Advertisement

ಹಾರೋಹಳ್ಳಿಯಲ್ಲಿ ಅರ್ಥಪೂರ್ಣ ರಾಜ್ಯೋತ್ಸವ

02:49 PM Nov 02, 2022 | Team Udayavani |

ಹಾರೋಹಳ್ಳಿ: ಕನ್ನಡ ಸಾಹಿತ್ಯ ಪರಿಷತ್‌, ರಾಜ್ಯ ರೈತ ಸಂಘ, ರೋಟರಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಬಸ್‌ ನಿಲ್ದಾಣದ ವೃತ್ತದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

Advertisement

ವೃತ್ತದಲ್ಲಿನ ಕನ್ನಡ ಧ್ವಜಕ್ಕೆ ಧ್ವಜವಂದನೆ ಸಲ್ಲಿಸಿದ ನೂರಾರು ಮಂದಿ ಕನ್ನಡ ಅಭಿಮಾನಿಗಳು, ಕನ್ನಡ, ರೈತ ಗೀತೆಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಿದರು.

ನಂತರ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಆನೆಕಲ್‌ ರಸ್ತೆ, ಬ್ರಾಹ್ಮಣ, ಸೀಗಡಿ, ರಂಗನಾಥ ಬೀದಿಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಿ, ಜನರಲ್ಲಿ ಕನ್ನಡಾಭಿಮಾನ ಮೆರೆಯುವಂತೆ ಅರ್ಥಪೂರ್ಣ ಮೆರವಣಿಗೆಯನ್ನು ನಡೆಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯದತ್ತ ಜನರು ಬಾರದೇ ಇರುವುದನ್ನು ಮನಗಂಡು ಸಾಹಿತ್ಯ ಪರಿಷತ್‌ ವತಿಯಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದಿನ ನಮ್ಮ ಅರ್ಥಪೂರ್ಣ ಆಚರಣೆಗೆ ಸಾರ್ವಜನಿಕರು, ಸಂಘಟನೆಗಳಿಂದ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಕರ್ನಾಟಕವೆಂದರೆ ಕೇವಲ ರಾಜ್ಯದ ಹೆಸರಲ್ಲ, ಭೂ ಪ್ರದೇಶವೂ ಅಲ್ಲ, ಭ್ರಾತೃತ್ವ, ಸಹಬಾಳ್ವೆ, ಜೀವನ ಶೈಲಿಗಳನ್ನು ಒಳಗೊಂಡ ನಾಡಾಗಿದೆ. ಜನಸಂಖ್ಯೆ ಸೇರಿದಂತೆ ಜಲ, ಖನಿಜ ಸಂಪತ್ತನ್ನು ಹೇರಳವಾಗಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಶ್ರೀಮಂತ ಕನ್ನಡಿಗರಾದ ನಾವು ಭಾಷಾಭಿಮಾನ ಬೆಳಸಿಕೊಂಡು ಕನ್ನಡ, ಭಾರತಾಂಬೆಯ ಸೇವೆಗೆ ಎಲ್ಲರೂ ಬದ್ಧರಾಗೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಶಿವಲಿಂಗಯ್ಯ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್‌. ಎಸ್‌.ಮುರಳೀಧರ್‌, ರೋಟರಿ ಮಾಜಿ ಅಧ್ಯಕ್ಷ ಮೊಹಮ್ಮದ್‌ ಏಜಾಜ್‌, ಯಾಕೂಬ್‌ ಪಾಷ, ಕನ್ನಡ ಪರ ಸಂಘಟನೆ ಮುಖಂಡರಾದ ಎ.ಪಿ.ಕೃಷ್ಣಪ್ಪ, ಆರ್‌.ವಿ.ನಾರಾಯಣ್‌, ಮುಡೇನಹಳ್ಳಿ ಜಯರಾಮು, ಕೋಟೆ ಕುಮಾರ್‌, ನರಸಿಂಹಯ್ಯ, ಜಿ.ಗೋವಿಂದಯ್ಯ, ರೈತ ಸಂಘದ ದೇವರಾಜು, ಹೊನ್ನೇಗೌಡ, ಗಜೇಂದ್ರಸಿಂಗ್‌, ಕೆನರಾ ಬ್ಯಾಂಕ್‌ ಸ್ವ ಉದ್ಯೋಗ ಸಂಸ್ಥೆಯ ನಿರ್ದೇಶಕ ಎಂ.ಎಸ್‌.ಸ್ವಾಮಿ ಸೇರಿದಂತೆ ಮುಖಂಡರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next