Advertisement
ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ 2019ನೇ ಸಾಲಿನ ಮುಖ್ಯಮಂತ್ರಿಯವರ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಪೊಲೀಸರು ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಅವರ ಕರ್ತವ್ಯ ನಿಷ್ಠೆ ಎಲ್ಲರಿಗೂ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಈಗಾಗಲೇ ಪೊಲೀಸ್ ಗೃಹ -2020 ಯೋಜನೆಯಲ್ಲಿ 2,277 ಕೋ. ರೂ. ವೆಚ್ಚದಲ್ಲಿ 11 ಸಾವಿರ ಸುಸಜ್ಜಿತ ವಸತಿ ಯೋಜನೆ ನಿರ್ಮಾಣ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಪೊಲೀಸ್ ಗೃಹ – 2025 ಯೋಜನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದು ಇದರಡಿ ಪೊಲೀಸ್ ಅಧಿಕಾರಿ ಸಿಬಂದಿಗೆ 10,034 ವಸತಿಗಳನ್ನು 2000 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ:ಗದ್ದಲದ ನಡುವೆಯೂ ವಿಧಾನಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ
Related Articles
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಅಪರಾಧ ಪ್ರಕರಣಗಳ ಸವಾಲು ಎದುರಾದರೂ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಮುಂದೆಯೂ ಮತ್ತಷ್ಟು ಸವಾಲು ಎದುರಿಸಲು ಸಜ್ಜಾಗಬೇಕು. ಅಪರಾಧ ನಿಗ್ರಹ ಮತ್ತು ಪತ್ತೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಆವಶ್ಯಕತೆ ಈಗ ಹೆಚ್ಚಾಗಿದೆ ಎಂದರು.
Advertisement
ಹ್ಯಾಕ್ ಹಾವಳಿ ನಿಯಂತ್ರಿಸಿಇತ್ತೀಚೆಗೆ ಸೈಬರ್ ಅಪರಾಧ, ಮಾದಕ ವಸ್ತುಗಳ ನಿಯಂತ್ರಣದಲ್ಲೂ ನಮ್ಮ ಪೊಲೀಸರು “ಎಕ್ಸಲೆಂಟ್’ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಈಗ ವೆಬ್‌ಸೈಟ್ ಹ್ಯಾಕರ್‌ಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಹೊಸ ತಂತ್ರಜ್ಞಾನ ಹಾಗೂ ಹೊಸ ಪ್ರತಿಭೆಗಳನ್ನು ಬಳಸಿಕೊಳ್ಳಬೇಕು.
– ಬಸವರಾಜ ಬೊಮ್ಮಾಯಿ