Advertisement
ಈ ಚುನಾವಣೆ ಸಂದರ್ಭದಲ್ಲಂತೂ ಅವಕಾಶವಾದಿಗಳಾಗಿ ಗೋಚರಿಸುವ ರಾಜಕಾರಣಿಗಳು ಸಾಕಷ್ಟು ಮಂದಿ ಇದ್ದಾರೆ. ಕೆಲವರು ಅಸಮಾಧಾನವನ್ನು ಚುನಾ ವಣೆ ಸಂದರ್ಭದಲ್ಲಿ ಪಕ್ಷಾಂತರ ಮಾಡುವ ಮೂಲಕ ಹೊರಹಾಕುತ್ತಾರೆ.
ಪ್ರಮುಖವಾಗಿ ನೋಡಿದರೆ ಬೆಳ್ತಂಗಡಿಯ ಹಿರಿಯ ರಾಜ ಕಾರಣಿ ವಸಂತ ಬಂಗೇರ 3 ಪಕ್ಷಗಳಲ್ಲಿ ಈಜಿದವರು. ಆರಂಭದಲ್ಲಿ ಬಿಜೆಪಿಯಲ್ಲಿದ್ದು ಸ್ಪರ್ಧಿಸಿ ಶಾಸಕರಾದವರು. 1983 ಹಾಗೂ 1985ರಲ್ಲಿ ಎರಡು ಬಾರಿ ಬಿಜೆಪಿಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿ ದವರು. ಆ ಬಳಿಕ ಬಿಜೆಪಿಯಿಂದ ಹೊರಗೆ ಬಂದು ಜನತಾ ಪರಿವಾರ ಸೇರಿದರು. 1989ರಲ್ಲಿ ಜನತಾ ದಳದಿಂದ ಸ್ಪರ್ಧಿ ಸಿದರೂ ಗೆಲುವು ದಕ್ಕಲಿಲ್ಲ, ಆದರೆ 1994ರಲ್ಲಿ ಮತ್ತೆ ಅದೇ ಪಕ್ಷದಲ್ಲಿದ್ದು ಗೆದ್ದು ಬಂದರು. 1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 2004ರಲ್ಲೂ ಜೆಡಿಎಸ್‌ನಿಂದಲೇ ಮತ್ತೆ ಸ್ಪರ್ಧೆ, 3ನೇ ಸ್ಥಾನಕ್ಕೇ ತೃಪ್ತಿ. 2008ರಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿ ಮತ್ತೆ ಶಾಸಕರಾದರು. 2013ರಲ್ಲೂ ಅಲ್ಲೇ ಶಾಸಕರಾದರು.
Related Articles
Advertisement
ಶಕುಂತಳಾ ಶೆಟ್ಟಿಈಚೆಗಿನ ರಾಜಕೀಯದಲ್ಲಿ ಮತ್ತೂಂದು ಪಕ್ಷಾಂತರದ ಉದಾಹರಣೆ ಶಕುಂತಳಾ ಶೆಟ್ಟಿ. ಪ್ರಬಲ ಹಿಂದುತ್ವದೊಂದಿಗೆ ಬಿಜೆಪಿ ಶಾಸಕಿಯಾಗಿ ಪುತ್ತೂರಿನಿಂದ 2004ರಲ್ಲಿ ಗೆದ್ದು ಬಂದವರು. 2008ರಲ್ಲಿ ಟಿಕೆಟ್ ಸಿಗದಿದ್ದಾಗ ತಮ್ಮ ರಾಜಕೀಯ ಗುರು ಮಾಜಿ ಶಾಸಕ ಉರಿಮಜಲು ರಾಮ ಭಟ್ಟರ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದರೂ ಯಶಸ್ವಿಯಾಗಲಿಲ್ಲ. ಮತ್ತೆ ಶಕುಂತಳಾ ಶೆಟ್ಟಿ ಸೇರಿದ್ದು ಕಾಂಗ್ರೆಸ್ ಪಾಳಯವನ್ನು. 2013ರಲ್ಲಿ ಶಕುಂತಳಾ ಶೆಟ್ಟರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾದರು. 2018ರಲ್ಲಿ ಸೋತಿದ್ದಾರೆ, ಈ ಬಾರಿಯೂ ಕಣದಲ್ಲಿ ಆಕಾಂಕ್ಷಿಯಾಗಿದ್ದಾರೆ. ಬಿ. ನಾಗರಾಜ ಶೆಟ್ಟಿ
ಉಳಿದಂತೆ ಪ್ರಮುಖರು ಪಕ್ಷಾಂತರವಾಗಿದ್ದು, ಆಗಿ ಯಶಸ್ಸು ಕಂಡಿದ್ದು ಕಡಿಮೆ. ಬಿಜೆಪಿಯಲ್ಲಿ ಸಚಿವರಾಗಿದ್ದ ಬಿ.ನಾಗರಾಜ ಶೆಟ್ಟಿಯವರು ಬಿಜೆಪಿಯಲ್ಲಿ ಅಸಮಾಧಾನಗೊಂಡು ಜೆಡಿಎಸ್‌ಗೆ 2012ರಲ್ಲಿ ಸೇರ್ಪಡೆಯಾದರು. ಆದರೆ ಅಲ್ಲಿನ ರಾಜಕೀಯಕ್ಕೆ ಬೇಸತ್ತು ಮರುವರ್ಷವೇ ರಾಜೀನಾಮೆ ಕೊಟ್ಟರು. ಮತ್ತೆ
ಬಿಜೆಪಿಗೆ ಸೇರಿದರು. ವೇಣುವಿನೋದ್ ಕೆ. ಎಸ್.