Advertisement

ಕೆಪಿಎಲ್‌: ಬೆಂಗಳೂರು ಬ್ಲಾಸ್ಟರ್ ಬೃಹತ್‌ ಮೊತ್ತ

06:00 AM Aug 16, 2018 | Team Udayavani |

ಬೆಂಗಳೂರು: ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ 2018ನೇ ಸಾಲಿನ “ಕರ್ನಾಟಕ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ (ಕೆಪಿಎಲ್‌) ಕೂಟದ ಉದ್ಘಾಟನಾ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ 5 ವಿಕೆಟಿಗೆ 228 ರನ್‌ ಪೇರಿಸಿದೆ.

Advertisement

ನಾಯಕ ರಾಬಿನ್‌ ಉತ್ತಪ್ಪ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಬ್ಲಾಸ್ಟರ್ ತಂಡದ ಬೃಹತ್‌ ಮೊತ್ತದಲ್ಲಿ ಮಹತ್ವದ ಪಾತ್ರ ವಹಿಸಿತು. ಉತ್ತಪ್ಪ ಕೇವಲ 38 ಎಸೆತಗಳಿಂದ 81 ರನ್‌ ಬಾರಿಸಿದರು. ಈ ಪ್ರಚಂಡ ಆಟದ ವೇಳೆ 6 ಸಿಕ್ಸರ್‌, 8 ಬೌಂಡರಿ ಸಿಡಿಯಲ್ಪಟ್ಟವು. 

ಆರಂಭಕಾರ ಎಂ. ವಿಶ್ವನಾಥನ್‌ 26 ಎಸೆತಗಳಿಂದ 46 ರನ್‌ ಹೊಡೆದರು (6 ಬೌಂಡರಿ, 2 ಸಿಕ್ಸರ್‌). ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಪವನ್‌ ದೇಶಪಾಂಡೆ ಕೂಡ 46 ರನ್ನುಗಳ ಕೊಡುಗೆ ಸಲ್ಲಿಸಿದರು. 30 ಎಸೆತ ಎದುರಿಸಿದ ದೇಶಪಾಂಡೆ 2 ಬೌಂಡರಿ, 2 ಸಿಕ್ಸರ್‌ ಬಾರಿಸಿದರು.

ಬೆಳಗಾವಿ ಪ್ಯಾಂಥರ್ ಪರ ನಾಯಕ ಸ್ಟುವರ್ಟ್‌ ಬಿನ್ನಿ 37 ರನ್ನಿತ್ತು 3 ವಿಕೆಟ್‌ ಕಿತ್ತರು. ದಿಕ್ಷಾಂಶು ನೇಗಿ ಹಾಗೂ ಸೌರಭ್‌ ಯಾದವ್‌ ತಲಾ ಒಂದು ವಿಕೆಟ್‌ ಉರುಳಿಸಿದರು. ಆರಂಭಕಾರ ಕೆ.ಬಿ. ಪವನ್‌ 7, ಆಕರ್ಷ್‌ದೀಪ್‌ 15, ಅಭಿಷೇಕ್‌ ಭಟ್‌ ಅಜೇಯ 10 ರನ್‌ ಮಾಡಿದರು. ಟಾಸ್‌ ಸೋತ ಬೆಂಗಳೂರು ಬ್ಲಾಸ್ಟರ್ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next