Advertisement
ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ಈ ಸತ್ಯವನ್ನು ಒಪ್ಪಿಕೊಂಡಿದ್ದು, ಮಾರ್ಚ್ ತಿಂಗಳ ಪ್ರೋತ್ಸಾಹ ಧನ ಇದುವರೆಗೆ ಬಿಡುಗಡೆ ಆಗಿಲ್ಲ. ಆಗಸ್ಟ್ ತಿಂಗಳಲ್ಲಿ ಎರಡನೇ ಕಂತಿನ ಅನುದಾನ ಬಿಡುಗಡೆಯಾದ ಬಳಿಕ ಮಾರ್ಚ್ ತಿಂಗಳ ಪ್ರೋತ್ಸಾಹಧನ ಕೊಡುವುದಾಗಿ ಹೇಳಿದ್ದಾರೆ.
ತಿಂಗಳಿಗೆ 7.56 ಲಕ್ಷ ಹಾಲು ಉತ್ಪಾದಕರು 1,900 ಲಕ್ಷ ಲೀಟರ್‌ನಷ್ಟು ಹಾಲನ್ನು ಕೆಎಂಎಫ್ಗೆ ಪೂರೈಸುತ್ತಿದ್ದಾರೆ. ಇಷ್ಟು ರೈತರಿಗೆ ಪ್ರೋತ್ಸಾಹಧನ ನೀಡಲು ಮಾಸಿಕ ಕನಿಷ್ಠ 90 ಕೋಟಿ ರೂ. ಬೇಕಾಗುತ್ತದೆ. 2023-24 ನೇ ಸಾಲಿಗೆ ಸಾಮಾನ್ಯ ವರ್ಗದಡಿ ರೈತರಿಗೆ ಪ್ರೋತ್ಸಾಹಧನ ನೀಡಲು 1080 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಆದರೆ, ಸಾಮಾನ್ಯ ವರ್ಗದಡಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಮಾಸಿಕ ಪ್ರೋತ್ಸಾಹ ಧನವು 100 ಕೋಟಿ ರೂ.ವರೆಗೆ ಏರುತ್ತಿದೆ. ಅನುದಾನದ ಕೊರತೆ ಇರುವುದರಿಂದ ಹೆಚ್ಚುವರಿ ಅನುದಾನ ಬೇಕಿದೆ.