Advertisement

ಕರ್ನಾಟಕಕ್ಕೆ ಕನ್ನಡ-ಕೇಂದ್ರಿತ ಸರ್ಕಾರದ ಅನಿವಾರ್ಯತೆ ಇದೆ: ಎಚ್‌.ಡಿ.ದೇವೇಗೌಡ 

09:09 PM Dec 29, 2022 | Team Udayavani |

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ತೀವ್ರಗೊಂಡಿದ್ದು, ಆಡಳಿತ ಸರ್ಕಾರವು ರಣಹೇಡಿಯಂತೆ ಬಾಲ ಮುದುರಿಕೊಂಡಿರುವುದು, ವಿರೋಧ ಪಕ್ಷವು ಈ ವಿಷಯಕ್ಕೂ ತಮಗೂ ಸಂಬಂಧವೇ ಇಲ್ಲದಿರುವಂತೆ ಇರುವುದು, ಕರ್ನಾಟಕಕ್ಕೆ ಕನ್ನಡ-ಕೇಂದ್ರಿತ ಸರ್ಕಾರದ ಅನಿವಾರ್ಯತೆ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಾಗ್ಧಾಳಿ ನಡೆಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, “ಕರ್ಣಾಟ ಬಲಂ ಅಜೇಯಂ’ ಎಂದು ಕೊಂಡಾಡುವಷ್ಟು ಬಲಿಷ್ಠವಾಗಿದ್ದ ನಮ್ಮ ರಾಜ್ಯವು ಇಂದು ಛಿದ್ರ ಛಿದ್ರವಾಗುವ ಭಯದ ವಾತಾವರಣ ನಿರ್ಮಾಣವಾಗಿರುವುದಕ್ಕೆ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯಕರ ಆಡಳಿತ ಕಾರಣವೇ ಹೊರತು ಮತ್ತೀನೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಗತವೈಭವ ಮರುಕಳಿಸಬೇಕಿದ್ದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕಿದೆ. ಇದು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next