Advertisement

ಡೊಂಬಿವಲಿ ಮಹಾನಗರ ಕನ್ನಡ ಸಂಘದಿಂದ ಕರ್ನಾಟಕ ರಾಜ್ಯೋತ್ಸವ 

05:02 PM Dec 16, 2018 | |

ಡೊಂಬಿವಲಿ: ಭಾಷಾ ವಾರು ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದ ಕನ್ನಡದ ಕಟ್ಟಾಳುಗಳ ತ್ಯಾಗ, ಬಲಿದಾನವನ್ನು ಮರೆಯಬಾರದು ಎಂದು ಉದ್ಯಮಿ ಗುರುರಾಜ ಅಗ್ನಿಹೋತ್ರಿ ನುಡಿದರು.

Advertisement

ಡಿ. 8ರಂದು ಡೊಂಬಿವಲಿ ಪೂರ್ವದ ಶ್ರೀ ಗಣೇಶ ಮಂದಿರದ ವಕ್ರತುಂಡ ಸಭಾಗೃಹದಲ್ಲಿ ಸ್ಥಳೀಯ ಡೊಂಬಿವಲಿ ಮಹಾನಗರ ಕನ್ನಡ ಸಂಸ್ಥೆಯ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತ

ರಿದ್ದು ಮಾತನಾಡಿ, ಅಂದು ಕರ್ನಾ ಟಕದ ಏಕೀಕರಣಕ್ಕೆ ಧಾರವಾಡವೇ ವೇದಿಕೆಯಾದರೆ, ರಾ. ಹೆ. ದೇಶಪಾಂಡೆ, ಆಲೂರು ವೆಂಕಟರಾಯರು, ದ. ರಾ. ಬೇಂದ್ರೆ ಮತ್ತಿತರರು ಮುಂದಾಳತ್ವ ವಹಿಸಿದ್ದು, ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಲು ಗೋಕಾಕ ಚಳುವಳಿ ಹಾಗೂ ವರನಟ ಡಾ| ರಾಜ್‌ಕುಮಾರ್‌ ಅವರಂಥಹ ಮಹನೀಯರೆ ಕಾರಣ. ಹೊರ ನಾಡಿನಲ್ಲಿ 

ಕನ್ನಡ ಉಳಿದು ಬೆಳೆಯಲು ಸಮಸ್ತ ಕನ್ನಡದ ಮನಸು ಗಳು ಒಂದಾಗಬೇಕು. ಒಂದು ದಶಕದ ಮಹಾನಗರ ಕನ್ನಡ ಸಂಸ್ಥೆ ಶತಾಯುಷಿಯಾಗಲಿ ಎಂದರು.

ಇನ್ನೋರ್ವ ಅತಿಥಿ ಧಾರವಾಡದ ಖ್ಯಾತ ಉದ್ಯಮಿ ಶಿವಣ್ಣ ಬೆಲ್ಲದ ಅವರು ಕನ್ನಡದ ನಾಡು-ನುಡಿಯ ರಕ್ಷಣೆಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕೊಡುಗೆಯನ್ನು ವಿವರಿಸಿ, ನಾವು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ¤Â ನೀಡಿ ಇಂಗ್ಲಿಷ್‌ ಭಾಷೆಯನ್ನು ಐಚ್ಛಿಕಾ ಭಾಷೆಯನ್ನಾಗಿಕೊಳ್ಳಬೇಕು ಎಂದು ನುಡಿದರು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುರೇಂದ್ರ ಕುಬೇರ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಸಂಘ- ಸಂಸ್ಥೆಗಳನ್ನು ನಡೆ ಸುವುದು ಸುಲಭದ ಮಾತಲ್ಲ. ನಮ್ಮ ಸಿರಿವಂತ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆ ಉಳಿದು- ಬೆಳೆಯಬೇಕಾದರೆ ಅದನ್ನು ನಮ್ಮ ಮುಂದಿನ ಪೀಳಿಗೆಯ ಮನದಲ್ಲಿ ಬಿಂಬಿಸಬೇಕು. ಕನ್ನಡದ ಕೈಂಕರ್ಯಗಳಿಗೆ ಸಂಘ-ಸಂಸ್ಥೆಗಳು ಮುಂದೆ ಬರಬೇಕು. ನಮ್ಮ ಸಿರಿವಂತ ಕನ್ನಡ ಭಾಷೆಯನ್ನು ಗೌರವಿಸು ವುದರ ಜತೆಗೆ ಇತರ ಭಾಷೆಗಳನ್ನು ಗೌರವಿಸಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ  ಸತೀಶ್‌ ಆಲಗೂರು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನಾಡುನುಡಿಯ ರಕ್ಷಣೆಗೆ ನಮ್ಮ ಸಂಸ್ಥೆ ಬದ್ಧವಾಗಿದ್ದು, ಸಂಸ್ಥೆಯ ಅಭಿವೃದ್ಧಿಗೆ ಸಮಸ್ತ ಕನ್ನಡ ಮನಸುಗಳು ಸಹಕರಿಸ ಬೇಕು ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ಡಾ| ಬಿ. ಆರ್‌. ದೇಶಪಾಂಡೆ ಅವರು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವ ರಿಸಿದರು. 

ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗಮ ನೀಯ ಸಾಧನೆಗೈದ ಡಾ| ಸುಮಾ ದ್ವಾರಕಾನಾಥ್‌ ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕ ಡಾ| ಗಜಾನನ ಕುಲಕರ್ಣಿ ಅವರನ್ನು ಸಂಸ್ಥೆಯ ವಾರ್ಷಿಕ ಶ್ರೀ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕು| ಹುಯಿಲಗೋಳ ನೇಹಾ ಹೆಗಡೆ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ರಾಘವೇಂದ್ರ ಕುಲಕರ್ಣಿ, ಗೌರಿ ಹುಯಿಲಗೋಳ, ಶೀತಲ್‌ ಹುಯಿಲಗೋಳ ಅವರಿಂದ ಗಾಯನ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸುರೇಂದ್ರ ಕುಬೇರ  ಉಪಸ್ಥಿತರಿದ್ದರು.
ಶ್ರೀಧರ ಹುಯಿಲಗೋಳ, ವೆಂಕಟೇಶ ಕುಲಕರ್ಣಿ, ಎಸ್‌. ಜಿ. ಮಸಳಿ ಅತಿಥಿಗಳನ್ನು ಪರಿಚಯಿಸಿದರು. ವಾಸಂತಿ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ| ಅಜಿತ್‌ ಉಮಾರಾಣಿ ವಂದಿಸಿದರು. ಜಿ. ಬಿ. ಮಠಪತಿ, ಎಂ. ಆರ್‌. ಹೊಸಕೋಟಿ, ಪ್ರತಿಭಾ ಕುಲಕರ್ಣಿ ಅವರು ಸಹಕರಿಸಿದರು. ಸಂಸ್ಥೆಯ ಸದಸ್ಯರು, ತುಳು-ಕನ್ನಡಿಗರು ಉಪಸ್ಥಿತರಿದ್ದರು.

ನಲ್ವತ್ತು ವರ್ಷಗಳ ಹಿಂದೆ ತಾಯ್ನಾಡಿನಿಂದ ಬಂದಾಗ ಕನ್ನಡ ಭಾಷೆಯನ್ನು ಬೆಳೆಸಲು ಪ್ರೇರೇಪಿಸಿದ್ದು ಅಂದಿನ ಡೊಂಬಿವಲಿ ಕರ್ನಾಟಕ ಸಂಘ. ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಸಂಘಟನೆಯನ್ನು ಕಟ್ಟಬೇಕು ಎಂಬ ಕನಸು ಅನುಜಾ ಮಹಿಳಾ ಮಂಡಲದ ಮೂಲಕ ನನಸಾಯಿತು. ನನ್ನ ಸಾಧನೆಯ ಪ್ರೇರಣ ಶಕ್ತಿಯೇ ಅನುಜಾ ಮಹಿಳಾ ಸಂಸ್ಥೆಯಾಗಿದೆ. ಆದ್ದರಿಂದ ಈ ಪ್ರಶಸ್ತಿಯನ್ನು ಅನುಜಾ ಮಹಿಳಾ ಸಂಸ್ಥೆಗೆ ಪ್ರೀತಿ-ಗೌರವದಿಂದ ಅರ್ಪಿಸುತ್ತಿದ್ದೇನೆ. ನಿಮ್ಮ ಸಂಸ್ಥೆಯ ನಾಡು-ನುಡಿಯ ಸೇವೆಯನ್ನು ಕಂಡು ಸಂತೋಷವಾಗುತ್ತಿದೆ.
– ಡಾ| ಸುಮಾ ದ್ವಾರಕಾನಾಥ್‌, ಪ್ರಶಸ್ತಿ ಪುರಸ್ಕೃತರು

ನಾನೋರ್ವ ಕನ್ನಡಿಗ ಎಂಬ ಹೆಮ್ಮೆ ನನಗಿದೆ. ನಾನು ಇವತ್ತು ಏನನ್ನಾದರೂ ಸಾಧಿಸಿದ್ದರೆ ಅದಕ್ಕೆ ನನ್ನ ನಾಡು, ಸಮಾಜ, ತಂದೆ-ತಾಯಿ, ಗುರುಗಳ ಪ್ರೇರಣೆಯಾಗಿದೆ. ಮಹಾನಗರ ಕನ್ನಡ ಸಂಸ್ಥೆ ನೀಡಿದ ಶ್ರೀ ಪ್ರಶಸ್ತಿಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ. ನಿಮ್ಮ ನಾಡು-ನುಡಿ ಸೇವೆ ಇದೇ ರೀತಿಯಲ್ಲಿ ಮುಂದುವರಿಯಲಿ.
– ಡಾ| ಗಜಾನನ ಕುಲಕರ್ಣಿ, ಪ್ರಶಸ್ತಿ ಪುರಸ್ಕೃತರು 

ಚಿತ್ರ-ವರದಿ: ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next