 20ಸಾವಿರ ಶಿಕ್ಷಕರಿಗೆ ಬೇಸಿಗೆ ಅವಧಿಯಲ್ಲಿ ತರಬೇತಿ ನೀಡಲು ಯೋಜಿಸಿದ್ದೇವೆ. ಇದರಿಂದಾಗಿ ಕನ್ನಡ ಶಾಲೆಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲಿದೆ ಎಂದರು.

ವರ್ಷಕ್ಕೆ ಮೂರು ಎಕ್ಸಾಮ್‌ ಇರ್ಲಿ
ಅಂತಾ ಮಕ್ಕಳೇ ಹೇಳಿದ್ದು: ಸಚಿವ
ಮೆಟ್ರಿಕ್‌ ಮತ್ತು ಪಿಯುಸಿ ಎರಡನೇ ವರ್ಷದ ಮಕ್ಕಳಿಗೆ ವರ್ಷಕ್ಕೆ ಮೂರು ಪರೀಕ್ಷೆ ನಡೆಸುವ ಸಂಬಂಧ ಕೆಲವರು ಮತ್ತು ವಿರೋಧಪಕ್ಷಗಳು ಸುಖಾ ಸುಮ್ಮನೆ ವಿವಾದ ಸೃಷ್ಟಿಸಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಈ ನಿಟ್ಟಿನಲ್ಲಿ ನಾವು ಪ್ರಯೋಗ ಮಾಡಿದ ಮೇಲೆಯೇ ರಾಜ್ಯದಲ್ಲಿ ವಿಸ್ತರಣೆ ಮಾಡಿದ್ದೇವೆ. ಇದಕ್ಕೆ ನನಗೆ ಮಕ್ಕಳೇ ಪ್ರೇರಣೆ. ಅವರೇ ಮೂರು ಪರೀಕ್ಷೆ ಇರಲಿ ಎಂದು ಒಪ್ಪಿಗೆ ಕೊಟ್ಟಿದ್ದಾರೆ ಎಂದರು.

ವಾರ್ಷಿಕ ಪರೀಕ್ಷೆ ಫೇಲಾಗುವ, ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಇದು ವರದಾನ. ಇದರಿಂದ ಅವರು ಪುನಃ ಕೆಲವೇ ದಿನಗಳಲ್ಲಿ ಪರೀಕ್ಷೆ ಬರೆದು ಪಾಸಾಗಿ ಉನ್ನತ ಶಿಕ್ಷಣಕ್ಕೂ ಹೋಗಬಹುದು. ಅಲ್ಲದೇ, ಫಲಿತಾಂಶ ಉತ್ತಮಗೊಳಿಸಿಕೊಳ್ಳಬಹುದು. ಇದು ಅವರಿಗೆ ಅನುಕೂಲ. ಇಲ್ಲದೆ ಹೋದರೆ ಅನುತ್ತೀರ್ಣವಾಗಿ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮೂರು ಪರೀಕ್ಷೆಯ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಕೋರ್ಟ್‌ ತೀರ್ಪು ಬರಲಿ: ತಂದೆ ಆದಾಯ ಪ್ರಮಾಣಪತ್ರ ಸಲ್ಲಿಸಿ ನೇಮಕವಾಗಿರುವ 800 ಮಹಿಳಾ ಶಿಕ್ಷಕರದ್ದು ಸಮಸ್ಯೆ ಇದೆ. ಇದನ್ನು ಸರಿ ಮಾಡಿಕೊಳ್ಳಲು ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ತೀರ್ಪು ಬಂದ ಬಳಿಕ ಸರಿ ಹೋಗಬಹುದು. ಇದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಯಡವಟ್ಟು. ಅದನ್ನು ಕೂಡ ಸರಿ ಮಾಡಲಾಗುತ್ತಿದೆ. ಶೀಘ್ರವೇ ಅವರು ಶಾಲೆಗಳಲ್ಲಿ ಪಾಠ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಅಕ್ಷರ ಮಿತ್ರ’ ಯೋಜನೆಯಡಿ 18 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 14 ಸಾವಿರ ಶಿಕ್ಷಕರಲ್ಲಿ ಕಲ್ಯಾಣ ಕರ್ನಾಟಕಕ್ಕೆ 3900 ಶಿಕ್ಷಕರು ಬಂದಿದ್ದಾರೆ. ಅವರಿಂದ ಉತ್ತಮ ಬೋಧನೆ ನೀರಿಕ್ಷೆ ಮಾಡಲಾಗುತ್ತಿದೆ ಎಂದರು.

ಕನ್ನಡ ಶಾಲೆಗಳನ್ನು ಜೀವಂತವಾಗಿಟ್ಟುಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರತಿ ವರ್ಷ 20ಸಾವಿರ ಶಿಕ್ಷಕರಿಗೆ ಬೇಸಿಗೆ ಅವಧಿಯಲ್ಲಿ ತರಬೇತಿ ನೀಡಲು ಯೋಜಿಸಿದ್ದೇವೆ. ಇದರಿಂದಾಗಿ ಕನ್ನಡ ಶಾಲೆಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಬುದ್ಧಿವಂತರು. ಅವರಿಂದ ಬೋಧನೆ ಕೆಲಸವನ್ನು ನಾವು ಸರಿಯಾಗಿ ತೆಗೆದಿಲ್ಲ. ಅದರಿಂದಾಗಿ ಕಲ್ಯಾಣದಲ್ಲಿ ಶಿಕ್ಷಣ ತೆವಳುತ್ತಿದೆ. ಈಗ ಶಿಕ್ಷಕರ ಕ್ಷಮತೆ ಬಳಕೆ ಮಾಡಿಕೊಂಡು ಕನ್ನಡ, ಕೆಪಿಎಸ್‌ ಮತ್ತು ಆದರ್ಶ ಶಾಲೆಗಳನ್ನು ಬಲಗೊಳಿಸುತ್ತಿದ್ದೇವೆ. ಫಲಿತಾಂಶದಲ್ಲಿ ಈ ಭಾಗದ ಜಿಲ್ಲೆಗಳು ಮೇಲೇರುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಮಧು ಬಂಗಾರಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next