Advertisement

ಕನ್ನಡ ನುಡಿ ಚೆನ್ನ, ಕನ್ನಡಿಗರ ಮನಸ್ಸು ಚಿನ್ನ

12:42 PM Nov 03, 2019 | Hari Prasad |

ಕನ್ನಡದ ಮಾತು ಚೆನ್ನ, ಕನ್ನಡದ ನೆಲ ಚೆನ್ನ, ಕನ್ನಡಿಗರ ಮನಸ್ಸು ಚಿನ್ನ ಆದರೆ ಕನ್ನಡಕ್ಕೆ ಇಂದು ತನ್ನ ನೆಲದಲ್ಲಿಯೇ ಬೆಲೆ ಇಲ್ಲದಂತಾಗಿದೆ. ಕನ್ನಡಿಗರು ಕನ್ನಡ ಮಾತು ಮರೆತು ಬೇರೆ ಭಾಷೆಯಲ್ಲಿ ವ್ಯವಹರಿಸುತ್ತಿದ್ದರೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುತ್ತಿದ್ದ ಜನ ಇಂದು ಕನ್ನಡವನ್ನು ಮರೆತು ಬಿಟ್ಟಿದ್ದಾರೆ. ಕನ್ನಡದ ಕಂಪು ಕರುನಾಡಿನಲ್ಲಿ ಮಾತ್ರವಲ್ಲದೇ ಇಡೀ ಜಗತ್ತನ್ನೇ ಹಬ್ಬಿದೆ. ಅದರೆ ಕನ್ನಡಿಗರಿಗೆ ಮಾತ್ರ ಇದರ ಪರಿವೇ ಇಲ್ಲ. ಕನ್ನಡ ರಾಜ್ಯೋತ್ಸವ ಕೇವಲ ಒಂದು ತಿಂಗಳಿಗೆ ಸೀಮಿತವಾಗಿದೆ, ಎನ್ನುವ ಭಾವನೆ ಬೆಳೆದು ಬಿಟ್ಟಿದೆ. ಈಗಿನ ದಿನಗಳಲ್ಲಿ ಕನ್ನಡ ಎನ್ನುವುದು ಬರೀ ಗ್ರಂಥಾಲಯಕ್ಕೆ ಸೀಮಿತವಾಗಿದೆ. ಕಾಲ ಉರುಳಿದಂತೆ ಕನ್ನಡ ತನ್ನತನವನ್ನು ಕಳೆದುಕೂಂಡು ಬರುತ್ತಿದೆ.

Advertisement

ಇಂದಿನ ದಿನಗಳಲ್ಲಿ ಇಂಟರ್‌ನೆಟ್ ಬಳಸುವವರೇ ಜಾಸ್ತಿ. ಮೊದಲು ಯಾವುದೇ ಒಂದು ವಿಷಯ ತಿಳಿದುಕೊಳ್ಳಬೇಕಾದರೆ ಗ್ರಂಥಾಲಯಕ್ಕೆ ಹೋಗುತ್ತಿದ್ದೆವು. ಆದರೆ ಈಗ ಅದನ್ನು ಬಿಟ್ಟು ಅಂತರ್ಜಾಲವನ್ನು ಅವಲಂಬಿಸುತ್ತಿದ್ದೇವೆ. ‘ಹೀಗಿರುವಾಗ ಕನ್ನಡದ ಸಾಹಿತ್ಯ ಪರಂಪರೆಗಳು ದೂರವಾಗುತ್ತಿವೆ. ಜನರಿಗೆಎಲ್ಲಾ ಮಾಹಿತಿಗಳು ಇದರಲ್ಲಿಯೇ ಸಿಗುತ್ತಿದೆ. ಹಾಗಾಗಿ ಎಲ್ಲಾನಾವು ಅಂತರ್ಜಾಲದ ಕಡೆ ಒಗ್ಗಿಕೂಂಡು ಹೋಗಿದೆ. ಕನ್ನಡತನ್ನ ನೆಲದಲ್ಲಿಯೆ ಜಾಗ ಹುಡುಕುವ ಸ್ಥಿತಿಗೆ ಬಂದೊದಗಿದೆ. ಪ್ರತಿಯೊಂದು ವಿಷಯದಲ್ಲಿಯೂ ಕನ್ನಡಕ್ಕಿಂತ ಬೇರೆ ಭಾಷೆಯ ಪರಿಣಾಮವೇ ಹೆಚ್ಚು.

