Advertisement
2008ರ ಲೋಕಸಭಾ ಚುನಾ ವಣೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 4,09,721 ಮಂದಿ ಮಹಿಳಾ ಮತ ದಾರರ ಪೈಕಿ 3,13,819 ಮಂದಿ ಮತ ಚಲಾಯಿಸಿದ್ದರು. 2013ರ ಚುನಾವಣೆಯಲ್ಲಿ 4,60,738 ಮಂದಿ ಮಹಿಳಾ ಮತದಾರರ ಪೈಕಿ 3,53,841 ಮಂದಿ ಮತ ಚಲಾಯಿಸಿದ್ದರು. 2018ರ ಚುನಾವಣೆಯಲ್ಲಿ 5,15,062 ಮಹಿಳಾ ಮತದಾರರ ಪೈಕಿ 4,14,391 ಮಂದಿ ಮತ ಚಲಾಯಿಸಿದ್ದರು. 2013ರಲ್ಲಿ ಶೇ.76.71 ಮಹಿಳೆಯರು ಹಾಗೂ ಶೇ.75.55 ಪುರುಷ ಮತದಾರರು ಮತದಾನ ಮಾಡಿದ್ದರು. 2018ರಲ್ಲಿ ಶೇ.80.45ರಷ್ಟು ಮಹಿಳೆಯರು ಹಾಗೂ ಶೇ.77.14ರಷ್ಟು ಪುರುಷರು ಮತದಾನ ಮಾಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 5,32,787 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿಗಿಂತ 17,725 ಮಂದಿ ಅಧಿಕ. ಬೈಂದೂರಿನಲ್ಲಿ 4,703, ಕುಂದಾಪುರ 3,974, ಉಡುಪಿ 4,030, ಕಾಪು 1,283, ಕಾರ್ಕಳ 3,735 ಮಂದಿ ಕಳೆದ ಬಾರಿಗಿಂತ ಅಧಿಕ ಮಹಿಳಾ ಮತದಾರರಿರುವುದು ವಿಶೇಷ.
Related Articles
2018ರ ಚುನಾವಣೆಯಲ್ಲಿ ಒಟ್ಟು 9,93,415 ಮಂದಿ ಮತದಾರರ ಪೈಕಿ 4,78,329 ಮಂದಿ ಪುರುಷ ಮತದಾರರು. 5,15,062 ಮಂದಿ ಮಹಿಳಾ ಮತದಾರರಿದ್ದರು. ಈ ಪೈಕಿ ಶೇ.77.14 ಮಂದಿ ಪುರುಷರು ಮತದಾನ ಮಾಡಿದ್ದರೆ, ಶೇ.80.45 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಒಟ್ಟು ಮತದಾನ ಶೇ.78.86. 2013ರಲ್ಲಿ ನಡೆದ ಮಹಿಳಾ ಮತದಾನ ಶೇ. 76.71. 2018ರಲ್ಲಿ ನಡೆದ ಮಹಿಳಾ ಮತದಾನ ಶೇ.80.45.
Advertisement
ಬೈಂದೂರಿನಲ್ಲಿ ಗರಿಷ್ಠಈ ಬಾರಿ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ 1,18,962 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ ಬೈಂದೂರಿನಲ್ಲಿದ್ದ ಮಹಿಳಾ ಮತದಾರರ ಸಂಖ್ಯೆ 1,14,259. ಮಹಿಳಾ ಮತದಾನ ಶೇ.82.78. ಕುಂದಾಪುರದಲ್ಲಿ ಈ ಬಾರಿ 1,07,625 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 1,03,648 ಮಂದಿ ಮಹಿಳಾ ಮತದಾರರಿದ್ದರು. ದಾಖ ಲಾದ ಮತದಾನ ಶೇ.80.53. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ 1,10,945 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 1,06,913 ಮಂದಿ ಮತದಾರರಿದ್ದು, ದಾಖಲಾದ ಮತದಾನ ಶೇ.78.14. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 97,233 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 95,948 ಮಂದಿ ಮತದಾರರಿದ್ದರು. ದಾಖಲಾದ ಶೇಕಡಾವಾರು ಮತದಾನ 79.83. ಕಾರ್ಕಳದಲ್ಲಿ ಈ ಬಾರಿ 98,030 ಮಂದಿ ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 94,294 ಮಂದಿ ಮಹಿಳಾ ಮತದಾರರಿದ್ದು, ದಾಖಲಾದ ಮತದಾನ ಶೇ.80.81. ಪುನೀತ್ ಸಾಲ್ಯಾನ್