Advertisement

ಕಡೆಯ ಹಂತದಲ್ಲಿ ಸೋತ ಕರ್ನಾಟಕ

06:40 AM Feb 12, 2018 | Team Udayavani |

ಆಲೂರು (ಬೆಂಗಳೂರು): ಇಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಕರ್ನಾಟಕ ಸಮೀಪದರಲ್ಲಿ ಪಂಜಾಬ್‌ ವಿರುದ್ಧ ಜಯ ತಪ್ಪಿಸಿಕೊಂಡಿದೆ. ಸತತ 2 ಪಂದ್ಯಗಳನ್ನು ಗೆದ್ದಿದ್ದ ರಾಜ್ಯ ಈ ಪಂದ್ಯದಲ್ಲೂ ಗೆದ್ದು ಕ್ವಾರ್ಟರ್‌ಫೈನಲ್‌ ಸ್ಥಾನವನ್ನು ಖಾತ್ರಿ ಮಾಡಿಕೊಳ್ಳುವ ಲೆಕ್ಕಾಚಾರ ಹೊಂದಿತ್ತು. ಈಗ ಮುಂದಿನೆರಡು ಪಂದ್ಯಗಳ ಫ‌ಲಿತಾಂಶಕ್ಕೆ ಕಾಯಬೇಕಾಗಿದೆ.

Advertisement

50 ಓವರ್‌ಗಳ ಪಂದ್ಯ ಮಳೆಯ ಕಾರಣ 42 ಓವರ್‌ಗಳಿಗಿಳಿಸಲ್ಪಟ್ಟಿತು. ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 42 ಓವರ್‌ನಲ್ಲಿ 3 ವಿಕೆಟ್‌ಗೆ 269 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಕರ್ನಾಟಕ 42 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 265 ರನ್‌ ಮಾತ್ರ ಗಳಿಸಿತು. ಇದು ರಾಜ್ಯಕ್ಕೆ 4 ರನ್‌ಗಳ ಸೋಲು.

ಕೆ.ಎಲ್‌.ರಾಹುಲ್‌ ಶತಕ ವ್ಯರ್ಥ: ಭಾರತ ತಂಡದ ಸದಸ್ಯ ಕೆ.ಎಲ್‌.ರಾಹುಲ್‌ ಸದ್ಯ ನಡೆಯುತ್ತಿರುವ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿಲ್ಲ. ಅವರೀಗ ಕರ್ನಾಟಕದ ಸೇವೆಗೆ ಲಭ್ಯರಾಗಿದ್ದಾರೆ. ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ಅವರು ಅಬ್ಬರದ ಶತಕ ಬಾರಿಸಿ ಪಂಜಾಬ್‌ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡರು.

ಪಂಜಾಬ್‌ ನೀಡಿದ 270 ರನ್‌ಗಳ ಗುರಿಯನ್ನು ರಾಜ್ಯ 42 ಓವರ್‌ಗಳಲ್ಲಿ ಬೆನ್ನತ್ತಬೇಕಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ತ ನ್ನ ಹೋರಾಟವನ್ನು ಭರ್ಜರಿಯಾಗಿಯೇ ಜಾರಿಯಲ್ಲಿಟ್ಟಿತ್ತು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರಾಹುಲ್‌ 91 ಎಸೆತ ಎದುರಿಸಿ 8 ಬೌಂಡರಿ, 5 ಸಿಕ್ಸರ್‌ಗಳ ನೆರವಿನಿಂದ 107 ರನ್‌ ಬಾರಿಸಿದರು. ಆದರೆ ಮತ್ತೂಂದು ತುದಿಯಲ್ಲಿ ಅವರಿಗೆ ಸಮರ್ಥ ನೆರವು ಸಿಗಲಿಲ್ಲ.

ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟುತ್ತ ಇನಿಂಗ್ಸ್‌ ಬೆಳೆಸುತ್ತ ಹೋದ ರಾಹುಲ್‌ 40ನೇ ಓವರ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಉಳಿದ ಬ್ಯಾಟ್ಸ್‌ಮನ್‌ಗಳು ಒತ್ತಡ ನಿಭಾಯಿಸಲು ವಿಫ‌ಲರಾಗುವ ಮೂಲಕ ರಾಜ್ಯದ ಸೋತು ಹೋಯಿತು. ರಾಜ್ಯದ ಪರ ಮಿಂಚಿದ ಮತ್ತೂಬ್ಬ ಬ್ಯಾಟ್ಸ್‌ಮನ್‌ ಪವನ್‌ ದೇಶಪಾಂಡೆ. ಅವರು 51 ಎಸೆತದಿಂದ 53 ರನ್‌ ಬಾರಿಸಿದರು. ಕೊನೆಯಹಂತದಲ್ಲಿ ನಾಯಕ ವಿನಯ್‌ ಕುಮಾರ್‌ ಹೋರಾಟ ನಡೆಸಿ ಗುರಿಮುಟ್ಟಲು ಶ್ರಮಿಸಿದರೂ ಪಂಜಾಬ್‌ ಬೌಲರ್‌ಗಳು ಕೈ ಬಿಗಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next