Advertisement

ಸೆಲ್ಫಿಗೆ ಡಿಕೆಶಿ ಗರಂ: ವಿದ್ಯಾರ್ಥಿಗೆ ಏಟು

06:55 AM Nov 21, 2017 | Team Udayavani |

ಬೆಳಗಾವಿ: ಸಚಿವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕೋಪಗೊಂಡ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ವಿದ್ಯಾರ್ಥಿಗೆ ಏಟು ಕೊಟ್ಟ ಘಟನೆ ಸೋಮವಾರ ನಡೆದಿದೆ.

Advertisement

ನಗರದ ಶೇಖ್‌ ಹೋಮಿಯೋಪಥಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ ಪಾಲ್ಗೊಂಡಿದ್ದರು. ಕಾರ್ಯ ಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಸಚಿವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ. ಇದರಿಂದ ಕೋಪಗೊಂಡ ಸಚಿವರು ವಿದ್ಯಾರ್ಥಿಯ ಕೈಗೆ ಹೊಡೆದು ಮೊಬೈಲ್‌ ಕೆಳಗೆ ಬೀಳಿಸಿದರು. ಇದರಿಂದ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು

Advertisement

Udayavani is now on Telegram. Click here to join our channel and stay updated with the latest news.

Next