Advertisement

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

11:03 AM May 10, 2024 | Team Udayavani |

ಇಂದು ನಾಲ್ಕು ಕನ್ನಡ ಚಿತ್ರಗಳು ತೆರೆಗೆ ಬರಲಿದೆ. ವಿಜಯ್ ರಾಘವೇಂದ್ರ ಅವರ ಗ್ರೇ ಗೇಮ್ಸ್, ರಿಷಿ ಅವರ ರಾಮನ ಅವತಾರ, ರಚನಾ ನಾಯಕಿಯಾಗಿರುವ 4ಎನ್6 ಮತ್ತು ಹೊಸಬರ ಅಲೈಕ್ಯಾ ತೆರೆ ಕಾಣಲಿದೆ.

Advertisement

ಗ್ರೇ ಗೇಮ್ಸ್‌

ವಿಜಯ ರಾಘವೇಂದ್ರ ನಾಯಕರಾಗಿರುವ “ಗ್ರೇ ಗೇಮ್ಸ್‌’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಆನಂದ್‌ ಮುಗದ್‌ ನಿರ್ಮಾಣದ ಈ ಚಿತ್ರವನ್ನು ಗಂಗಾಧರ್‌ ಸಾಲಿಮಠ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ಸೋದರ ಅಳಿಯ ಜಯ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶೃತಿ ಪ್ರಕಾಶ್‌, ಭಾವನ ರಾವ್‌, ಇಶಿತಾ, ರವಿ ಭಟ್‌, ಅಪರ್ಣ ವಸ್ತಾರೆ, ರವಿ ಭಟ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರಾಮನ ಅವತಾರ

ರಿಷಿ ನಾಯಕರಾಗಿರುವ “ರಾಮನ ಅವತಾರ’ ಚಿತ್ರ ಇಂದು ತೆರೆಕಾಣುತ್ತಿದೆ. ವಿಕಾಸ್‌ ಪಂಪಾಪತಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಣೀತಾ ಸುಭಾಷ್‌ ಹಾಗೂ ಶುಭ್ರ ಅಯ್ಯಪ್ಪ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾಮ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್‌ ಮ್ಯಾನ್‌ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್‌ ಮ್ಯಾನ್‌ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳೇನು ಅವನನ್ನು ಹೇಗೆ ಬದಲಾಯಿಸುತ್ತದೆ? ಎನ್ನುವುದು ತಂಡದ ಮಾತು.

Advertisement

4ಎನ್‌6

ರಚನಾ ಇಂದರ್‌ ನಾಯಕಿಯಾಗಿರುವ “4ಎನ್‌6′ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಪರ್ಪಲ್‌ ಪ್ಯಾಚ್‌ ಪಿಕ್ಚರ್ಸ್‌ ಬ್ಯಾನರ್‌ನಡಿ ಸಾಯಿಪ್ರೀತಿ ಎನ್‌ ನಿರ್ಮಿಸಿದ್ದಾರೆ. ದರ್ಶನ್‌ ಶ್ರೀನಿವಾಸ್‌ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಅಲೈಕ್ಯಾ

ಹಾರರ್‌ ಹಿನ್ನೆಲೆಯಲ್ಲಿ ನಡೆಯೋ ಕಥಾಹಂದರ ಒಳಗೊಂಡ ಚಿತ್ರ ಅಲೈಕ್ಯಾ ಈ ವಾರ ತೆರೆಕಾಣುತ್ತಿದೆ. ಹಿತೇಶ್‌ ಮೂವೀಸ್‌ ಲಾಂಛನದಲ್ಲಿ ಎಂ.ಭೂಪತಿ ನಿರ್ಮಿಸಿರುವ, ಹಾರರ್‌ ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರ ಹೊಂದಿದ ಈ ಚಿತ್ರಕ್ಕೆ ಸಾತ್ವಿಕ್‌ ಎಂ.ಭೂಪತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿದ್ದಾರೆ. ದರ್ಶಿನಿ, ನಿಸರ್ಗ, ವಿವೇಕ್‌ ಚಕ್ರವರ್ತಿ, ವಜ್ರ, ಕಾವ್ಯಪ್ರಕಾಶ್‌, ಜಾಹ್ನವಿ ವಿ, ನಾರಾಯಣ್‌ ಸ್ವಾಮಿ ಡಿ ಎಂ., ಸಾತ್ವಿಕ್‌ ಎಂ.ಭೂಪತಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next