Advertisement

ಕರ್ನಾಟಕ ಮಿತ್ರ ಮಂಡಲ ಕಲ್ಯಾಣ್‌ನಿಂದ ಕರ್ನಾಟಕ ರಾಜ್ಯೋತ್ಸವ  

04:47 PM Nov 10, 2018 | Team Udayavani |

ಮುಂಬಯಿ: ಕಲ್ಯಾಣ್‌ ಪೂರ್ವದ ಕರ್ನಾಟಕ ಮಿತ್ರ ಮಂಡಲ ಕಲ್ಯಾಣ್‌ ಇದರ ವತಿಯಿಂದ  ಕರ್ನಾಟಕ ರಾಜ್ಯೋತ್ಸವ ಆಚರಣೆಯು ನ. 4ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಅವರ ಮಾರ್ಗದರ್ಶನ ಹಾಗೂ ಅಧ್ಯಕ್ಷ ದಿವಾಕರ ಸಾಲ್ಯಾನ್‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಉದ್ಯಮಿ ರೋಶನ್‌ ಕೋಟ್ಯಾನ್‌ ಅವರು ಅತಿಥಿಯಾಗಿ ಉಪಸ್ಥಿತರಿದ್ದರು.

Advertisement

 ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಅಧ್ಯಕ್ಷ ದಿವಾಕರ ಸಾಲ್ಯಾನ್‌, ರೋಶನ್‌ ಕೋಟ್ಯಾನ್‌, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೋಶಾ ಧಿಕಾರಿ ಸತೀಶ್‌ ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಪೂಜಾರಿ, ಮಹಿಳಾ ವಿಭಾಗದ ಪ್ರೀತಿ ಪೂಜಾರಿ, ಸುಜಾತಾ ಕೋಟ್ಯಾನ್‌ ಉಪಸ್ಥಿತರಿದ್ದರು. ಅತಿಥಿಯಾಗಿದ್ದ ರೋಶನ್‌ ಕೋಟ್ಯಾನ್‌ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ರೋಶನ್‌ ಕೋಟ್ಯಾನ್‌ ಅವರು, ಮಕ್ಕಳು ಶಿಕ್ಷಣದೊಂದಿಗೆ ಸುಸಂ ಸ್ಕೃತರಾಗಿ ಬೆಳೆಯಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ದಿವಾಕರ ಸಾಲ್ಯಾನ್‌ ಅವರು ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಇಂದಿಗೂ ಕನ್ನಡ  ತನ್ನತನ ಕಾಯ್ದುಕೊಂಡಿರುವುದು ಅಭಿನಂದನೀಯ. ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಲಭಿಸಿದೆ. ಹಲವಾರು ಪ್ರಾಂತ್ಯಗಳಲ್ಲಿ ಹಂಚಿಹೋಗಿರುವ ಕನ್ನಡಿಗರನ್ನು ಒಂಗ್ಗೂಡಿಸಿ ಕರ್ನಾಟಕದ ಏಕೀ ಕರಣದ ಕನಸಿಗೆ ಸಹಕರಿಸಿದ ಸಾವಿರಾರು ಕನ್ನಡಾಭಿಮಾನಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕನ್ನಡದ ಕಂಪನ್ನು ಎಲ್ಲೆಡೆಗೆ ಪಸರುತ್ತಾ ನಾಡಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಉಳಿಸಿ-ಬೆಳೆಸುವಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದರು.

ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಲು ಸಹಕರಿಸಿದ ಕಲ್ಯಾಣ್‌ ಪೂರ್ವದ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಶಿಕ್ಷಣ ಸೇವೆ ಇದೇ ರೀತಿಯಲ್ಲಿ ಮುಂದುವರಿಯಲಿ. ವಿದ್ಯಾರ್ಥಿ ವೇತನಕ್ಕಾಗಿ ಸಹಕರಿಸಿದ ಸ್ಥಳೀಯ ಶಾಸಕ ಗಣಪತ್‌ ಗಾಯಕ್ವಾಡ್‌, ನಗರ ಸೇವಕ ಮಹೇಶ್‌ ಗಾಯಕ್ವಾಡ್‌, ಉದ್ಯಮಿ ಭಾಸ್ಕರ್‌ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿದ್ಯಾರ್ಥಿ ವೇತನಕ್ಕಾಗಿ ಧನ ಸಹಾಯ ನೀಡಿದ ಮುಂಬಯಿ ಎಡೆನ್‌ವೆಲ್‌ ಟ್ರಸ್ಟ್‌ ಗೆ ಕೃತಜ್ಞತೆ ಸಲ್ಲಿಸಲಾಯಿತು. 

Advertisement

ಟ್ರಸ್ಟ್‌ನಿಂದ ಧನ ಸಹಾಯವನ್ನು ಪಡೆಯಲು ಸಹಕರಿಸಿದ ಸಂಘದ ಜತೆ ಕಾರ್ಯದರ್ಶಿ ರಾಜೇಶ್‌ ಪೂಜಾರಿ ಅವರನ್ನು ಗೌರವಿಸಲಾಯಿತು. 

ವಿದ್ಯಾರ್ಥಿವೇತನ ವಿತರಣೆ
ಇದೇ ಸಂದರ್ಭ ಸ್ಥಳೀಯ 37 ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನವನ್ನಿತ್ತು ಗೌರವಿಸಲಾಯಿತು. 120 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.  ರಾಜೇಶ್‌ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. 
ಸುಜಾತಾ ಕೋಟ್ಯಾನ್‌ ವಂದಿಸಿ ದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮವು ಕೊನೆಗೂಂಡಿತು. ಸಂಘದ ಸದಸ್ಯರು, ಪದಾಧಿಕಾರಿಗಳು, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next