Advertisement
ಮಾದರಿ ಮತಗಟ್ಟೆ, ಬೂತ್ ಸಂಖ್ಯೆ – 24, 41, 120ಅಚ್ಚುಕಟ್ಟಾದ ಕೊಠಡಿ, ಬಾಗಿಲಲ್ಲಿ ಅಲಂಕಾರ, ಸ್ವಾಗತ ಕೋರುವವರು, ಕುಡಿಯಲು ತಂಪಾದ ನೀರು, ಸ್ವಯಂ ಸೇವಕರ ಅಭಿವಂದನೆ ಇವೆಲ್ಲ ನಿಮ್ಮನ್ನು ಇಲ್ಲಿ ಸೆಳೆಯುತ್ತವೆ. ಬಣ್ಣ ಬಣ್ಣದ ಚಿತ್ರಗಳಿಂದ ಅಲಂಕಾರಗೊಂಡ ಮತಗಟ್ಟೆ ಕೊಠಡಿ, ಎದುರಿನಲ್ಲಿ ವಿಶ್ರಾಂತಿಗಾಗಿ ಹಾಗೂ ಸರತಿ ನಿಲ್ಲುವವರ ಅನುಕೂಲಕ್ಕಾಗಿ ಹಾಕಿದ ಪೆಂಡಾಲು, ಮಿಶ್ರ ವರ್ಣದ ಬಲೂನುಗಳು, ಆಕರ್ಷಕ ವಿನ್ಯಾಸದ ರಂಗೋಲಿ, ಕುಳಿತುಕೊಳ್ಳಲು ಪ್ರಶಸ್ತವಾದ ಆಸನ ವ್ಯವಸ್ಥೆ – ಇದು ಒಂದು ಮಾದರಿ ಮತಗಟ್ಟೆಯಲ್ಲಿ ಕಾಣಸಿಗುವ ಚಿತ್ರಣ. ಬನಹಟ್ಟಿಯ ಸ್ಥಳೀಯ ಎಸ್.ಆರ್.ಎ. ಪ್ರೌಢಶಾಲೆ, ಬನಹಟ್ಟಿಯಲ್ಲಿರುವ ಮತಗಟ್ಟೆ ಸಂಖ್ಯೆ 120 ರಲ್ಲಿ ‘ಮಾದರಿ ಮತಗಟ್ಟೆ’ ಎಂದರೆ ಹೀಗಿರುತ್ತದೆ ಎಂಬುದನ್ನು ತಾಲೂಕು ಆಡಳಿತವು ನಗರಸಭೆ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ.
ವಿಕಲ ಚೇತನರಿಗೂ ಸಮಾಜದಲ್ಲಿ ಸಮಾನ ಅವಕಾಶಗಳು ದೊರೆಯಬೇಕು ಮತ್ತು ಅವರು ಕೂಡ ಇತರರಂತೆ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲರು ಎಂಬ ಸಮಾಜಕ್ಕೆ ರವಾನಿಸುವ ಉದ್ದೇಶದಿಂದ ವಿಶೇಷಚೇತನರು ನಿರ್ವಹಿಸುವ ಮತಗಟ್ಟೆಗಳಿಗೆ ಅವಕಾಶ ಒದಗಿಸಲಾಗಿದ್ದು ಈ ಸಲದ ವೈಶಿಷ್ಟ್ಯವಾಗಿದೆ. ಚುನಾವಣಾ ಆಯೋಗದ ಸೂಚನೆಗಳನ್ವಯ ಈ ಸಲ ತೇರದಾಳ ಮತಕ್ಷೇತ್ರದ ಯರಗಟ್ಟಿಯಲ್ಲಿ ಇಂತಹ ಒಂದು(01) ಮತಗಟ್ಟೆ ರೂಪುಗೊಂಡಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಮತಗಟ್ಟೆ ಅಧಿಕಾರಿಗಳು ವಿಶೇಷ ಚೇತನರೇ ಆಗಿರುತ್ತಾರೆ. ಬೇರೆ ಬೇರೆ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಇಂತಹ ಸಿಬ್ಬಂದಿಯನ್ನು ಸದರಿ ಕಾರ್ಯಕ್ಕೆ ನಿಯೋಜಿಸಲಾಗಿದೆ ಮತ್ತು ಅವರೆಲ್ಲ ಸ್ವತಂತ್ರರಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ.
