Advertisement
ಆರೋಗ್ಯ ಸಚಿವ ಡಾ| ಸುಧಾಕರ್ ಅವರೇ ಕರ್ಫ್ಯೂವಿನಿಂದ ಪ್ರಯೋಜನವಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸೂಕ್ತ ಎಂದಿದ್ದಾರೆ. ಹೀಗಾಗಿ ಸರಕಾರ ಸಂಪೂರ್ಣ ಲಾಕ್‌ಡೌನ್ ಮಾಡಲು ಚಿಂತನೆ ನಡೆಸುತ್ತಿದೆ.
Related Articles
Advertisement
ಲಾಕ್‌ಡೌನ್ ಮಾಡಲಿ :
ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದು, ಜೀವ ಉಳಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಇಂದು ಸಿಎಂ ಸಭೆ :
ಶುಕ್ರವಾರ ಬೆಂಗಳೂರು ವಲಯ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಲು ಸಿಎಂ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.
ಇನ್ನೆರಡು ವಾರ ಬಂದ್ ಮಾಡಿ :
ರಾಜ್ಯದಲ್ಲಿ ಮೇ ಮಧ್ಯದ ವೇಳೆಗೆ ಸೋಂಕು ಸಂಖ್ಯೆ 5 ಲಕ್ಷದ ಸನಿಹಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಹೇಳಿದೆ. ಮುಂದಿನ ಎರಡು ವಾರ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಬೇಕು ಎಂದೂ ಸಲಹೆ ನೀಡಿದೆ.
ಕೇರಳ, ಮಧ್ಯಪ್ರದೇಶ ಲಾಕ್ :
ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆ ಕೇರಳ ಮತ್ತು ಮಧ್ಯಪ್ರದೇಶ ಲಾಕ್‌ಡೌನ್ ಘೋಷಿಸಿವೆ.
ಪರೀಕ್ಷೆ ವೇಳೆ ಮಾತ್ರೆ :
ಕೋವಿಡ್ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಪರೀಕ್ಷೆಗೆ ಹಾಜರಾದ ಸಂರ್ಭದಲ್ಲಿ ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಸೋಂಕು ಪರೀಕ್ಷೆಗೆ ಬಂದವರ ಪೈಕಿ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಸೋಂಕುಪೀಡಿತರ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ಥಳದಲ್ಲಿಯೇ ಮಾತ್ರೆ ನೀಡಬೇಕು. ಅನಂತರ ಸೋಂಕು ದೃಢಪಟ್ಟರೆ ಸರಕಾರದ ಚಿಕಿತ್ಸಾ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಸೂಚಿಸಿದೆ. ಈ ಬಗ್ಗೆ ಪ್ರಯೋಗಾಲಯಗಳು ವೈದ್ಯರ ಸಲಹೆ ಸ್ವೀಕರಿಸಬೇಕು ಎಂದಿದೆ.
ಮಾತ್ರೆಗಳ ವಿವರ: (ಮೂರು ದಿನ)
ಇವೆರ್ಮೆಕ್ಟಿನ್ 12 ಎಂಜಿ ದಿನಕ್ಕೆ ಒಂದು
(ಖಾಲಿ ಹೊಟ್ಟೆಯಲ್ಲಿ )
ವಿಟಿಮಿನ್ ಸಿ 500 ಎಂಜಿ – ದಿನಕ್ಕೆ ಒಂದು
ಜಿಂಕ್ 50 ಎಂಜಿ – ದಿನಕ್ಕೆ ಒಂದು
ರಾಜ್ಯದಲ್ಲಿ ಬಿಗಿ ನಿರ್ಬಂಧಗಳ ಆವಶ್ಯಕತೆ ಇದೆ. ಕಾಮಗಾರಿ ಚಟುವಟಿಕೆಗಳಿಗೆ ಬಿಟ್ಟು ಮಿಕ್ಕ ಎಲ್ಲವನ್ನೂ ಬಂದ್ ಮಾಡಿದರೆ ಉತ್ತಮ. – ಡಾ| ಸಿ.ಎನ್. ಮಂಜುನಾಥ್ ತಜ್ಞರ ಸಲಹಾ ಸಮಿತಿ ಸದಸ್ಯ
ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆ, ಆಮ್ಲಜನಕ ಕೊರತೆ, ಹಾಸಿಗೆ ಸಮಸ್ಯೆ ನೋಡಿದರೆ ಲಾಕ್‌ಡೌನ್ ಅಗತ್ಯವಿದೆ. ವೈದ್ಯಕೀಯ ಸೌಲಭ್ಯಗಳನ್ನು ಉತ್ತಮ ಪಡಿಸಿಕೊಳ್ಳಲು ಮತ್ತು ಸೋಂಕಿನ ತೀವ್ರತೆ ಇಳಿಸಲು ಅದರಿಂದ ಸಹಾಯವಾಗಲಿದೆ.– ಡಾ| ನಾಗೇಂದ್ರ ಸ್ವಾಮಿಮುಖ್ಯ ಸಂಚಾಲಕರು, ಆಸ್ಪತ್ರೆ ಸಮೂಹ ಸಂಸ್ಥೆ ಒಕ್ಕೂಟ, ಕರ್ನಾಟಕ(ಎಫ್ಎಚ್‌ಎ)
ಲಾಕ್‌ಡೌನ್ ವಿಚಾರದಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರಕಾರವು ತಜ್ಞರ ಸಲಹೆ ಪಾಲಿಸಲಿ. ನಾವು ಅದರ ಪರ ಅಥವಾ ವಿರೋಧ ಎಂದಿಲ್ಲ. ಕೋವಿಡ್ ನಿಯಂತ್ರಣ ಮುಖ್ಯ. – ಸಿದ್ದರಾಮಯ್ಯ, ವಿಪಕ್ಷ ನಾಯಕ