Advertisement

ಮನೆಯಲ್ಲೇ ಸುರಕ್ಷಿತವಾಗಿರಿ : ನಿಯಮ ಉಲ್ಲಂಘಿಸಿದರೆ ಬಂಧನ, ವಾಹನ ಜಪ್ತಿ

01:31 AM May 10, 2021 | Team Udayavani |

ಬೆಂಗಳೂರು: ಸೋಮವಾರದಿಂದ 14 ದಿನ “ಮನೆ’ವಾಸವೇ ಒಳ್ಳೆಯದು. ಅನಗತ್ಯವಾಗಿ ಹೊರಬಂದರೆ ಲಾಠಿ ರುಚಿ ನೋಡಬೇಕಾಗುತ್ತದೆ, ನಿರ್ಬಂಧ ಗಾಳಿಗೆ ತೂರಿದರೆ ಕಂಬಿ ಎಣಿಸಬೇಕಾಗುತ್ತದೆ, ವಾಹನವನ್ನು ರಸ್ತೆಗಿಳಿಸಿದರೆ ಜಪ್ತಿಯಾಗುವುದು ಖಚಿತ.

Advertisement

ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ, ಜನತಾ ಕರ್ಫ್ಯೂಗೆ ಜನರಿಂದ ನಿರೀಕ್ಷಿತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ 14 ದಿನಗಳ ಬಿಗಿ ಲಾಕ್‌ಡೌನ್‌ ಸೋಮವಾರದಿಂದ ಜಾರಿಯಾಗಲಿದೆ. ಈ ಬಾರಿ ಕಟ್ಟುನಿಟ್ಟಾಗಿ ನಿರ್ಬಂಧ ಜಾರಿಗೆ ಸಿದ್ಧತೆ ನಡೆದಿದೆ.

ವಾಹನದಲ್ಲಿ ಓಡಾಡಬೇಡಿ
ಬೆಳಗ್ಗೆ 6ರಿಂದ 10ರ ವರೆಗೆ ಆವಶ್ಯಕ ವಸ್ತು ಖರೀದಿಸಲು ಕೂಡ ವಾಹನದಲ್ಲಿ ಹೋಗುವಂತಿಲ್ಲ. ಈ ಕುರಿತು ಪೊಲೀಸ್‌ ಇಲಾಖೆ ಪ್ರಕಟನೆ ಹೊರಡಿಸಿದ್ದು, ಕಟ್ಟುನಿಟ್ಟು ಪಾಲನೆಗೆ ಸೂಚನೆ ನೀಡಿದೆ.

ಅನಿವಾರ್ಯಕ್ಕಷ್ಟೇ ವಾಹನ
ದಕ್ಷಿಣ ಕನ್ನಡದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9ರ ವರೆಗೆ ಅವಕಾಶವಿದೆ. ಆ ಅವಧಿಯಲ್ಲಿ ಹತ್ತಿರದ ಅಂಗಡಿಗಳಿಂದ ಸಾಮಗ್ರಿ ಖರೀದಿಸಿ. ಅನಿವಾರ್ಯವಾದರೆ ಮಾತ್ರ ವಾಹನ ಬಳಸಿ ಎಂದು ಪೊಲೀಸರು ಹೇಳಿದ್ದಾರೆ.

ಉಡುಪಿ: ಕಟ್ಟುನಿಟ್ಟು
ಉಡುಪಿ ಜಿಲ್ಲೆಯಲ್ಲಿ ಕಠಿನ ಲಾಕ್‌ಡೌನ್‌ ಜಾರಿಯಾಗಲಿದೆ. 32 ಕಡೆ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

Advertisement

ಆಯ್ದ ಕೈಗಾರಿಕೆಗಷ್ಟೇ ಅನುಮತಿ
ಅಗತ್ಯ ವಸ್ತುಗಳ ಖರೀದಿ ಸಹಿತ ಅತ್ಯಾವಶ್ಯಕ ಚಟುವಟಿಕೆಗಳಿಗೆ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಅವಕಾಶ. ಬಳಿಕ ಆಯ್ದ ಕಚೇರಿ, ಕೈಗಾರಿಕೆ, ಗುರುತಿಸಲಾದ ಚಟುವಟಿಕೆ ಮತ್ತು ತುರ್ತು- ಆರೋಗ್ಯ ಸೇವೆಗೆ ಸಂಚಾರ ವಿನಾ ಅನಗತ್ಯವಾಗಿ ರಸ್ತೆಗಿಳಿದರೆ ಬಿಗಿ ಕ್ರಮ ಕೈಗೊಳ್ಳಲು ಪೊಲೀಸ್‌ ಪಡೆ ಸಜ್ಜಾಗಿದೆ. ಅಂಥವರಿಗೆ ಲಾಠಿ ರುಚಿ ತೋರಿಸುವ ಜತೆಗೆ ವಾಹನ ಜಪ್ತಿ, ಬಂಧನ, ಪ್ರಕರಣ ದಾಖಲಿಸಲು ಪೊಲೀಸ್‌ ಇಲಾಖೆ ಸಿದ್ಧವಾಗಿದೆ.

