Advertisement
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಮಾತ ನಾಡಿದರು.
ಕಾಂಗ್ರೆಸ್ ವತಿಯಿಂದ ಕೋವಿಡ್-19 ವಿರುದ್ಧ ಹೋರಾಡುವ ಆರೋಗ್ಯ ಅಭಯಹಸ್ತ ಯೋಜನೆ ಕಾರ್ಯಕ್ರಮಕ್ಕೆ ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ 2 ಜನ ಕೋವಿಡ್ 19 ವಾರಿಯರ್ ಪ್ರತಿಯೊಬ್ಬರನ್ನು ಸಂಪರ್ಕಿಸಬೇಕು. ಇವರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಅವರ ಆರೋಗ್ಯ ರಕ್ಷಣೆಗೆ ವಿಮಾ ಸವಲತ್ತುಗಳನ್ನೂ ನೀಡಲಾಗುವುದು. ಪಕ್ಷದ ವತಿಯಿಂದ 400 ಮಂದಿ ವೈದ್ಯರು ಆನ್‌ಲೈನ್ ಮೂಲಕ ಜನರಿಗೆ ಆರೋಗ್ಯ ರಕ್ಷಣೆ ನೀಡಿದ್ದಾರೆ ಎಂದರು. ಕಠಿನ ಶಿಕ್ಷೆಯಾಗಲಿ
ಡ್ರಗ್ಸ್ ಹಾವಳಿಗೆ ಬಿಜೆಪಿ ಸರಕಾರದ ವೈಫಲ್ಯವೇ ಕಾರಣ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುವ ಸಲೀಂ ಅಹ್ಮದ್ ಅವರು ಬಿಜೆಪಿ ಕಾರ್ಯಕರ್ತೆಯಾಗಿರುವ ನಟಿ ರಾಗಿಣಿಯೇ ಡ್ರಗ್ಸ್ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಈ ನಡುವೆ ಸಚಿವ ಸಿ.ಟಿ.ರವಿ ಅವರು ‘ನಮಗೆ ಒತ್ತಡ ಇದೆ’ ಎನ್ನುತ್ತಿದ್ದಾರೆ. ಅದು ಯಾವ ಕಾರಣಕ್ಕೆಂದು ತಿಳಿಯಬೇಕು. ಡ್ರಗ್ಸ್ ಹಾವಳಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಕಠಿನ ಶಿಕ್ಷೆಯಾಗಬೇಕು ಎಂದರು.
Related Articles
ನೆರೆ ಹಾವಳಿಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ರಾಜ್ಯಕ್ಕೆ ಸಾವಿರಾರು ಕೋಟಿ ರೂ.ನಷ್ಟ ಉಂಟಾಗಿದೆ. ಆದರೆ ಕೇಂದ್ರ ಸರಕಾರದಿಂದ ಅತ್ಯಲ್ಪ ಪ್ರಮಾಣದ ಮೊತ್ತ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕೆಂದರು.
Advertisement
ಪಕ್ಷದ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಮುಖರಾದ ಮಂಜುನಾಥ ಭಂಡಾರಿ, ಎಂ.ವಿ.ಗಫೂರ್, ವೆರೋನಿಕಾ ಕರ್ನೇಲಿಯೋ, ಶಾಹಿದ್, ಕಳ್ಳಿಗೆ ತಾರಾನಾಥ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ದಿನೇಶ್ ಪುತ್ರನ್, ಡಾ| ಸವಿತಾ ಶೆಟ್ಟಿ, ಗೀತಾ ವಾಗ್ಲೆ, ರೋಶನಿ ಒಲಿವೆರಾ, ವಿಶ್ವಾಸ್ ಅಮೀನ್, ಮೈರ್ಮಾಡಿ ಸುಧಾಕರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಸ್ತಾವನೆಗೈದರು. ಜಿಲ್ಲಾ ಪ್ರ. ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ ಸ್ವಾಗತಿಸಿದರು.
ಗ್ರಾ.ಪಂ.ಚುನಾವಣೆ ಗೆಲುವಿಗೆ ಕಾರ್ಯತಂತ್ರಮಂಗಳೂರು: ಮುಂಬರುವ ಗ್ರಾ. ಪಂ. ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಸಲೀಂ ಅಹ್ಮದ್ ಅವರು ಹೇಳಿದ್ದಾರೆ. ದ.ಕ. ಜಿಲ್ಲೆಯಲ್ಲಿ ಗ್ರಾ.ಪಂ.ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ 1916 ಬೂತ್ ಕಮಿಟಿಗಳನ್ನು ಬಲಿಷ್ಠಗೊಳಿಸಿ ಪಕ್ಷ ಸಂಘಟನೆಯನ್ನು ಮಾಡುವ ಬಗ್ಗೆ ಚರ್ಚಿಸಲಾಗಿದೆ. ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದ, 12 ಸದಸ್ಯರನ್ನು ಒಳಗೊಂಡ ಕೋರ್ ಕಮಿಟಿ ರಚಿಸಲಾಗುವುದು. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ ಕಮಿಟಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದು ಸಲೀಂ ಅಹ್ಮದ್ ಹೇಳಿದರು. ವೈಫಲ್ಯದ ವಿರುದ್ದ ಹೋರಾಟ
ಸೆ. 21ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಡ್ರಗ್ಸ್ ಜಾಲ, ಡಿಜೆ ಹಳ್ಳಿ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಸ್ತಾವಿಸಿ ಪ್ರಬಲ ಹೋರಾಟ ಮಾಡಲಿದ್ದೇವೆ. ಈ ಬಗ್ಗೆ ಚರ್ಚಿಸಲು ಸೆ. 16ರಂದು ಸಿಎಲ್‌ಪಿ ಸಭೆ ಕರೆಯಲಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕರಾದ ಮೊದಿನ್ ಬಾವಾ, ಐವನ್ ಡಿ’ಸೋಜಾ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ , ಮುಖಂಡರಾದ ಭಾಸ್ಕರ್, ಕವಿತಾ ಸನಿಲ್, ಸದಾಶಿವ ಉಳ್ಳಾಲ್, ಕಳ್ಳಿಗೆ ತಾರಾನಾಥ ಶೆಟ್ಟಿ, ಬಲರಾಜ್, ಟಿ.ಎಂ.ಶಹೀದ್ ಹಾಜರಿದ್ದರು. ಪಿಸಿಐಟಿ ಕಚೇರಿ ಉಳಿವಿಗೆ ನಳಿನ್ ಕ್ರಮವಹಿಸಲಿ
ಮಂಗಳೂರಿನಲ್ಲಿ ಇರುವ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾ ಕಚೇರಿಯೊಂದಿಗೆ ವಿಲೀನಗೊಳಿಸುತ್ತಿರುವುದನ್ನು ಈಗಾಗಲೇ ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸಿದ್ದು ಪ್ರತಿಭಟನೆ ಕೂಡ ಮಾಡಿದೆ. ಕಚೇರಿಯನ್ನು ಮಂಗಳೂರಿನಲ್ಲೇ ಉಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅವರು ಕ್ರಮವಹಿಸಿಬೇಕು ಎಂದು ಸಲೀಂ ಅಹಮ್ಮದ್ ಆಗ್ರಹಿಸಿದರು.