Advertisement
2013ರ ಚುನಾವಣೆಯಲ್ಲಿ ದ.ಕ. ಜಿಲ್ಲೆ ಯ 8 ಕ್ಷೇತ್ರಗಳಲ್ಲಿ 71, 2018ರಲ್ಲಿ 58 ಅಭ್ಯ ರ್ಥಿಗಳಿದ್ದರೆ ಈ ಬಾರಿ 60 ಮಂದಿ ಇದ್ದಾರೆ. ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ 2013ರಲ್ಲಿ 46, 2018 ರಲ್ಲಿ 34, ಈ ಬಾರಿ 35 ಮಂದಿಇದ್ದಾರೆ.
ದ.ಕ. ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್‌ನಿಂದ ತಲಾ 8, ಜೆಡಿಎಸ್‌ನಿಂದ 7, ಎಸ್‌ಡಿಪಿಐಯಿಂದ 5 ಹಾಗೂ ಇತರರು ಸೇರಿದಂತೆ ಒಟ್ಟು 60 ಮಂದಿ ಕಣದಲ್ಲಿದ್ದಾರೆ. 2018ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ 8, ಸಿಪಿಎಂ 4, ಜೆಡಿಎಸ್ 5, ಬಿಎಸ್‌ಪಿ ಯಿಂದ 1 ಹಾಗೂ ಇತರ 32 ಅಭ್ಯರ್ಥಿ ಗಳು ಒಳಗೊಂಡು 58 ಮಂದಿ ಇದ್ದರು. 2013ರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿಯಿಂದ ತಲಾ 8, ಎಸ್‌ಡಿಪಿಐ 7, ಸಿಪಿಎಂ 3, ಬಿಎಸ್‌ಪಿ 1, ಇತರ 28 ಮಂದಿ ಒಳಗೊಂಡು 71 ಮಂದಿ ಸ್ಪರ್ಧಿಸಿದ್ದರು. ಮಂಗಳೂರು ಉತ್ತರದಲ್ಲಿ ಗರಿಷ್ಠ
ಮಂಗಳೂರು ಉತ್ತರದಲ್ಲಿ ಈ ಬಾರಿ 10 (ಕಳೆದ ಬಾರಿ 7) ಮಂದಿ ಕಣದಲ್ಲಿದ್ದಾರೆ. ಮೂಡುಬಿದಿರೆಯಲ್ಲಿ 8 (7), ಪುತ್ತೂರಿನಲ್ಲಿ 8 (11) ಬೆಳ್ತಂಗಡಿ 8 (6), ಮಂಗಳೂರು ನಗರ ದಕ್ಷಿಣ 8 (11) ಮಂಗಳೂರು 5 (5), ಬಂಟ್ವಾಳ 5 (5) ಹಾಗೂ ಸುಳ್ಯದಲ್ಲಿ 8 (6) ಅಭ್ಯರ್ಥಿಗಳಿದ್ದಾರೆ.
Related Articles
ಜಿಲ್ಲೆಯ 5 ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ತಲಾ 5, ಆಪ್‌ನಿಂದ 4 ಸಹಿತ ಇತರರು ಸೇರಿದಂತೆ 35 ಮಂದಿ ಕಣದಲ್ಲಿದ್ದಾರೆ. 2018ರಲ್ಲಿ ಬಿಜೆಪಿ, ಕಾಂಗ್ರೆಸ್ ನಿಂದ ತಲಾ 5, ಜೆಡಿಎಸ್ 4, ಸಿಪಿಎಂ, ಬಿಎಸ್‌ಪಿಯಿಂದ ತಲಾ 1, ಇತರ 18 ಅಭ್ಯರ್ಥಿಗಳು ಒಳ ಗೊಂಡು 34 ಮಂದಿ ಕಣದಲ್ಲಿದ್ದರು. 2013 ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ 5, ಜೆಡಿಎಸ್ 4, ಕೆಜೆಪಿ 2, ಬಿಎಸ್‌ಪಿ 3 ಹಾಗೂ ಪಕ್ಷೇತರರು ಸೇರಿ ಇತರ 27 ಮಂದಿ ಸೇರಿದಂತೆ 46 ಮಂದಿ ಸ್ಪರ್ಧಿಸಿದ್ದರು.
Advertisement
ಕಾರ್ಕಳ, ಬೈಂದೂರು ಗರಿಷ್ಠಉಡುಪಿ ಕ್ಷೇತ್ರದಲ್ಲಿ 7 (ಕಳೆದ ಬಾರಿ 8), ಕುಂದಾಪುರ 5 (5), ಬೈಂದೂರು 9 (9), ಕಾರ್ಕಳ 9 (7)ಹಾಗೂ ಕಾಪು ಕ್ಷೇತ್ರದಲ್ಲಿ 5 (5) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರರ ಸಂಖ್ಯೆ ಇಳಿಮುಖ
ದ.ಕ. ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ 28 ಪಕ್ಷೇತರರಿದ್ದರು. 2018ರಲ್ಲಿ ಪಕ್ಷೇತರರ ಸಂಖ್ಯೆ 17ಕ್ಕೆ ಇಳಿಮುಖವಾಗಿತ್ತು.
ಈ ವರ್ಷ ಮತ್ತೂ ಕಡಿಮೆಯಾಗಿದ್ದು, ಕೇವಲ 10 ಮಂದಿ ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ 8 ಮಂದಿ ಪಕ್ಷೇತರರಿದ್ದಾರೆ. ಇಲ್ಲಿ 2013ರಲ್ಲಿ 22 ಮಂದಿ ಸ್ಪರ್ಧಿಸಿದ್ದರು. ಕಳೆದ ಬಾರಿ ಅದು ಕಡಿಮೆಯಾಗಿತ್ತು. ಪಕ್ಷಗಳ ಸಂಖ್ಯೆ ಹೆಚ್ಚಳ
ಈ ಬಾರಿ ಆಮ್ ಆದ್ಮಿ ಪಾರ್ಟಿ, ಎಸ್‌ಡಿಪಿಐ ಹಾಗೂ ಉತ್ತಮ ಪ್ರಜಾಕೀಯ ಪಕ್ಷವೂ ಸೇರಿದೆ.
ಆಮ್ ಆದ್ಮಿ ಪಾರ್ಟಿ ಉಭಯ ಜಿಲ್ಲೆಗಳ 12 ಕ್ಷೇತ್ರಗಳಲ್ಲಿ ತನ್ನ ಸ್ಪರ್ಧಿಗಳನ್ನು ನಿಲ್ಲಿಸಿದ್ದರೆ, ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.
ಉತ್ತಮ ಪ್ರಜಾಕೀಯ ಪಕ್ಷಗಳ ಅಭ್ಯರ್ಥಿಗಳೂ ಕೆಲವೆಡೆ ಸ್ಪರ್ಧಿಸಿದ್ದಾರೆ. ಇವುಗಳೊಂದಿಗೆ ಇತರೆ ಪಕ್ಷಗಳ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.