ಮಾಧ್ಯಮಗಳಿಗೆ ಅಡ್ಡಿ ಇಲ್ಲ
ಆವಶ್ಯಕ ಸೇವೆಯಡಿ ಬರುವ ಮುದ್ರಣ- ದೃಶ್ಯ ಮಾಧ್ಯಮ ಸಿಬಂದಿಯ ಸಂಚಾರ, ದಿನಪತ್ರಿಕೆ ಸರಬರಾಜು, ವಿತರಣೆಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಎಂಎಸ್‌ ಕಡ್ಡಾಯ
ಇಂದಿನಿಂದ 18ರಿಂದ 44 ವಯಸ್ಸಿ ನವರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯಲು ತೆರಳುವವರು ಸಂಬಂಧಿತ ಎಸ್‌ಎಂಎಸ್‌ ತೋರಿಸಬೇಕು. ಬಳಿಕ ಪೊಲೀಸರು ಲಸಿಕೆ ಕೇಂದ್ರಗಳಿಗೆ ತೆರಳಲು ಅನುಮತಿ ನೀಡುತ್ತಾರೆ.

ಹೆಚ್ಚು ಆಮ್ಲಜನಕಕ್ಕೆ ಪ್ರಧಾನಿಗೆ ಮನವಿ
ರಾಜ್ಯಕ್ಕೆ ಅಗತ್ಯ ಆಮ್ಲಜನಕ ಮತ್ತು ರೆಮಿಡಿಸಿವಿರ್‌ ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ರಾಜ್ಯದ ಕೊರೊನಾ ಸ್ಥಿತಿ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಯವರು ಸಿಎಂ ಅವರೊಂದಿಗೆ ರವಿವಾರ ಸಮಾಲೋಚನೆ ನಡೆಸಿದ್ದಾರೆ. ರಾಜ್ಯದಲ್ಲಿ ರೆಮಿಡಿಸಿವಿರ್‌ ಕೊರತೆ ಇದೆ. ಹೀಗಾಗಿ ರಾಜ್ಯಕ್ಕೆ ಹೆಚ್ಚು ನೀಡುವಂತೆ ಸಿಎಂ ವಿನಂತಿಸಿದ್ದಾರೆ.

ಮೊದಲ ಡೋಸ್‌ ಲಸಿಕೆ ನೀಡಲು ಸಮಸ್ಯೆ ಇಲ್ಲ. 18-44 ವರ್ಷದವರಿಗಾಗಿ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದೇವೆ. ಕೇಂದ್ರದ ಸಹಕಾರ ಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಎಲ್ಲರ ಸುರಕ್ಷೆಯ ದೃಷ್ಟಿಯಿಂದ ಈ ಲಾಕ್‌ಡೌನ್‌ ಗಂಭೀರ ವಾಗಿ ಪರಿಗಣಿಸಿ. ಇಲ್ಲದಿದ್ದರೆ ಮುಂದಿನ 2 ವಾರ ನಿಮ್ಮ ವಾಹನ ನಮ್ಮ ವಶ ದಲ್ಲಿರ ಬೇಕಾಗುತ್ತದೆ. ಆಯ್ಕೆ ನಿಮ್ಮದು.
– ಪ್ರವೀಣ್‌ ಸೂದ್‌, ರಾಜ್ಯ ಡಿಜಿಪಿ

ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗು ತ್ತದೆ. ಯಾವುದೇ ವಿನಾಯಿತಿ ಇಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ, ಮಲೆನಾಡು ಮತ್ತಿತರ ಪ್ರದೇಶಗಳಲ್ಲಿ ಮನೆ ಗಳಿಗೂ ಅಂಗಡಿಗಳಿಗೂ ಕಿ.ಮೀ.ಗಟ್ಟಲೆ ದೂರ ಇರುತ್ತದೆ. ಹೀಗಾಗಿ ಅಲ್ಲಿ ಜಿಲ್ಲಾಧಿ ಕಾರಿ ಗಳ ಸೂಚನೆಯಂತೆ ಲಾಕ್‌ಡೌನ್‌ ನಿಯಮ ಪಾಲನೆಯಾಗಲಿದೆ.
– ಪ್ರತಾಪ್‌ ರೆಡ್ಡಿ , ಎಡಿಜಿಪಿ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next