Advertisement

Karnataka polls: ತಾಳಿ ಕಟ್ಟಿದ ಬಳಿಕ ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದ ವರ

01:58 PM May 10, 2023 | Team Udayavani |

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮಧ್ಯಾಹ್ನದ ಬಳಿಕ ಕಾವು ಪಡೆದುಕೊಳ್ಳುತ್ತಿದೆ. ಮತದಾನ ಮಾಡಲು ಜನ ಬಿರುಸಿನಿಂದ ಮತಗಟ್ಟೆಗೆ ಬರುತ್ತಿದ್ದಾರೆ. ಈ ನಡುವೆ ಒಂದಷ್ಟು ಕಡೆ ಸ್ವಾರಸ್ಯಕರ ಹಾಗೂ ಆಘಾತಕಾರಿ ಘಟನೆಗಳು ನಡೆದಿದೆ.

Advertisement

ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದ ವರ:

ಬೀದರ್ : ಮತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಅರೋಪದ ಮಧ್ಯ ತಾಳಿ ಕಟ್ಟಿ ನೇರವಾಗಿ ಮದುವೆ ಡ್ರಸ್ ನಲ್ಲೆ ವರ ಮತದಾನ ಕೇಂದ್ರಕ್ಕೆ ಬಂದು ತನ್ನ ಮತದಾನದ ಹಕ್ಕು ಚಲಾಯಿಸಿರುವ ಘಟನೆ ಬೀದರ್ ನಗರದಲ್ಲಿ ನಡೆದಿದೆ.

ಇಲ್ಲಿನ ಓಲ್ಡ್ ನಾವದಗಿಯ ತಮ್ಮ ಮನೆಯಲ್ಲಿ ಅಂಕಿತಾಗೆ ತಾಳಿ‌ ಕಟ್ಟಿದ ಕಾರ್ತಿಕ ಪಾಟೀಲ್ ಎಂಬ ವರ ಕುಟುಂಬದ ಸಮೇತರಾಗಿ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾನೆ.

ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಆಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಹೀಗಾಗಿ ನಾನು ಕೂಡಾ ತಾಳಿ ಕಟ್ಟಿ ನೇರವಾಗಿ ಮತಗಟ್ಟೆ ಬಂದು ಮತದಾನ ಮಾಡಿದ್ದೇನೆ ಎಂದು ಹೇಳಿದರು.

Advertisement

ನಾವು ಅಭಿವೃದ್ಧಿಗಾ ಗಿ ಮತದಾನ ಮಾಡೋಣ ಎಂದು ವರ ಸಮಾಜಕ್ಕೆ ಮತದಾನ ಮಹತ್ವದ‌ ಸಂದೇಶ ನೀಡಿದ್ದಾರೆ.

ಬೆಳ್ತಂಗಡಿ: ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ  ಮಗ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಪೇಟೆಯಲ್ಲಿ ತನ್ನ ತಾಯಿಯನ್ನು ಮತದಾನ ಕೇಂದ್ರಕ್ಕೆ ಎತ್ತಿಕೊಂಡು ಹೋಗಿ ಮತ ಚಲಾಯಿಸಿದ ಮಗ ಲಾಯಿಲ ಗ್ರಾ.ಪಂ ಸದಸ್ಯ ಮಹೇಶ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವಿವೇಕಾನಂದ ನಗರ ಹಳೆಪೇಟೆ ಲಾಯಿಲದಲ್ಲಿ ವಾಸವಿರುವ  ರೋಹಿಣಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ಎದ್ದು ನಡೆಯದ ಪರಿಸ್ಥಿತಿಯಲ್ಲಿದ್ದಾರೆ. ಅನಾರೋಗ್ಯದ ನಡುವಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದರು.

ಸರತಿ ಸಾಲಿನಲ್ಲಿ ನಿಲ್ಲಲು ಮಹಿಳೆಯರ ಲಾಟಿ ಬೀಸಿದ ಪೊಲೀಸರು:

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಳ್ಳಿ ಗ್ರಾಮದಲ್ಲಿ ಶೀರನಹಳ್ಳಿ ಗ್ರಾಮದ ಮತಗಟ್ಟೆ 216ರಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಮಹಿಳೆಯ ಮೇಲೆ ಪೋಲಿಸರು ಲಾಟಿ ಬೀಸಿದ್ದಾರೆ. ಹುಲಿಗೆಮ್ಮ ಎಂಬ ಮಹಿಳೆಯ ಕೈಗೆ ಏಟು ಬಿದ್ದಿದ್ದು, ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರ ಬಳಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮಾತುಕತೆ ನಡೆಸಿದ್ದು, ಪೊಲೀಸರು ಲಾಟಿ ಬೀಸಿಲ್ಲ ಎಂದಿದ್ದಾರೆ. ಆಕ್ರೋಶಗೊಂಡ ಗ್ರಾಮಸ್ಥರು ಮತದಾನ ಸ್ಥಗಿತಕ್ಕೆ ಮುಂದಾಗಿದ್ದರು. ಒಂದು ತಾಸಿನ ನಂತರ ಮತ್ತೆ ಮತದಾನ ಪ್ರಾರಂಭವಾಯಿತು.

ಕುಷ್ಟಗಿ: ಬಿಜೆಪಿ ಕಾರ್ಯಕರ್ತರ ವಾಗ್ವಾದ

ಕುಷ್ಟಗಿ ಪಟ್ಟಣದ ವಿದ್ಯಾನಗರದ ಶಾಖಾ ಶಾಲೆಯ ಮತಗಟ್ಟೆಯ ಒಳಗೆ ಪ್ರವೇಶಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕಿಳಿದ ಪ್ರಸಂಗ ನಡೆಯಿತು.

ಮತದಾರರೊಂದಿಗೆ ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಅವರು, ಮತದಾರರೊಂದಿಗೆ ಮತಗಟ್ಟೆಯ ಆವರಣ ಪ್ರವೇಶಿರುವುದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು, ವಾಗ್ವಾದಕ್ಕೆ ಇಳಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ಕಾರಣವಾದಾಗ ಪೊಲೀಸರು ದೌಡಾಯಿಸಿ ಗುಂಪು ಗೂಡಿದ್ದ ಜನರನ್ನು ಚದುರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next