Advertisement

ಪ್ರತಿಭಟನೆ ಮಧ್ಯೆಯೇ ಪ್ರಶ್ನೋತ್ತರ ಕಲಾಪ: ಖಾದರ್‌ ನಡೆಗೆ ಬಿಜೆಪಿ ಖಂಡನೆ

09:19 PM Jul 04, 2023 | Team Udayavani |

ವಿಧಾನಸಭೆ: ಪ್ರತಿಭಟನೆ ಮಧ್ಯೆಯೇ ಸ್ಪೀಕರ್‌ ಯು.ಟಿ.ಖಾದರ್‌ ಪ್ರಶ್ನೋತ್ತರ ಕಲಾಪ ನಡೆಸಿರುವುದಕ್ಕೆ ಬಿಜೆಪಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ನಿಲುವಳಿ ಸೂಚನೆಯನ್ನು ಮೊದಲು ಇತ್ಯರ್ಥಗೊಳಿಸಿ ಎಂದು ವಿನಂತಿಸಿಕೊಂಡರೂ ಸ್ಪೀಕರ್‌ ಕಾಂಗ್ರೆಸ್‌ ಪರವಾಗಿ ವರ್ತಿಸಿದ್ದಾರೆ.

ಸಾಮಾನ್ಯವಾಗಿ ಸದನ ಮುಗಿಯುವುದಕ್ಕೆ ಒಂದೆರಡು ದಿನ ಇರುವಾಗ ವಿಧೇಯಕಗಳನ್ನು ಪಾಸು ಮಾಡಿಕೊಳ್ಳುವಾಗ ಸ್ಪೀಕರ್‌ ಈ ರೀತಿ ನಡೆದುಕೊಳ್ಳುವುದು ಸಹಜ. ಆದರೆ ಮೊದಲ ಅಧಿವೇಶನದ ಮೊದಲ ದಿನವೇ ಆಡಳಿತ ಪಕ್ಷದ ಪರ ಸ್ಪೀಕರ್‌ ನಿಲ್ಲುವುದು ಸರಿಯಲ್ಲ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಅಶ್ವತ್ಥನಾರಾಯಣ, ಸುನಿಲ್‌ಕುಮಾರ್‌, ಡಾ.ಭರತ್‌ ಶೆಟ್ಟಿ ಮೊದಲಾದವರು ಸ್ಪೀಕರ್‌ ಕಚೇರಿಗೆ ತೆರಳಿ ತಮ್ಮ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲೂ ಇದೇ ಮಾತನ್ನು ಹೇಳಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next