Advertisement

“ಅತೃಪ್ತಿ’ನಡುವೆಯೂ ಖಾತೆ ಹಂಚಿಕೆ

06:00 AM Jun 09, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾದ 18 ದಿನಗಳ ನಂತರ, ಸಾಕಷ್ಟು ಹಗ್ಗ-ಜಗ್ಗಾಟಗಳ ಬಳಿಕ, ಶುಕ್ರವಾರ ಸಚಿವರಿಗೆ ಖಾತೆಗಳು ಹಂಚಿಕೆಯಾಗಿವೆ. 

Advertisement

ಆದರೆ, ಕಾಂಗ್ರೆಸ್‌ನಲ್ಲಿ ಅಸಮಾಧಾನ ಮುಂದುವರಿದಿದ್ದು, ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅತೃಪ್ತ ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದು, ಬಂಡಾಯದ ಬಾವುಟ ಹಾರಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದು ಪಕ್ಷದ ವರಿಷ್ಠರಿಗೆ ತಲೆನೋವಾಗಿದ್ದು, ಹೇಗೆ ಬಂಡಾಯ ಶಮನಗೊಳಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ…

ಖಾತೆಗಳ ವಿವರ
– ಎಚ್‌.ಡಿ.ಕುಮಾರಸ್ವಾಮಿ:
 ಹಣಕಾಸು, ಅಬಕಾರಿ, ಇಂಧನ, ಸಾರ್ವಜನಿಕ ಉದ್ದಿಮೆ, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಸಾಂಸ್ಥಿಕ ಹಣಕಾಸು, ಸಣ್ಣ ಉಳಿತಾಯ ಮತ್ತು ಲಾಟರಿ, ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಯೋಜನೆ ಮತ್ತು ಸಾಂಖೀÂಕ, ಮೂಲಸೌಕರ್ಯ, ಜವಳಿ
-ಡಾ.ಜಿ.ಪರಮೇಶ್ವರ್‌: ಗೃಹ, ಬೆಂಗಳೂರು ನಗರಾಭಿವೃದ್ಧಿ, ಯವಜನ ಮತ್ತು ಸೇವೆ
-ಆರ್‌.ವಿ.ದೇಶಪಾಂಡೆ: ಕಂದಾಯ, ಕೌಶಲ್ಯಾಭಿವೃದ್ಧಿ,   ಉದ್ಯಮಶೀಲತೆ ಮತ್ತು ಜೀವನೋಪಾಯ
– ಎಚ್‌.ಡಿ.ರೇವಣ್ಣ: ಲೋಕೋಪಯೋಗಿ
-ಡಿ.ಕೆ.ಶಿವಕುಮಾರ್‌: ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ
-ಕೆ.ಜೆ.ಜಾರ್ಜ್‌: ಬೃಹತ್‌ ಕೈಗಾರಿಕೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ
-ಕೃಷ್ಣಬೈರೇಗೌಡ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು
-ಎನ್‌.ಎಸ್‌.ಶಿವಶಂಕರೆಡ್ಡಿ: ಕೃಷಿ
-ಎಸ್‌.ಆರ್‌.ಶ್ರೀನಿವಾಸ್‌: ಸಣ್ಣಕೈಗಾರಿಕೆ
-ಎಂ.ಸಿ.ಮನಗೊಳಿ:  ತೋಟಗಾರಿಕೆ
-ಡಿ.ಸಿ.ತಮ್ಮಣ್ಣ: ಸಾರಿಗೆ
-ರಮೇಶ್‌ ಜಾರಕಿಹೊಳಿ: ಪೌರಾಡಳಿತ, ಬಂದರು, ಒಳನಾಡು ಸಾರಿಗೆ
ವೆಂಕಟರಾವ್‌ ನಾಡಗೌಡ:  ಪಶುಸಂಗೋಪನೆ, ಮೀನುಗಾರಿಕೆ
-ಪ್ರಿಯಾಂಕ್‌ ಖರ್ಗೆ: ಸಮಾಜ ಕಲ್ಯಾಣ
-ಸಿ.ಎಸ್‌.ಪುಟ್ಟರಾಜು: ಸಣ್ಣ ನೀರಾವರಿ
-ಯು.ಟಿ.ಖಾದರ್‌: ನಗರಾಭಿವೃದ್ಧಿ (ಬಿಬಿಎಂಪಿ ಹೊರತುಪಡಿಸಿ), ವಸತಿ
-ಜಮೀರ್‌ ಅಹಮದ್‌ ಖಾನ್‌: ಆಹಾರ ಮತ್ತು ನಾಗರಿಕ ಪೂರೈಕೆ, ವಕ್ಫ್- ಅಲ್ಪಸಂಖ್ಯಾತ ಅಭಿವೃದ್ಧಿ
-ಎನ್‌.ಮಹೇಶ್‌: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
-ಶಿವಾನಂದ ಪಾಟೀಲ್‌: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
-ವೆಂಕಟರಮಣಪ್ಪ: ಕಾರ್ಮಿಕ
-ರಾಜಶೇಖರ್‌ ಪಾಟೀಲ್‌ ಹುಮ್ನಾಬಾದ್‌: ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ
-ಪುಟ್ಟರಂಗಶೆಟ್ಟಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
-ಆರ್‌.ಶಂಕರ್‌: ಅರಣ್ಯ, ಪರಿಸರ
-ಡಾ.ಜಯಮಾಲಾ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
-ಜಿ.ಟಿ.ದೇವೇಗೌಡ: ಉನ್ನತ ಶಿಕ್ಷಣ
-ಸಾ.ರಾ.ಮಹೇಶ್‌: ಪ್ರವಾಸೋದ್ಯಮ, ರೇಷ್ಮೆ
-ಬಂಡೆಪ್ಪ ಕಾಶಂಪುರ್‌: ಸಹಕಾರ

Advertisement

Udayavani is now on Telegram. Click here to join our channel and stay updated with the latest news.

Next