Advertisement
ಜಿಲ್ಲೆಯ ಬಿಜೆಪಿ ಘಟಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ ಸಹಸ್ರಮಾನದ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರದ ಛಾಯಾಪ್ರತಿಯನ್ನು ಉಡುಗೊರೆಯಾಗಿ ಸಮರ್ಪಿಸಲಾಯಿತು.
ಕನ್ನಡದಲ್ಲಿ ಮಾತುಗಳನ್ನಾಡಿದ ಪ್ರಧಾನಿ ಮೋದಿ ಅವರು `ಪಂಚನದಿಗಳ ನಾಡು ವಿಜಯಪುರದ ಎಲ್ಲ ಜನತೆಗೆ ನಮಸ್ಕಾರಗಳು…ಎಂದು ಕನ್ನಡದಲ್ಲಿಯೇ ಉಲ್ಲೇಖಿಸಿದರು. ಅಲ್ಲದೇ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಘೋಷವಾಕ್ಯವನ್ನೂ ಕನ್ನಡದಲ್ಲಿ ಹೇಳಿದರು. ಮೋದಿ ಅವರು ಕನ್ನಡದಲ್ಲಿ ಸಾಲು ಉಚ್ಛರಿಸದಾಗ ಕಾರ್ಯಕರ್ತರಿಂದ ಹರ್ಷೋದಾರ ಕೇಳಿ ಬಂದವು.
Related Articles
Advertisement
ನನ್ನ ನಮಸ್ಕಾರ ತಲುಪಿಸಿ :ವಿಜಯಪುರ ಜಿಲ್ಲೆಯ ಜನರಿಗೆ ದಿಲ್ಲಿಯಿಂದ ನಿಮ್ಮ ಸೇವಕ ಮೋದಿ ಬಂದಿದ್ದರು, ನಿಮಗೆ ನಮಸ್ಕಾರ ತಿಳಿಸಿದ್ದಾರೆ ಎಂದು ತಿಳಿಸುವಿರಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಪ್ರಧಾನಿ ಮೋದಿ, ನನ್ನ ಕೆಲಸ ಮಾಡಬೇಕು ಎಂದು ಕೋರಿದರು. ನನ್ನ ಕೆಲಸವನ್ನು ನೀವು ಮಾಡಲೇಬೇಕು, ಜಿಲ್ಲೆಯ ಪ್ರತಿ ಮನೆಗೆ ತೆರಳಿ ನಮಸ್ಕಾರ ಮಾಡಿ, ನಿಮ್ಮ ಸೇವಕ ಮೋದಿ ದಿಲ್ಲಿಯಿಂದ ವಿಜಯಪುರಕ್ಕೆ ಬಂದಿದ್ದರು, ನಿಮಗೆ ನಮಸ್ಕಾರ ತಿಳಿಸಿದ್ದಾರೆ. ಈ ಬಾರಿ ಮೋದಿ ಅವರನ್ನು ಆಶೀರ್ವಸಿದಿ ಎಂದು ಕೋರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ನೇತಾಜಿ ಅವತಾರವೇ ಮೋದಿ ಎಂದ ಯತ್ನಾಳ :
ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಸಚಂದ್ರ ಭೋಸ್ ಅವರ ಅಪರಾವತಾರ. ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವಗುರು ಸ್ಥಾನ ಪಡೆದಿದೆ ಎಂದು ಮೋದಿ ಅವರ ಸಮ್ಮುಖದಲ್ಲಿ ಭಾಷಣ ಮಾಡಿದ ನಗರ ಶಾಸಕ-ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಬಣ್ಣಿಸಿದರು. ಮೋದಿ ಎಂದರೆ ದೇಶ, ಮೋದಿ ಎಂದರೆ ರಕ್ಷಣೆ, ಮೋದಿ ಎಂದರೆ ಹಿಂದೂತ್ವ, ಮೋದಿ ಎಂದರೆ ಭ್ರಷ್ಟರಿಗೆ ಸಿಂಹ ಸ್ವಪ್ನ, ಮೋದಿ ಎಂದರೆ ಪ್ರಾಮಾಣಿಕತೆ, ಮೋದಿ ಎಂದರೆ ಸಂಸ್ಕೃತಿ, ಮೋದಿ ಎಂದರೆ ದೂರದೃಷ್ಟಿ, ಮೋದಿ ಎಂದರೆ ಅಜಾತಶತ್ರು ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದರು. ಯತ್ನಾಳ ಭಾಷಣ ಉದ್ದವಾಗುತ್ತಲೇ ಭಾಷಣ ಕಡಿತ ಗೊಳಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಮೂಲಕ ಸೂಚನೆ ರವಾನಿಸಲಾಯಿತು. ಆದರೂ ಮಾತು ಮುಂದುವರೆಸಿದ ಯತ್ನಾಳ, ಹಿಂದಿ ಹಾಗೂ ಕನ್ನಡದಲ್ಲಿ ಭಾಷಣ ಮಾಡಿ, ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು. ಇದನ್ನೂ ಓದಿ: Karnataka Election ಕೌಲ್ ಬಜಾರ್ ನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ರೋಡ್ ಶೋ