ಕನ್ನಡ ಕನ್ನಡ ಎಂದು ಹೇಳಿಕೊಂಡು ತಿರುಗುವವರು ಮಾತ್ರ ಇಂದು ನಮ್ಮ ನಡುವೆ ಇದ್ದಾರೆ. ಆದರೆ ಕನ್ನಡವನ್ನು ಉಳಿಸುವ ಕೆಲಸ ಮಾತ್ರ ಮಾಡುತ್ತಿಲ್ಲ. ನಮ್ಮ ಜನ ಕನ್ನಡ ಮಾತನಾಡುವಾಗ ಬಹುತೇಕ ಪರಕೀಯ ಭಾಷೆಗಳು ನಮ್ಮನ್ನುಆಕ್ರಮಿಸುತ್ತಿವೆ. ಕನ್ನಡ ಅಳಿವಿನ ಅಂಚಿನಲ್ಲಿ ಇದೆ ಎಂದು ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತವೆ. ಆದರೆ ಅದು ಒಮ್ಮೆಗೆ ಮಾತ್ರ ಅದರ ಪರಿಣಾಮ ಬೀರುತ್ತದೆ.  ಮತ್ತೆ ಇದು ಮೊದಲಿನ ರೀತಿಯೇ ಸಾಗುತ್ತದೆ. ಕನ್ನಡ ಶಾಲೆ ಉಳಿಯ ಬೇಕು ಎಂದು ಬೊಬ್ಬೆ ಹೊಡಿಯುತ್ತಾರೆ, ಆದರೆ ಅವರ ಮಕ್ಕಳನ್ನೇ ಆಂಗ್ಲ ಮಾದ್ಯಮ ಶಾಲೆಗೆ ಸೇರಿಸುತ್ತಾರೆ. ಪ್ರತಿ ವರ್ಷಅದೆಷ್ಟೊ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಆದರೆ ಅಲ್ಲಿ ಮಾತ್ರ ಕನ್ನಡದ ಕೂಗು ಮೊಳಗಲೇ ಇಲ್ಲ.

ಇತ್ತೀಚೀನ ದಿನಗಳಲ್ಲಿ ತಂತ್ರಜ್ಞಾನ ಅತೀ ವೇಗವಾಗಿ ಬೆಳೆಯುತ್ತಿದೆ. ಅದರಲ್ಲಿಯೂ, ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್‌ಗಳು ಇಂದು ಆವರಿಸಿಕೊಂಡಿದೆ. ವಾಟ್ಸ್ಯಾಪ್, ಫೇಸ್‌ಬುಕ್, ಹೀಗೆ ಹಲವಾರು ಆಪ್‌ಗಳು ಬಂದಿವೆ. ಅದರಲ್ಲಿ ಸಂದೇಶವನ್ನು ಕಳುಹಿಸಲು ಇದು ಒಂದು ಸೂಕ್ತ ಮಾರ್ಗ.  ಕನ್ನಡವನ್ನು ಕನ್ನಡದಲ್ಲಿ ಬರೆಯುವ ಬದಲು ಆಂಗ್ಲದಲ್ಲಿಯೇ ಬರೆಯುತ್ತಾರೆ. ಮತ್ತೆ ಅದನ್ನು ಕನ್ನಡವೆಂದು ಓದುತ್ತಾರೆ. ಹೀಗಿರುವಾಗ, ಕನ್ನಡಿಗರಿಗೆ ಕನ್ನಡದ ಬಗ್ಗೆ ಅರಿವು ದೂರವಾಗಿದೆ ಎಂದರೆ ತಪ್ಪಾಗಲಾರದು. ಕರುನಾಡಿನಲ್ಲಿಅನ್ಯ ಭಾಷೆಗಳ ಪ್ರಭಾವ ಹೆಚ್ಚಿನ ರೀತಿಯಲ್ಲಿದೆ. ಬೆಂಗಳೂರಿನಲ್ಲಿ ನಾವು ಇಂದು ಕೆಲಸಕ್ಕೆ ಹೋಗಬೇಕಾದರೆ, ಅಲ್ಲಿ ಕನ್ನಡದ ಬದಲು ಆಂಗ್ಲ ಭಾಷೆ ತಿಳಿದಿರಬೇಕು. ಆದರೆ ಮಾತ್ರಅಲ್ಲಿ ನಾವು ಬದುಕುಳಿಯಲು ಸಾಧ್ಯ. ಇಂದಿನ ದಿನದಲ್ಲಿ ಕನ್ನಡದ ಎಂದರೆ ಎನ್ನಡ, ಎನ್ನುವ ಪರಿಸ್ಥಿತಿ ನಾವು ತಲುಪಿದ್ದೇವೆ.

ಆದರೆ ಕನ್ನಡಿಗರು ಹೃದಯವಂತರು, ಅವರು ಪ್ರತಿಯೊಂದು ಭಾಷೆಗೆ ಒಗ್ಗಿಕೊಳ್ಳುತ್ತಾರೆ. ಆದರೆ ಕನ್ನಡಕ್ಕೆ ಹೊಂದಿ ಕೊಳ್ಳುವವರು ಮಾತ್ರ ತುಂಬಾ ವಿರಳ. ನಾವು ಕನ್ನಡವನ್ನುಅವರಿಗೆ ಕಲಿಸುವ ಬದಲು, ನಾವೇ ಅವರ ಭಾಷೆಯನ್ನುಕಲಿತು ಅವರೊಂದಿಗೆ ಒಗ್ಗಿಕೊಳ್ಳುತ್ತೇವೆ. ನಾವು ಹೀಗೆ ಮಾಡುವುದು ಬಿಟ್ಟುಅವರನ್ನು ಕನ್ನಡ ಕಲಿಯುವಂತೆ ಮಾಡಬೇಕು. ಆಗ ನಮ್ಮ ಕನ್ನಡ ನಮ್ಮ ನೆಲದಲ್ಲಿ ಬೇರೂರಲು ಮತ್ತುಇನ್ನು ಹೆಚ್ಚು ಕಾಲ ಉಳಿಯಲು ಸಾಧ್ಯ.

Advertisement

ಸ್ವಾತಿ ಉಳಿಪ್ಪು

ದ್ವೀತಿಯ ಎಂ.ಸಿ.ಜೆ, ವಿವೇಕಾನಂದ ಕಾಲೇಜು, ನೆಹರು ನಗರ ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next