Advertisement

Karnataka poll 2023; ಡೈಲಿ ಡೋಸ್- ಸಸಿ ತಂದರೆ ಸಾಕೇ ?ಬುಡಕ್ಕೆ ಗೊಬ್ಬರ ಬೇಕಲ್ವಾ?

01:05 PM Apr 15, 2023 | Team Udayavani |

“ಈ ಹೊಸ ಮುಖ, ಹಳೆ ಮುಖ, ಪರಿಚಿತ ಮುಖ, ಅಪರಿಚಿತ ಮುಖ’- ಇವೆಲ್ಲ ಏನು ಗುರುಗಳೇ? ಈ ಎಲೆಕ್ಷನ್‌ ನಲ್ಲಿ ಎಂದು ಕೇಳಿದ ಸೀತಾರಾಮು. ಹದಿನೈದು ದಿನಗಳಿಂದ ಈ ಪದಗಳನ್ನು ಕೇಳಿ ಕೇಳಿ ಸೀತಾರಾಮು ಕಂಗೆಟ್ಟು ಹೋಗಿದ್ದ. ಈ ಹೊಸ ಮುಖ, ಹಳೆ ಮುಖವನ್ನೇನೋ ಅರ್ಥ ಮಾಡಿಕೊಳ್ಳಬಹುದು,. ಆದರೆ ಈ ಪರಿಚಿತ, ಅಪರಿಚಿತ ಅಂದರೆ ಹೇಗೆ ಎಂಬುದು ಅವನ ಪ್ರಶ್ನೆಯ ಮೂಲವಾಗಿತ್ತು. ಒಂದು ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಇರ್ತಾರೆ ಅಂದುಕೊಂಡರೆ ಅವರನ್ನೆಲ್ಲ ನೆನಪಾಗಿಟ್ಟುಕೊಳ್ಳೋದಕ್ಕೆ ಆಗುತ್ತಾ ಪರಿಚಯ ಇರುವುದಕ್ಕೆ ಎಂದು ಬೇರೆ ತನ್ನ ಮಾತಿಗೆ ಸೇರಿಸಿದ ಸೀತಾರಾಮು.

Advertisement

ಎಲ್ಲವನ್ನೂ ಕೇಳಿಸಿಕೊಂಡ ಶೀನಪ್ಪನವರು ಮೆಲ್ಲಗೆ ಇನ್ನೇನಿದ್ದರೂ ಹೇಳಿಬಿಡಲಿ ಅಂತ ಸುಮ್ಮನೇ ಇದ್ದರು. ಈ ಮೌನವನ್ನು ಅರಿತ ಸೀತಾರಾಮು ಮಾತು ಮುಂದುವರಿಸಿದ. “ಈ ಪರಿಚಿತರೇ ಕ್ಯಾಂಡಿಡೇಟ್‌ ಆಗಬೇಕು ಅಂದ್ರೆ ನೀವೇ ಆಗಬೇಕು. ಇಲ್ಲವೇ ನಾನು ಆಗಬೇಕು. ಅದೂ ಇಲ್ಲದೇ ಹೋದರೆ ಪಕ್ಕದಮನೆಯವರು ಆಗಬೇಕು. ನಾವೆಲ್ಲ ಆದೆವು ಅಂದ್ರೂ ನಮ್ಮ ವೋಟು ನಾವು ಹಾಕಿಕೊಳ್ಳಬೇಕಷ್ಟೇ’ ಎಂದ. ಶೀನಪ್ಪನವರ ರಂಗ ಪ್ರವೇಶವಾಯಿತು.

“ಅದು ರಾಜಕೀಯ ಭಾಷೆ ಕಣಯ್ಯ. ಈ ಹೊಸ ಮುಖವೆಂದರೆ ಇದುವರೆಗೂ ಪಟ್ಟು ಕಲಿಯದವರು ಅಥವಾ ಎಲೆಕ್ಷನ್‌ಗೆ ನಿಲ್ಲದವರು ಅಂತ. ಹಳೆ ಮುಖ ಅಂದರೆ ಈಗಾಗಲೇ ನಾಲ್ಕು, ಐದು, ಆರು, ಏಳು, ಎಂಟು ಬಾರಿ ಎಲೆಕ್ಷನ್‌ ಗೆ ನಿಂತು ಸೋತೋ ಅಥವಾ ಗೆಧ್ದೋ ಅನುಭವ ಉಳ್ಳವರು ಕಣಯ್ಯ. ಅವರಿಗೆ ಯಾವ ಪಟ್ಟು ಎಲ್ಲಿ ಹಾಕಬೇಕು ಅಂತಾ ಗೊತ್ತಿರುತ್ತೆ. 20-30-40 ವರ್ಷಗಳಿಂದ ಪಂಚ ವಾರ್ಷಿಕ ಯೋಜನೆ ರೀತಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಗೆಲ್ಲುವುದನ್ನು ಪ್ರಾಕ್ಟ್ರೀಸ್‌ ಮಾಡುತ್ತಿದ್ದರು. ಕೆಲವೊಮ್ಮೆ ಗೆಲುತ್ತಿದ್ದರು, ಇನ್ನು ಕೆಲವೊಮ್ಮೆ ಮಕಾಡೆ ಮಲಗ್ತಾ ಇದ್ದಿದ್ದರು.

ಇವರ ಜತೆ ಪರಿಚಿತ ಮುಖ ಅಂದರೆ ಈ ಹೊಸ ಮತ್ತು ಹಳೆಯ ಕಾಂಬಿನೇಷನ್‌ ಕಣೋ. ಅಂದರೆ ಹಳೆ ಮುಖನಾ ಅಂದರೆ ಹೌದು ಅಷ್ಟೊಂದು ಹಳತಲ್ಲ, ಹೊಸತಾ ಅಂದರೆ ಹೌದು, ಅದೂ ತೀರಾ ಹೊಸತಲ್ಲ. ಒಂದೋ-ಎರಡೋ ಬಾರಿ ಪ್ರಾಕ್ಟೀಸ್‌ ಮಾಡಿ ಗೆಧ್ದೋ-ಸೋತೋ ಜನರಿಗೆ ಪರಿಚಿತವಾಗಿರ್ತಾರಲ್ಲ’. ಅದ್ಸರಿ. ಇದರ ಮಧ್ಯೆ “ಈ ಅಪರಿಚಿತ ಮುಖವೆಂದರೆ ಹೇಗೆ? ಎಂದು ಉಳಿದವಗಳೆಲ್ಲದಕ್ಕೂ ಸಿಕ್ಕಾ (ಮುದ್ರೆ) ಒತ್ತಿದಂತೆ’ ಹೇಳಿದ.

“ಲೋ ತಮ್ಮಾ, ರಾಜಕೀಯದಲ್ಲಿ ಹಳತು, ಪರಿಚಿತ, ಹೊಸತು ಎಲ್ಲವೂ ಕೆಲವೊಮ್ಮೆ ಅಪರಿಚಿತರ ಎದುರು ಪಲ್ಟಿ ಹೊಡೀತಾವೆ. ಯಾಕೆಂದರೆ ಬರೀ ಸಸಿ ಸಿಕ್ಕರೆ ಸಾಲದಣ್ಣ, ಅದರ ಬುಡಕ್ಕೆ ಗೊಬ್ಬರ ಕೊಡೋರೂ ಬೇಕಲ್ವಾ?’ ಎಂದರು ಶೀನಪ್ಪ.

Advertisement

-ಡಾ| ಗಂಪತಿ

Advertisement

Udayavani is now on Telegram. Click here to join our channel and stay updated with the latest news.

Next