Advertisement

karnataka ಶ್ರೀಗಂಧ ಬೆಳೆಯಲು ಶೀಘ್ರವೇ ಹೊಸ ನೀತಿ; ಅರಣ್ಯ ಸಚಿವ ಈಶ್ವರ ಖಂಡ್ರೆ

04:36 PM Jul 09, 2023 | Team Udayavani |

ಕಲಬುರಗಿ: ರೈತರು ಸೇರಿದಂತೆ ಇತರ ವ್ಯಕ್ತಿಗಳು ತಮ್ಮ ಜಮೀನುಗಳಲ್ಲಿ ಶ್ರೀಗಂಧ ಬೆಳೆಯುವ ನಿಟ್ಟಿನಲ್ಲಿ ಇರುವ ನೀತಿ ನಿಯಮಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶೀಘ್ರವೇ ಹೊಸ ನೀತಿ ಪ್ರಕಟಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

Advertisement

ನಗರದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಅವರನ್ನು ರೈತರು ಹಾಗೂ ಶ್ರೀಗಂಧ ಬೆಳೆಗಾರರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಶ್ರೀಗಂಧ ಬೆಳೆಯಲು ಇರುವ ತೊಡಕುಗಳನ್ನು ಕೂಡಲೇ ಸರಳಿಕರಣ ಗೊಳಿಸುವ ನಿಟ್ಟಿನಲ್ಲಿ ಸಭೆ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಂತಿಮ ಗೊಳಿಸಲಾಗುವುದು ಎಂದರು.

ಇದಕ್ಕೂ ಮೊದಲು ಅರಣ್ಯ ಭವನದಲ್ಲಿ ಕಲ್ಬುರ್ಗಿ ವಲಯ ಅರಣ್ಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ವಿಸ್ತರಣೆಗೆ ಬೇಕಾದ ಅನುದಾನವನ್ನು ಶೀಘ್ರವೇ ನೀಡಲಾಗುವುದು. ಅಲ್ಲದೆ, ಕೊರತೆ ಇರುವ ಹುದ್ದೆಗಳನ್ನು ಕೂಡ ಶೀಘ್ರವೇ ಭರ್ತಿ ಮಾಡಲಾಗುವುದು ಎಂದರು.

ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಸಸಿಗಳನ್ನು ಮರಗಳನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೆ ಪ್ರೋತ್ಸಾಹ ಧನ ಯೋಜನೆಯಲ್ಲಿ ರೈತರಿಗೆ ನೀಡಲಾಗುತ್ತಿರುವ ಸಸಿಗಳು ಎಷ್ಟು ಪ್ರಮಾಣದಲ್ಲಿ ಉಳಿದುಕೊಂಡಿವೆ ಎಂದು ಮಾಹಿತಿ ಕೇಳಿದಾಗ, ಅಧಿಕಾರಿಗಳು ಶೇಕಡ 80ರಷ್ಟು ಉಳಿದಿದೆ ಎಂದು ಹೇಳಿದರು.

Advertisement

ಆಗ ಸಚಿವರು ಮಲೆನಾಡಿನಲ್ಲೇ ಶೇಕಡಾ 70 ಹಾಗೂ 60ರಷ್ಟು ಉಳಿಯುವಾಗ ಬಿಸಿಲಿನಾಡಿನಾದ ಕಲ್ಯಾಣದಲ್ಲಿ 80% ಉಳಿಯಲು ಹೇಗೆ ಸಾಧ್ಯ ಈ ಕುರಿತು ಸರಿಯಾಗಿ ಪರೀಕ್ಷೆ ಮಾಡಿ ತಿಳಿಸಿ ಎಂದರು.ನರ್ಸರಿ ಬೆಳೆಯುವ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಪಾರ್ಕುಗಳ ನಿರ್ಮಾಣ ಮತ್ತು ಪ್ರವಾಸಿ ತಾಣಗಳನ್ನಾಗಿ ಪರಿವರ್ತನೆ ಮಾಡುವಂತಹ ಕೆಲವು ವಿಶೇಷ ಸ್ಥಳಗಳ ಬಗ್ಗೆ ಮಾಹಿತಿ ನೀಡುವಂತೆ ಮತ್ತು ದೈವಿ ವನದ ಕುರಿತು ಹೆಚ್ಚು ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಸಾಮಾಜಿಕ ಅರಣ್ಯವನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಐದು ಕೋಟಿ ಸಸಿಗಳನ್ನು ನೆಡುವ ಉದ್ದೇಶ ಸಾಪಲ್ಯ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ರಾಯಚೂರು, ಯಾದಗಿರಿ ಬೀದರ್ ಹಾಗೂ ಕಲ್ಬುರ್ಗಿ ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next