ಕಲಬುರಗಿ: ಸೇಡಂ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಶರಣ ಪ್ರಕಾಶ ಹಣದ ಹೊಳೆ ಹರಿಸಿದ್ದು, ಇಷ್ಟೊಂದು ಹಣ ಏಲ್ಲಿಂದ ಬಂತು ಎಂದು ಕಾಂಗ್ರೆಸ್ ನವರೇ ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಖರ್ಚು ಮಾಡಿದ್ದನ್ನು ನೋಡಿ ಅವರ ಸ್ನೇಹಿತ ವೈದ್ಯರು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾಯಕರ್ತರು ಅವರೇ ಗಾಬರಿಯಾಗಿ ಇಷ್ಟೊಂದು ಹಣ ಏಲ್ಲಿಂದ ಬಂದು ಎಂಬುದಾಗಿ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರ ವಲಯ ಸೇಡಂ ರಸ್ತೆಯ ವಿಮಾನ ನಿಲ್ದಾಣ ಸಮೀಪದ ಸಹರಾ ಲೇ ಔಟ್ ಸಂಬಂಧಿಸಿದಂತೆ ಡಾ.ಶರಣ ಪ್ರಕಾಶ ಪಾಟೀಲ್ ಸಚಿವರಾಗಿದ್ದಾಗ ಆಕ್ಷೇಪಣೆ ವ್ಯಕ್ತಪಡಿಸಿ ಐಎಎಸ್ ಅಧಿಕಾರಿಯನ್ನಿ ತನಿಖಾಧಿಕಾರಿಗಳನ್ನು ನೇಮಿಸಲಾಗಿತ್ತು. ನೇಮಕದ ನಂತರ ಸಚಿವರ ಸ್ನೇಹಿತರೊಬ್ಬರನ್ನು ಸಹರಾ ಲೇ ಔಟ್ ನಲ್ಲಿ ಪಾಲುದಾರರನ್ನಾಗಿ ಮಾಡಿದ ನಂತರ ತನಿಖೆಯನ್ನ ಹಳ್ಳ ಹಿಡಿಸಲಾಯಿತು. ಸಹರಾ ಲೇ ಔಟ್ ನಲ್ಲಿ ಪಾಲುದಾರ ಸ್ನೇಹಿತನೇ ನೀಡಿದ ಕಾರಿನಲ್ಲಿ ಡಾ. ಶರಣಪ್ರಕಾಶ ಪಾಟೀಲರು ಓಡಾಡುತ್ತಿದ್ದಾರೆ. ಇದು ನೈತಿಕತೆಗೆ ಹಿಡಿದ ಕನ್ನಡಿಯಾಗಿದೆ ಎಂದು ತೇಲ್ಕೂರ ವಾಗ್ದಾಳಿ ನಡೆಸಿದರು.
ಡಾ. ಶರಣ ಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ವೈದ್ಯರ ನೇಮಕಾತಿ ಸಂಬಂಧ ಹೈಕೋರ್ಟ್ ಛೀ ಮಾರಿ ಹಾಕಿರುವುದು ಎಲ್ಲರಿಗೂ ತಿಳಿದ ವಿಷಯ. ಒಟ್ಟಾರೆ ಮಾಜಿ ಸಚಿವರು ಒಂದು ಕಪ್ ಚಹಾ ಕುಡಿಯದಂಗ್ ಇರುತ್ತಾರೆ. ಆದರೆ ಎಲ್ಲವನ್ನು ಮಾಡ್ತಾರೆ. ಇದಕ್ಕೆ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ್ದೇ ಸಾಕ್ಷಿ. ಮಾಜಿ ಸಚಿವರು ಪ್ರತಿ ಚುನಾವಣೆಯಲ್ಲಿ ಏನಾದರೂ ಇಲ್ಲ ಸಲ್ಲದ ವಿಷಯ ಮುಂದಕ್ಕೆ ತಂದೇ ಗೆಲ್ಲುತ್ತಾ ಬಂದಿದ್ದಾರೆ. ಒಂದು ಸಲ ಸೋತಿದ್ದಕ್ಕೆ ಇಷ್ಟೊಂದು ರೀತಿಯಲ್ಲಿ ವರ್ತಿಸುತ್ತಿರುವುದು ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ ಎಂದು ತೇಲ್ಕೂರ ಭಾವನಾತ್ಮಕ ವಾಗಿ ನುಡಿದರು.
ಚುಮಾವಣೆ ಮುಂಚೆ ಈ ಮಾಜಿ ಸಚಿವರ ದ್ವಂದ್ವ ನಿಲುವು ಬಗ್ಗೆ ಹೇಳಿದ್ದರೆ ಚುನಾವಣೆ ಸಲುವಾಗಿ ವಿಷಯ ಪ್ರಸ್ತಾಪಿಸಲಾಗಿದೆ ಎನ್ನಲಾಗಿ ಕಡೆಗಣನೆಯಾಗುತ್ತಿತ್ತು. ಆದರೆ ರೈತ ರಿಗೆ ಡಿಸಿಸಿ ಬ್ಯಾಂಕ್ ದಿಂದ ಸಾಲ ವಿತರಿಸಬಾರದೆಂದು ಪತ್ರ ಬರೆದಿರುವುದು ಒಂದೇಡೆಯಾದರೆ ಮತ್ತೊಂದೆಡೆ ಅವರೇ ಡಿಸಿಸಿ ಬ್ಯಾಂಕ್ ದಿಂದ ಸಾಲ ಕೊಡುತ್ತಿಲ್ಲ ಎಂದು ಹೇಳುವ ಮೂಲಕ ದ್ವಂದ್ವ ನಿಲುವು ಹೊಂದಿದ್ದರು.ಇದಕ್ಕೆಲ್ಲ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಸೇಡಂ ಕ್ಷೇತ್ರದ ಮತದಾರರು ಚುನಾವಣೆ ಯಲ್ಲಿ ಅಯ್ಯ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಜಿಲ್ಲೆಯಲ್ಲಿ ಸೇಡಂ ಸೇರಿದಂತೆ ಆರು ಕ್ಷೇತ್ರ ಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ತೇಲ್ಕೂರ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಟಲಿಯಲ್ಲಿ ವ್ಯಾನ್ ಸ್ಫೋಟ: ಹಲವಾರು ವಾಹನಗಳಿಗೆ ಬೆಂಕಿ