Advertisement

Karnataka: ಶೇ. 10ರಷ್ಟು ಉಚಿತ ವಿದ್ಯುತ್‌ ನೀಡಲು ನಿರ್ಧಾರ

12:11 AM Jul 19, 2023 | Team Udayavani |

ಬೆಂಗಳೂರು: ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಗ್ರಾಹಕರಿಗೆ ರಾಜ್ಯದ ಮಾಸಿಕ ಸರಾಸರಿಯಾದ 53 ಯೂನಿಟ್‌ ಜತೆಗೆ ಹೆಚ್ಚುವರಿ ಶೇ. 10ರಷ್ಟು ಉಚಿತವಾಗಿ ನೀಡಲು ಸರಕಾರ ನಿರ್ಧರಿಸಿದೆ. ಇದರೊಂದಿಗೆ ಪರೋಕ್ಷವಾಗಿ ಈ ವರ್ಗವನ್ನು ಹೊಸ ಗ್ರಾಹಕರನ್ನಾಗಿ ಪರಿಗಣಿಸಲಾಗಿದೆ.

Advertisement

ಈಗಾಗಲೇ ಹೇಳಿರುವಂತೆ ಹೊಸ ಮನೆಗಳಿಗೆ ರಾಜ್ಯದ ಮಾಸಿಕ ಸರಾಸರಿ 53 ಯೂನಿಟ್‌ ಜತೆಗೆ ಹೆಚ್ಚುವರಿ ಶೇ. 10ರಷ್ಟು ಅಂದರೆ 58 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸಲಾಗುವುದು. ಇದೇ ನಿಯಮ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಗ್ರಾಹಕರಿಗೂ ಅನ್ವಯ ಆಗಲಿದೆ ಎಂದರು.

ಅಮೃತ ಜ್ಯೋತಿ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ ವಿದ್ಯುತ್‌ ಉಚಿತವಾಗಿ ಪೂರೈಸಲಾಗುತ್ತಿದೆ. ಗೃಹಜ್ಯೋತಿ ಅಡಿ ಹೆಚ್ಚುವರಿ ಶೇ. 10ರಷ್ಟು ಅಂದರೆ ಮಾಸಿಕ 82.5 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next