Advertisement

ಸಚಿವ ಮುನೇನಕೊಪ್ಪ ಮಾದರಿ ನಡೆ; ಹಾರ-ತುರಾಯಿ ಬದಲು ಪುಸ್ತಕಕ್ಕೆ ಮನವಿ

01:18 PM Aug 07, 2021 | Team Udayavani |

ಹುಬ್ಬಳ್ಳಿ: ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಶಂಕರ ಪಾಟೀಲ ಮುನೇಕೊಪ್ಪ ಅವರು ನಗರಕ್ಕೆ ಶನಿವಾರ ಆಗಮಿಸುತ್ತಿದ್ದಾರೆ. ತಮ್ಮ ಸ್ವಾಗತ ಹಾಗೂ ಅಭಿನಂದನೆಗೆ ಆಗಮಿಸುವ ಅಭಿಮಾನಿಗಳು, ಕಾರ್ಯಕರ್ತರು ಹಾರ-ತುರಾಯಿ ತರುವುದು ಬೇಡ, ತರುವುದಾದರೆ ಕನ್ನಡ ಪುಸ್ತಕಗಳನ್ನು ತರುವಂತೆ ಮನವಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.

Advertisement

ಶುಭಕೋರಲು ಆಗಮಿಸುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಹಾರ-ತುರಾಯಿ, ನೆನಪಿನ ಕಾಣಿಕೆಗಳನ್ನು ತರುವುದು ಬೇಡ. ತರುವುದಾದರೆ ಕನ್ನಡ ಪುಸ್ತಕಗಳನ್ನು ತಂದರೆ ಅವುಗಳನ್ನು ಗ್ರಂಥಾಲಯಗಳಿಗೆ ನೀಡುವುದಾಗಿ ನೂತನ ಸಚಿವರು ಹೇಳಿದ್ದಾರೆ.

ಮುನೇನಕೊಪ್ಪ ಅವರು ಶನಿವಾರ  ಮಧ್ಯಾಹ್ನ 1 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್‌-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಪರಿಶೀಲನೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ನವಲಗುಂದದ ರೈತ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ರೈತ ಭವನಕ್ಕೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಸ್ವಗ್ರಾಮ ಅಮರಗೋಳಕ್ಕೆ ತೆರಳುವರು. ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡುವರು.

Advertisement

Udayavani is now on Telegram. Click here to join our channel and stay updated with the latest news.

Next