Related Articles
Advertisement
ಸಖಿ ಮತಗಟ್ಟೆ : ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇರುವಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ‘ಸಖಿ ಮತಗಟ್ಟೆ’ಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸುತ್ತದೆ. ಮತಗಟ್ಟೆ ಅಧಿಕಾರಿಗಳಿಂದ ಹಿಡಿದು ಸಹಾಯಕರೆಲ್ಲರೂ ಮಹಿಳೆಯರೇ ಆಗಿರುತ್ತಾರೆ. ಇಂತಹ ಮತಗಟ್ಟೆಗಳನ್ನು ವಿಶೇಷ ರೂಪದಲ್ಲಿ ಅಲಂಕರಿಸಲಾಗಿರುತ್ತದೆ. ಬಲೂನುಗಳು ಹಾಗೂ ಬಣ್ಣದ ಚಿತ್ರಗಳಿಂದ ಆಕರ್ಷಕಗೊಳಿಸಲಾಗುತ್ತದೆ. ನೆಲಹಾಸು, ಕುಡಿಯುವ ನೀರು, ತಾಯಂದಿರೊಂದಿಗೆ ಬರುವ ಪುಟ್ಟ ಮಕ್ಕಳಿಗೆ ಆಟಿಕೆ ಸಾಮಾನು ಇತ್ಯಾದಿ ಸೌಕರ್ಯಗಳಿರುತ್ತವೆ. ಮಹಾಲಿಂಗಪುರ ಸೇರಿದಂತೆ ಒಟ್ಟು ಎರಡು(02) ‘ಸಖಿ ಮತಗಟ್ಟೆ’ಗಳನ್ನು ಪ್ರಸ್ತುತ ತೇರದಾಳ ಮತಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ತೇರದಾಳ ಮತಕ್ಷೇತ್ರದಲ್ಲಿ ಏಳ ವಿಶೇಷ ಬೂತ್ ಗಳು ಇದ್ದು, ಬೂತ್ ನಂ. 191 ಮಹಾಲಿಂಗಪುರದ ಕೆಲಗೇರಿ ಮಡ್ಡಿ, ಚಿಮ್ಮಡದ ಸರ್ಕಾರಿ ಬಾಲಕಿಯರ ಶಾಲೆಯ ಬೂತ್ ನಂ. 174 ರಲ್ಲಿ ಪಿಂಕ್ ಬೂತ್ ನಿರ್ಮಾಣ ಮಾಡಿದ್ದು, ಇಲ್ಲಿ ಮಹಿಳಾ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸುತ್ತಾರೆ. ಇನ್ನೂ ಎಸ್ ಆರ್ ಎ ಪ್ರೌಢಶಾಲೆಯ ಬೂತ್ ನಂ.120, ಆಸಂಗಿ ಗ್ರಾಮ ಪಂಚಾಯ್ತಿ ಕಾರ್ಯಾಲಯ ಬೂತ್ ನಂ. 41, ತೇರದಾಳ ಪುರಸಭೆಯ ಕಾರ್ಯಾಲಯ ಬೂತ್ ನಂ.24 ರಲ್ಲಿ ಮಾದರಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಯರಗಟ್ಟಿಯ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಿರ್ಮಾಣ ಮಾಡಲಾದ ಬೂತ್ ನಂ. 168 ರಲ್ಲಿ ಅಂಗವಿಕಲ ಅಧಿಕಾರಿಗಳು ಮತ್ತು ತಮದಡ್ಡಿಯ ಬೂತ್ ನಂ. 39 ರಲ್ಲಿ ಯುವ ಚುನಾವಣಾ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿಯೊಂದಕ್ಕೆ ಒಬ್ಬೊಬ್ಬ ನೋಡಲ್ ಅಧಿಕಾರಿ ಹಾಗೂ ಮೇಲುಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳಾದ ಡಾ. ಶಶಿಧರ ನಾಡಗೌಡ ಹಾಗೂ ತಹಶೀಲ್ದಾರ ಡಾ. ಡಿ.ಎಚ್.ಹೂಗಾರರವರು ಪತ್ರಿಕೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ‘ಅಭ್ಯರ್ಥಿಗಳೂ ಕಾವಲು ಕಾಯಬಹುದು..’: ಈ ಬಾರಿ ಮತಯಂತ್ರ ಸುರಕ್ಷತೆಗೆ ಹೊಸ ವ್ಯವಸ್ಥೆ