ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ನ(ಕೆಪಿಎಲ್) ಹೊಸ ಫ್ರಾಂಚೈಸಿ “ಬೆಂಗಳೂರು’ ತಂಡವನ್ನು ಕಲ್ಯಾಣಿ ಮೋಟಾರ್ಸ್ ಖರೀದಿಸಿದೆ. ಕೆಲವು ತಂಡಗಳು ಕೂಟದಿಂದ ಹೊರಹೋಗಿವೆ ಎನ್ನಲಾಗಿದೆ. ಹೀಗಾಗಿ ಮುಂದಿನ ಆವೃತಿಯಲ್ಲಿ 7 ತಂಡಗಳು ಮಾತ್ರ ಸ್ಪರ್ಧಿಸಲಿವೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದಿನ ಆವೃತ್ತಿಯಲ್ಲಿ ಆಡಿರುವ ಬೆಂಗಳೂರು ಬ್ರಿಗೇಡಿಯರ್,ಬೆಂಗಳೂರು ಪ್ರಾವಿಡೆಂಟ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಆಡುತ್ತಿಲ್ಲ ಎನ್ನಲಾಗಿದೆ. ಹೊಸ ತಂಡವಾಗಿ “ಬೆಂಗಳೂರು’ ಕೆಪಿಎಲ್ ಪ್ರವೇಶಿಸಲಿದೆ.
ಕೆಪಿಎಲ್ 2009ರಲ್ಲಿ ಆರಂಭವಾಗಿದ್ದು, ಬೆಂಗಳೂರು ಬ್ರಿಗೇಡಿಯರ್, ಬೆಂಗಳೂರು ಪ್ರಾವಿಡೆಂಟ್, ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್, ದಾವಣಗೆರೆ ಡೈಮಂಡ್ಸ್, ಬಿಜಾಪುರ್ ಬುಲ್ಸ್, ಮೈಸೂರು ವಾರಿಯರ್, ನಮ್ಮ ಶಿವಮೊಗ್ಗ, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್, ರಾಕ್ ಸ್ಟಾರ್ ತಂಡಗಳು ಸ್ಪರ್ಧಿಸಿದ್ದವು. ಈಗಾಗಲೇ 5 ಆವೃತ್ತಿಗಳು ಮುಗಿದಿವೆ. 2009ರಲ್ಲಿ ಬೆಂಗಳೂರು
ಪ್ರಾವಿಡೆಂಟ್, 2010ರಲ್ಲಿ ಮಂಗಳೂರು ಯುನೈಟೆಡ್, 2014 ಮೈಸೂರು ವಾರಿಯರ್, 2015ರಲ್ಲಿ ಬಿಜಾಪುರ ಬುಲ್ಸ್, 2016ರಲ್ಲಿ ಬಳ್ಳಾರಿ ಟಸ್ಕರ್ ಪ್ರಶಸ್ತಿ ಪಡೆದಿವೆ.