Advertisement
ಅಸ್ಸಾಂ ಮೂಲದ ನಬರನ್ ಚಕ್ಮಾ(30), ಆತನ ಸಹಚರರಾದ ಆಂಧ್ರಪ್ರದೇಶದ ಮೊಬಿನ್ ಬಾಬು(32), ಬೆಂಗಳೂರಿನ ರೋಲ್ಯಾಂಡ್ ರೋಡ್ನಿ ರೋಜರ್ (26) ಮತ್ತು ತಮಿಳುನಾಡು ಚೆನ್ನೈ ಮೂಲದ ತರುಣ್ ಕುಮಾರ್ ಲಾಲ್‌ಚಂದ್(40) ಬಂಧಿತರು. ಅವರಿಂದ ಆರು ಕೋಟಿ ರೂ. ಮೌಲ್ಯದ 15 ಕೆ.ಜಿ. ಹ್ಯಾಶಿಷ್ ಆಯಿಲ್, 11 ಕೆ.ಜಿ. ಗಾಂಜಾ, 530 ಗ್ರಾಂಚರಸ್ ಉಂಡೆ, ನಾಲ್ಕು ಹೈಡ್ರೋ ಗಾಂಜಾ ಸಸಿಗಳು ಹಾಗೂ ಮೊಬೈಲ್‌ಗಳು, ಕಾರು, ಬೈಕ್, ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಡ್ರಗ್ಸ್ ಪ್ರಕರಣವೊಂದರಲ್ಲಿ ಕಳೆದ ವರ್ಷ ಸಿಸಿಬಿ ಪೊಲೀಸರು ರಾಮ ಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿ ಈತನ ಪ್ರಮುಖ ಸಹಚರ ಸಿಂಟೋ ಥಾಮಸ್‌ನನ್ನು ಬಂಧಿಸಲಾಗಿತ್ತು. ಈ ವೇಳೆ ನಬರನ್ ಚಕ್ಮಾನಾಪತ್ತೆಯಾಗಿದ್ದ. ನಂತರ ನೆರೆ ರಾಜ್ಯದಲ್ಲಿ ತಲೆಮರೆಸಿಕೆದ್ದ ಬಹಳಷ್ಟು ಮಂದಿ ಸಹಚರರನ್ನು ಬಳಸಿಕೊಂಡು ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ನಾಲ್ವರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಒಂದು ಲಕ್ಷ ಬಹುಮಾನಈ ಎರಡು ಪ್ರಕರಣಗಳ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದಕಮಲ್ ಪಂತ್ ಶ್ಲಾಘಿಸಿ ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ. ಲಾರಿ ಚಾಲಕನ ಬಂಧನ
ಆಂಧ್ರಪ್ರದೇಶದಿಂದ ಗಾಂಜಾವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಲಾರಿ ಚಾಲಕ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆಂಧ್ರಪ್ರದೇಶ ಮೂಲದ ತಮಿನ್ (43) ಬಂಧಿತ. ಆತನಿಂದ ಎರಡು ಲಕ್ಷ ರೂ. ಮೌಲ್ಯದ 8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿ ಆಂಧ್ರಪ್ರದೇಶದಿಂದ ತನ್ನ ಲಾರಿಯಲ್ಲಿ ಗಾಂಜಾವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಶಿವಾಜಿನಗರ, ತೊಪ್ಪ ಮೊದಲಿಯಾರ್ ಸ್ಟ್ರೀಟ್, ನಾಲಾ ಹತ್ತಿರ ವ್ಯಕ್ತಿಯೊಬ್ಬ ಗಾಂಜಾ ಮಾದಕ ವಸ್ತುವನ್ನು ಮಾರಾಟಕ್ಕೆ ಮುಂದಾಗಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ನೈಜೀರಿಯಾ ಪ್ರಜೆ ಸೆರೆ
ಮತ್ತೊಂದು ಪಕ್ರರಣದಲ್ಲಿ ಅಕ್ರಮವಾಗಿ ನೆಲೆಸಿದಲ್ಲದೆ, ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜಿರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒನ್ಯಾಕ ಇಮ್ಯಾನುಲ್ ಜೇಮ್ಸ್ (31) ಬಂಧಿತ. ಈತನಿಂದ ಐದು ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರಗೆಳು ಮತ್ತು ಎಲ್‌ಎಸ್‌ಡಿ ಸ್ಟ್ರೀಪ್ಸ್‌ಗಳು, ಬೈಕ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹಳೇ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆಯ ಬಳಿ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ವೀಸಾ, ಪಾಸ್ ಪೋರ್ಟ್ ಅವಧಿ ಮುಕ್ತಾಯಗೊಂಡಿದ್ದು, ಅಕ್ರಮವಾಗಿ ವಾಸವಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಮಾದಕ ವಸ್ತು ಮಾರಾಟ ಜಾಲದಲ್ಲಿ
ತೊಡಗಿ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.ಈ ಹಿಂದೆಯೂ ಈತನ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರ ಬಂದು ಪುನಃ ಅದೇ ದಂಧೆಯಲ್ಲಿ ತೊಡಗಿದ್ದಾನೆ
ಎಂದು ಪೊಲೀಸರು ಹೇಳಿದರು.