Advertisement
ಕೆಲವು ಆಟಗಾರರಿಗೆ ಅನಿರೀಕ್ಷಿತವಾಗಿ ಹರಾಜಿನ ದೊಡ್ಡ ಮೊತ್ತ ದೊರಕಿದರೆ, ಕೆಲವು ನಿರೀಕ್ಷೆ ಮೂಡಿಸಿದ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜು ಆಗಲು ವಿಫಲರಾಗಿದ್ದಾರೆ. ಉಳಿದಂತೆ ದೊಡ್ಡ ಮೊತ್ತಕ್ಕೆ ಹರಾಜು ಆದವರೆಂದರೆ, ಮಾಯಾಂಕ್ ಅಗರ್ವಾಲ್ (ಹುಬ್ಬಳ್ಳಿ ಟೈಗರ್ಗೆ 7 ಲಕ್ಷ ರೂ.), ಆರ್. ಸಮರ್ಥ್ (ಬೆಂಗಳೂರು ಬ್ಲಾಸ್ಟರ್ಗೆ 5.9 ಲಕ್ಷ ರೂ.), ಅನಿರುದ್ª ಜೋಶಿ (ನಮ್ಮ ಶಿವಮೊಗ್ಗ ತಂಡಕ್ಕೆ 5.8 ಲಕ್ಷ ರೂ.).
ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಮನೀಷ್ ಪಾಂಡೆ ಮತ್ತು ಕೆ.ಎಲ್.ರಾಹುಲ್ ಹೆಚ್ಚಿನ ಮೊತ್ತಕ್ಕೆ ಹೋಗುವ ಸಾಧ್ಯತೆ ಇತ್ತು. ಆದರೆ ಪಾಂಡೆ ಮತ್ತು ರಾಹುಲ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವುದರಿಂದ ಇವರು ಕೆಪಿಎಲ್‌ಗೆ ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಫ್ರಾಂಚೈಸಿಗಳು ಈ ಇಬ್ಬರು ಆಟಗಾರರ ಮೇಲೆ ಹೆಚ್ಚಿನ ಹಣ ಹೂಡಲು ಹೋಗಿಲ್ಲ. ರಾಹುಲ್ 50 ಸಾವಿರ ರೂ.ಗೆ ಬಳ್ಳಾರಿ ಟಸ್ಕರ್ಗೆ, ಮನೀಷ್ ಪಾಂಡೆ 1.6 ಲಕ್ಷ ರೂ.ಗೆ ಬೆಳಗಾವಿ ಪ್ಯಾಂಥರ್ಗೆ ಹರಾಜಾದರು. ರಾಷ್ಟ್ರೀಯ ತಂಡದಲ್ಲಿ ಆಡಿದ ಮತ್ತೂಬ್ಬ ಆಟಗಾರ ಕರುಣ್ ನಾಯರ್ 4 ಲಕ್ಷ ರೂ.ಗೆ ಮೈಸೂರ್ ವಾರಿಯರ್ ಪಾಲಾದರು. ನಾಯರ್ ಇತ್ತೀಚೆಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವುದರಿಂದ ಕೆಪಿಎಲ್‌ಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಕರುಣ್ ನಾಯರ್‌ಗೆ ಪಾಂಡೆ, ರಾಹುಲ್‌ಗಿಂತ ದೊಡ್ಡ ಮೊತ್ತ ಸಿಕ್ಕಿದೆ. ಆದರೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿಲ್ಲವಾದರೂ ಅಭಿಮನ್ಯು ಮಿಥುನ್, ಸಿ.ಎಂ. ಗೌತಮ್ ಕೂಡ ಕಡಿಮೆ ಮೊತ್ತಕ್ಕೆ ಹರಾಜು ಆಗಿರುವುದು ಅಚ್ಚರಿ ಮೂಡಿಸಿದೆ.
Related Articles
“ಎ’ ಗ್ರೂಪ್‌ನಲ್ಲಿ 35 ಆಟಗಾರರು ಹರಾಜಿಗಿದ್ದರು. ಇದರಲ್ಲಿ ಡೇವಿಡ್ ಮಥಾಯಿಸ್ ಮತ್ತು ಕುಣಾಲ್ ಕಪೂರ್ ಮಾತ್ರ ಹರಾಜಾಗಲಿಲ್ಲ. ಹರಾಜಿನಲ್ಲಿ ಬೆಂಗಳೂರು ಬ್ಲಾಸ್ಟರ್, ಹುಬ್ಬಳ್ಳಿ ಟೈಗರ್, ನಮ್ಮ ಶಿವಮೊಗ್ಗ, ಬಳ್ಳಾರಿ ಟಸ್ಕರ್, ಬೆಳಗಾವಿ ಪ್ಯಾಂಥರ್, ಬಿಜಾಪುರ್ ಬುಲ್ಸ್, ಮೈಸೂರು ವಾರಿಯರ್ ಫ್ರಾಂಚೈಸಿಗಳು ಪಾಲ್ಗೊಂಡಿದ್ದವು.
Advertisement
ಬೆಂಗಳೂರು ಬ್ರಿಗೇಡಿಯರ್, ಪ್ರೊವಿಡೆಂಟ್ ಬೆಂಗಳೂರು, ಮಂಗಳೂರು ಯುನೈಟೆಡ್, ದಾವಣಗೆರೆ ಡೈಮಂಡ್ಸ್, ರಾಕ್‌ಸ್ಟಾರ್ ತಂಡಗಳು ಈ ಬಾರಿ ಆಡುತ್ತಿಲ್ಲ. ಬೆಂಗಳೂರು ಬ್ಲಾಸ್ಟರ್ ಹೊಸದಾಗಿ ಸೇರ್ಪಡೆಯಾಗಿದೆ. ಈ ಬಾರಿ 7 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ.
ರಾಜಕೀಯ ಒತ್ತಡದ ಕಾರಣ ಮಂಗಳೂರು ಯುನೈಟೆಡ್ ತಂಡ ಈ ಬಾರಿ ಭಾಗವಹಿಸುತ್ತಿಲ್ಲ ಎಂದು ಮಾಲಕ ಮೊದಿನ್ ಬಾವಾ ರವಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ಹೇಳಿದರು. ಇದು ಕರಾವಳಿಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.